
ASIA CUP Series ಪ್ರಾರಂಭವಾದ ದಿನದಿಂದಲೂ ವಿವಾದ ಕೇಂದ್ರ ಬಿಂದುವಾಗಿದೆ. ಒಂದು ಕಡೆ ಕಣಿವೆ ರಾಜ್ಯದ ( ಜಮ್ಮು ಕಾಶ್ಮೀರ )ದ ಪಹಲ್ಗಾಂ ನಲ್ಲಿ ಪ್ರವಾಸಿಗರ ಮೇಲೆ ದಾಳಿಯಾಗಿ 26 ಮಂದಿಯನ್ನು ಪಾಕ್ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆಂದು ಕೇಂದ್ರ ಸರ್ಕಾರ ಹೇಳಿತು.ದುರಂತವೆಂದರೇ ವಿದೇಶ ಪ್ರವಾಸದಲ್ಲಿದ್ದ ಮೋದಿ, ಭಾರತಕ್ಕೆ ಮರಳಿದ ಕೂಡಲೇ, ಭಯೋತ್ಪಾದಕರು ದಾಳಿ ನಡೆಸಿದ ಪಹಲ್ಗಾಂ ಗೆ ತೆರಳದೆ, ಹತ್ಯೆಗೀಡಾದ ಕುಟುಂಬದವರ ಮನೆಗೆ ಭೇಟಿ ನೀಡದೆ ಹಾಗೂ ಸಾಂತ್ವನ ಹೇಳದೆ ಸೌಜನ್ಯ ತೊರದ, ಪ್ರಧಾನಿ. ಯಾವುದೇ ಬೇಸರವಿಲ್ಲದೆ, ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳದೆ ನೇರವಾಗಿ ಬಿಹಾರಕ್ಕೆ ತೆರಳಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಭ್ರಷ್ಟ ಹಾಗೂ ದರ್ಬಲ ಸಿಎಂ ನಿತೀಶ್ ಕುಮಾರ್ ಜೊತೆ ಅಳುಕಿಲ್ಲದೆ ವೇದಿಕಯೆಲ್ಲೇ ನುಗು ನಗುತ್ತಾ ಪ್ರಚಾರದಲ್ಲಿ ಮಗ್ನರಾಗುತ್ತಾರೆ.

ʼಆಪರೇಷನ್ ಸಿಂಧೂರ್ ʼ ಪ್ರಚಾರಕ್ಕೆ ಬಳಕೆ – ಭಯೋತ್ಪಾದಕರ ರಕ್ಷಣೆ – ಸೇನೆಗೆ ಅಪಮಾನ !
ಪೆಹಲ್ಗಾಂ ದಾಳಿಯಾದ ನಂತರ ಆಪರೇಷನ್ ಸಂಧೂರ್ ಹೆಸರಿನಲ್ಲಿ ಭಯೋತ್ಪಾದಕರನ್ನು ಸದೆಬಡೆಯುವ ನಾಟಕವಾಡಿ, ಪಾಕ್ ಜೊತೆ ಒಪ್ಪಂದ ಮಾಡಿಕೊಂಡವರಂತೆವರ್ತಿಸಿದ್ದು ಇದೇಸಂಘಪರಿವಾರದಿಂದ ಬಂದಿರುವ ಮೋದಿ, ಅಮಿತ್ ಶಾ ಸೇರಿದಂತೆ ಇತರೆ ದುರ್ಬಲ ಸಚಿವರಗಳನ್ನು ಒಳಗೊಂಡ ಬದ್ದತೆ ಹೊಂದಿಲ್ಲದ ಸರ್ಕಾರವಿದು.
ದಾಳಿಯಾಗಿ ಇಷ್ಟು ದಿನಗಳು ಕಳೆದರು, ನಿಜವಾದ ಹಂತಕರನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದೆ ಕೇಂದ್ರ ಸರ್ಕಾರ, ಹಾಗೂ ಗುಪ್ತಚರ ಇಲಾಖೆ. ಆಪರೇಷನ್ ಸಿಂಧೂರ್ ಕೇವಲ ಬಿಹಾರ ಚುನವಾಣೆಯ ಗಿಮಿಕ್ ಅಷ್ಟೇ !, ಕಾರಣ ಸೇನೆಗೆ ಮುಕ್ತವಾದ ಸ್ವಾತಂತ್ರ್ಯವನ್ನು ನೀಡದೆ, ಮೇಲಿಂದ ಮೇಲೆ ನಿರ್ಧಿಷ್ಠ ನಿರ್ದೇಶನಗಳನ್ನು ಕೇಂದ್ರ ಸರ್ಕಾರವು ಸೇನೆಗೆ ರವಾನಿಸುತಿತ್ತರಿಂದಲೇ ಭಾರತೀಯ ಸೇನೆಯೂ ಸ್ವಾತಂತ್ರ್ಯವಾಗಿ ಸೂಕ್ತವಾದ ಮತ್ತು ಪ್ರಭಲವಾದ ನಿರ್ಧಾರಗಳನ್ನು ತೆಗೆದುಕೊಳ್ಳು ಸಾಧ್ಯವಾಗಲಿಲ್ಲದ ಕಾರಣದಿಂದಲೇ ಆಪರೇಷನ್ ಸಿಂಧೂರ್ ಕೇವಲ ಬಿಜೆಪಿಯ ಚುನವಾಣಾ ಪ್ರಚಾರದ ಗಿಮಿಕ್ಕಾಗಿ ಕಂಡುಬರುತ್ತದೆ.
ಇನ್ನೊಂದು ಪ್ರಮುಖ ಕಾರಣವೆಂದರೆ ಭಾರತ ಕೇಂದ್ರ ಸರ್ಕಾರ ರಾಷ್ಟ್ರಿಯ ಭದ್ರತೆ ವಿಚಾರವಾಗಿ ಹಸ್ತಕ್ಷೇಪ ನಡೆಸಿದಲ್ಲದೆ, ಸಂಸತ್ ನಲ್ಲಿ ಕೇಂದ್ರ ಸರ್ಕಾರ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷ, ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಪರೇಷನ್ ಸಿಂಧೂರ ಕುರಿತು ಸಂಸತ್‌ನಲ್ಲಿ ವಿಶೇಷ ಅಧಿವೇಶನವನ್ನು ನಡೆಸಬೇಕೆಂದು ಒತ್ತಾಯಿಸಿದರು ಕೂಡ, ಲಜ್ಜೆಗೆಟ್ಟ ಸರ್ಕಾರ ಈ ಬಗ್ಗೆ ತುರ್ತಾಗಿ ಸಭೆಯನ್ನು ನಡೆಸದೆ, ತಲೆ ಮರಿಸಿಕೊಂಡು ನೆಪಒಡ್ಡಿ ಪಾರದರ್ಶಕತೆಯನ್ನು ತೊರದೆ, ದೇಶದ ಜನರಿಗೆ ವಂಚಿಸಿದ ನಡೆ ಸರಿಯೇ?

ವಿಪಕ್ಷಗಳ ನಾಯಕ ರಾಹುಲ್ ಗಾಂಧಿ ಆಪರೇಷನ್ ಸಿಂಧೂರ ಬಗ್ಗೆ ಸಂಸತ್ ನಲ್ಲಿ ಪ್ರತಿ ಒಂದು ವಿಚಾರವನ್ನು ಪಾಯಿಂಟ್ ಬೈ ಪಾಯಿಂಟ್ ವಿವರಣೆಯನ್ನು ನೀಡುತ್ತಿದ್ದರೆ, ಅತ್ತ ಆಡಳಿತ ಪಕ್ಷದ ನಾಯಕರು ಯಾವುದೇ ಪ್ರತಿಕ್ರಿಯೆ ನೀಡದೆ, ಇದು ಸುಳ್ಳು ಎಂದು ಬಾಯಿ ಮಾತಿಗೂ ಹೇಳದೆ ಬೊಂಬೆಗಳ ರೀತಿ ಕುಳಿತ್ತದ ಪರಿಯೇ ಅವರನ್ನು ಧೋಷಿಗಳೆಂದು ಸಾಬೀತು ಪಡೆಸಿದೆ. ಈ ಮೂಲಕರಾಹುಲ್ ಗಾಂಧಿ ಅವರಿಗೆ ಬಂದ ಮಾಹಿತಿ ನಿಖರವಾಗಿತ್ತೆಂದು ದೇಶದ ಜನರಿಗೆ ಆರ್ಥ ಮಾಡಿಸುವಲ್ಲಿ ಸಫಲರಾದರು.

ಒಂದು ಕಡೆ ವಿದೇಶಾಂಗ ಸಚಿವರು ಪಾಕ್ ರಾಷ್ಟ್ರದ ಸರ್ಕಾರಕ್ಕೆ ಮತ್ತು ಸೇನೆಗೆ ದಾಳಿಯ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ಇದನ್ನು ಪಾಕ್ ಸರ್ಕಾರ ತಳ್ಳಿಹಾಕದೆ, ನೇರವಾಗಿ ಭಾರತದ ವಿದೇಶಾಂಗ ಸಚಿವರು ದಾಳಿಗೂ ಮುನ್ನ ನಮಗೆ ಎಲ್ಲಾ ಮಾಹಿತಿಯನ್ನು ನೀಡಿರುತ್ತಾರೆಂದು ಬಹಳ ಸ್ಪಷ್ಟವಾಗಿ, ಈ ವಿಷಯವನ್ನು ಇಡೀ ವಿಶ್ವದ ಎದುರು ಬಹಿರಂಗ ಪಡೆಸಿದ್ದಾರೆ.
ಭಾರತದ ವಿದೇಶಾಂಗ ಸಚಿವರು ಪಾಕ್ ಸೈನ್ಯಕ್ಕೆ ಕರೆ ಮಾಡಿ ನಿಮ್ಮ ನೆಲದ ಯಾವುದೇ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ಮಾಡುವುದಿಲ್ಲವೆಂಬ ವಿಚಾರವನ್ನು ಖುದ್ದು ಜೈಶಂಕರ್ ತಿಳಿಸುತ್ತಾರೆ. ಇದೊಂದು ಸುಳ್ಳು, ಕೇವಲ ಕಾಂಗ್ರೆಸ್ ಮಾಡುವ ಆರೋಪವೆಂದು ಸಹ ತಳ್ಳಿಹಾಕುವುದಿಲ್ಲವೆಂದರೆ, ಕಾಂಗ್ರೆಸ್ ಪಕ್ಷದ ನಾಯಕರು ಈವರೆಗೂ ಆಪರೇಷನ್ ಸಿಂಧೂರ್ ಬಗ್ಗೆ ಕಳೆಹಾಕಿರುವ ಮಾಹಿತಿ ಮತ್ತು ಸಂಸತ್‌ನಲ್ಲಿ ಸಂಸದರು ಆಡಿರುವ ಮಾತುಗಳಲ್ಲೇವು ಸತ್ಯವೆಂದು ದಾಖಲಾದ ಮೇಲೂ, ಜೈಶಂಕರ್ ಅವರನ್ನು ಸಚಿವರನ್ನಾಗಿ ಮುಂದುವರೆಸುತ್ತಿರುವುದು ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಂತಲ್ಲವೇ?

ಒಂದು ಕಡೆ ಸರ್ಕಾರ ಪದೆ ಪದೆ ಹೇಳುತ್ತದೆ ಆಪರೇಷನ್ ಸಿಂಧೂರ್ ಭಾರತಯ ಜಯವೆಂದು ಹೇಳುತ್ತಿದ್ದರೆ. ಸೇನೆಯ ಅಧಿಕಾರಿಗಳು ಮಾತ್ರ ಪ್ರತಿಕಾಗೋಷ್ಟಿಯಲ್ಲಿ ಯೋಧರು ದಾಳಿಯಲ್ಲಿ ಮೃತರಾಗಿದ್ದಾರೆ, ಹಾಗೂ ಭಾರತದ ಗಡಿಯ ಮೇಲೆ ದಾಳಿಗಳಾಗಿದ್ದು, ನಿವಾಸಿಗಳ ಮನೆಗಳ ಮೇಲೆ ದಾಳಿಯ ಪರಿಣಾಮ, ಆಸ್ತಿ ಪಾಸ್ತಿ ಜೊತೆ ಕುಟುಂಬಗಳು ಸಾವನ್ನಪ್ಪಿರುವ ಬಗ್ಗೆ ಹಾಗೂ ಭಾರತ ಯುಧ್ದ ವಿಮಾನಗಳು ಸಹ ದಾಳಿಯಲ್ಲಿ ನಾಶವಾಗಿರುವ ಬಗ್ಗೆ ಮತ್ತು ಕೇಂದ್ರ ಸರ್ಕಾರ ಹಸ್ತಕ್ಷೇಪ ಈ ಎಲ್ಲದರ ಮಾಹಿತಿಯನ್ನು ಸೇನೆ ಮುಚ್ಚಿಡದೆ ಬಹಿರಂಗ ಪಡೆಸುವ ಮೂಲಕ ಬದ್ದತೆಯನ್ನು ತೊರಿರುವ ಜೊತೆಗೆ ಕೇಂದ್ರವು ನಡೆಸುತ್ತಿರುವ ಹುನ್ನಾರಗಳನ್ನು ಬಯಲು ಮಾಡಿದ್ದಾರೆ.

ಇತ್ತ ಅಮೇರಿಕಾದ ಟ್ರಂಪ್ ಭಾರತ-ಮತ್ತು ಪಾಕ್ ಯುದ್ಧವನ್ನು ನಿಲ್ಲಿಸಿರುವುದು ನಾನೆಂದು ಹೋದಲ್ಲಿ ಬಂದಲ್ಲಿ ಹೇಳಿತ್ತಿದ್ದರೂ ಸಹ, ಇದೇ ವಿದೇಶಾಂಗ ಸಚಿವರು ಹಾಗೂ ಸಚಿವಾಲಯ ಟ್ರಂಪ್ ಹೇಳುತ್ತಿರುವುದು ಸರಿಯಲ್ಲ, ಅದು ಸುಳ್ಳೆಂದು ಸಹ ಹೇಳುತ್ತಿಲ್ಲವೇಕೆ? ಈ ಮೌನದ ಹಿಂದೆ ಸತ್ಯ ಅಡಗಿದೆ ಎಂದಾಯಿತಲ್ಲವೇ!
ವಾವಾ ಅಮಿತ್ ಶಾ, ಮೋದಿ !
ಏನ್ ಹೇಳಬೇಕು?, ಇವರ ನೀಚ ರಾಜಕೀಯದ ನಡೆಗಳ ಬಗ್ಗೆ ? ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ, ಯುದ್ಧ ಹಾಗೂ ಕ್ರೀಡೆ ಒಟ್ಟಿಗೆ ಸಾಧ್ಯವಿಲ್ಲವೆಂದು ಹೇಳಿದ್ದು ಯಾಕೆ? ಅಮಿತ್ ಶಾ ಪುತ್ರ ಜೇಯ್ ಷಾ ICC ಅಧ್ಯಕ್ಷ ! ಆದರೂ ಬಿಜೆಪಿ ಸಂಘಪರಿವಾರ ಕುಟುಂಬ ರಾಜಕಾರಣದ ವಿರುದ್ಧ !

ಜೇಯ್ ಷಾ ಐಸಿಸಿ ಅಧ್ಯಕ್ಷರಾಗಿ ನೇಮಕಕೊಂಡ ಬಳಿಕ ಏಷ್ಯಾ ಕಪ್ ನಲ್ಲಿ ಭಾರತ ಆಡುವುದಿಲ್ಲವೆಂದು ಹೇಳಬಹುದಿತ್ತು. ಆದರೆ ಆತನಿಗೆ ಹಣ-ಕೀರ್ತಿ ಹೆಸರು ಮಾತ್ರವೇ ಬೇಕಿತ್ತೆ ಹೊರೆತು, ದೇಶ ಪ್ರೇಮ, ಪೆಹಲ್ಗಾಮ್ ದಾಳಿಗೆ ಪ್ರತಿಕಾರ ಇದು ಯಾವುದು ಆತನಿಗೆ ಮುಖ್ಯವಾಗಲೇ ಇಲ್ಲ. ಭಾರತೀಯರ ಮೇಲಾದ ದಾಳಿ ಚುನಾವಣೆಗೆ ರೂಪಿಸಿದ ಕುತಂತ್ರವಷ್ಟೇ ಎಂದು ಇವರ ನಡೆಯಿಂದ ಸಾಭೀತು ಪಡೆಸುತ್ತದೆ.
ಆಮಿತ್ ಶಾ ಈ ದೇಶದ ಗೃಹ ಸಚಿವ, ಆತನ ಮಗ ಐಸಿಸಿ ಅಧ್ಯಕ್ಷ ಇಬ್ಬರೂ ಕೂಡ ಬಹಳ ಪ್ರಭಾವಿಗಳು, ಇಬ್ಬರೂ ಕೂಡ ಸಂಘಪರಿವಾದ ರಕ್ತವನ್ನು ಹಂಚಿಕೊಂಡವರಲ್ಲವೇ !
ಏಷ್ಯಾ ಕಪ್ ನಲ್ಲಿ ಭಾರತ ಭಾಗವಹಿಸಲ್ಲವೆಂದು ಸ್ಪಷ್ಟವಾಗಿ ಹೇಳಬಹುದಿತ್ತಲ್ಲವೇ?, ಮತ್ತು ಏಷ್ಯಾ ಕಪ್ ಸರಣೆಯನ್ನೇ ರದ್ದು ಪಡಿಸಬಹುದಿತ್ತು.

ಆದರೆ, ಇದು ಯಾವುದನ್ನು ಇವರುಗಳು ಮಾಡದೆ, ಭಾರತ ಏಷ್ಯಾ ಕಪ್ ನಲ್ಲಿ ಭಾಗವಹಿಸುವುದಾಗಿ ಬಿಸಿಸಿಐ ತೀರ್ಮಾನಿಸುತ್ತದೆ. ಬಿಸಿಸಿಐ ಅಧ್ಯಕ್ಷರಾಗಿರುವುದು ಇಂಡಿಯಾ ಕ್ರಿಕೆಟ್ ಟೀಂ ನಾ ಮಾಜಿ ನಾಯಕ ಸೌರೋವ್ ಗಂಗೂಲಿ, ಹೀಗಿದ್ದರು ಭಾರತ ಏಷ್ಯಾ ಕಪ್ ಆಡುವುದಿಲ್ಲವೆಂದು ಮುಲಾಜಿಲ್ಲದೆ ಹೇಳಬಹುದಿತ್ತು. ಆದರೆ ಇವರಾರಿಗೂ ಕೂಡ ಪೆಹಲ್ಗಾಂ ದಾಳಿಯಲ್ಲಿ ಮೃತ ಹೊಂದಿದ ಭಾರತೀಯರ ಪ್ರಾಣದ ಬೆಲೆ ಗೊತ್ತಿಲ್ಲ, ಆ ಕುಟುಂಬಸ್ಥರ ನೋವನ್ನು ಆಲಿಸುವ ದೊಡ್ಡ ಮನಸ್ಸು ಈವರಿಗಿಲ್ಲ ಎಂದ ಮೇಲೆ ಈ ಎಲ್ಲರಿಗೂ ಬೇಕಿರುವುದು ಮನ್ನಣೆ- ಕೀರ್ತಿ, ಸ್ಥಾನ-ಮಾನ ಮತ್ತು ಹಣ ಮಾತ್ರವಲ್ಲವೇ?
ಭಾರತದ ಕ್ರೀಕೆಟ್ ತಂಡವು ಏಷ್ಯಾಕಪ್ ಆಡಲು ಶಾರ್ಜಾ ಹಾಗೂ ದುಬೈ ಗೆ ತೆರಳುತ್ತದೆ. ಭಾರತ ಪಾಕ್ ಜೊತೆ ಕ್ರಿಕೆಟ್ ಆಡುತ್ತದೆ. ಪಂದ್ಯ ಆರಂಭಕ್ಕೂ ಮುನ್ನ ಉಭಯ ರಾಷ್ಟ್ರಗಳ ರಾಷ್ಟ್ರಗೀತೆಮೊಳಗುತ್ತದೆ, ಉಭಯ ರಾಷ್ಟ್ರಗಳ ತಂಡದವುರ ರಾಷ್ಟ್ರಗೀತೆಗೆ ಗೌರವ ಸಲ್ಲಿಸುತ್ತಾರೆ, ಟಾಸ್ ಆಗುತ್ತದೆ, ಪಂದ್ಯಾ ನಡೆಯುತ್ತದೆ, ಭಾರತ ಪಾಕ್ ತಂಡವನ್ನು ಸಾಂಪ್ರದಾಯಿಕ ಪಂದ್ಯದಲ್ಲಿ ಮಣಿಸುತ್ತಯಾದರೂ, ಪಾಕ್ ತಂಡದವರನ್ನು ಫೀಲ್ಡ್ ನಲ್ಲಿ ‘Hand Shake ‘, ಮಾಡಲ್ಲ, ಬದಲಿಗೆ Dinner ಸಮಯದಲ್ಲಿ ಎಲ್ಲರೂ ಒಟ್ಟಿಗೆ ಕಾಲ ಕಳೆಯುತ್ತಾರೆ, ನಗುತ್ತಾರೆ, ಖುಷಿಯಿಂದ ಸಹಜವಾಗಿಯೇ ಹಗ್ ಮಾಡುತ್ತಾರೆ. ಇದು ಯಾವುದು ಪ್ರಸಾರವಾಗಲ್ಲ, ಪ್ರಸಾರ ಮಾಡಿದ್ರೆ ಯಾರ ಮಾರ್ಯದೆ ಹೋಗುತ್ತದೆ ಎಂಬ ಇಷ್ಟಾದರು ಪ್ರಜ್ಞೆ ಗೋಧಿ ಮೀಡಿಯಾಗಳಿಗೆ ತಿಳಿದಿದೆ.

ಭಾರತ ಏಷ್ಯಾ ಕಪ್ ಸರಣಿಯಲ್ಲಿ ಪಾಕ್ ತಂಡವನ್ನು 47 ಬಾರಿ ಎದುರಿಸಿದೆ. ಫೈನಲ್ಸ್ ನಲ್ಲಿ ಭಾರತ ಮತ್ತು ಪಾಕ್ ಮುಖಾ-ಮುಖಿಯಾಗುತ್ತದೆ. ಭಾರತ ತಂಡದ ಆಟಗಾರರು ಪಾಕ್ ತಂಡವನ್ನು ಹೆಚ್ಚಿನ ಮೊತ್ತವನ್ನು ತಲುಪದಂತೆ ತಡೆಹಿಡಿಯುವಲ್ಲಿ ಯಶಸ್ವಿಯಾಗುತ್ತದೆ. 146ಕ್ಕೆ ಪಾಕ್ ಆಲೌಟ್ ಆಗುತ್ತೆ.ಭಾರತ ತಂಡದ ಬ್ಯಾಟ್ಸ್ ಮ್ಯಾನ್ ಗಳು ಪಾಕ್ ಬೌರ‍್ಸ್ ಗಳ ಬೆವರಿಳಿಸಿ , 5 ವಿಕಟ್ ಅಂತರದಲ್ಲಿ ಭಾರತ ಪಾಕ್ ತಂಡವನ್ನು ಮಣಿಸುತ್ತದೆ.
ಪಂದ್ಯ ಮುಗಿದ ಬಳಿಕ ಪ್ರಶ್ತಸ್ತಿಯನ್ನು ತಿರಸ್ಕರಿ ಆ ನಂತರ ಪುರಸ್ಕಾರ ನಡೆಯುವ ಸಂದರ್ಭದಲ್ಲಿ ಭಾರತ ಕ್ರಿಕೆಟ್ ಆಟಗಾರರು ನಡೆದುಕೊಂಡ ರೀತಿ ನಿಜಕ್ಕೂ ಬೇಸರ ತರುವಂತಹದ್ದು, ಭಾರತ ದೇಶವು ಸಂಪಾದಿಸಿರುವ ಘನತೆ, ಗೌರವವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಕಾರಣ ಕಪ್ ಗೆದ್ದು, ಕಪ್ ಪಡೆಯುವುದಿಲ್ಲ ಕಾರಣ ಪಾಕ್ ದೇಶದ ಸಚಿವರೊಬ್ಬರು ಪ್ರಶಸ್ತಿ ನೀಡಲು ಮುಂದಾದಾಗ ಭಾರತದ ಆಟಗಾರರ ವರ್ತನೆ ಪ್ರಪಂಚದೆದರು ಇವರುಗಳ ಸಣ್ಣತನದ ಪ್ರದರ್ಶನವು ಬಹಿರಂಗ ಗೊಳ್ಳುತ್ತದೆ.

ದೇಶಭಿಮಾನ ತೊರುವ ಮುನ್ನಾ, ಏಷ್ಯಾಕಪ್ ರದ್ದು ಪಡಿಸಬೇಕಿತ್ತು. ಜೈ ಶಾ ಮತ್ತು ಅವರ ತಂದೆ ಅಮಿತ್ ಶಾ ಸ್ಪಷ್ಟವಾಗಿ-ದೃಢವಾಗಿ, ಏಷ್ಯಾಕಪ್ ನಲ್ಲಿ ಭಾರತ ಆಡುವುದಿಲ್ಲವೆಂದ ಸಂದೇಶ ರವಾನಿಸಿದ್ದರೆ ಇವರುಗಳು ನಿಜವಾದ ದೇಶಪ್ರೇಮಿಗಳೆಂದು ಒಪ್ಪು ಬಹುದಿತ್ತು. ಆದರೆ ಇವರದ್ದು ನಕಲಿ ದೇಶ ಪ್ರೇಮ, ಕಾರಣ ಇವರಿಗೆ ದೇಶವೆಂದರೆ ಕೇವಲ ಪ್ರಚಾರದ ವಸ್ತು, ದೇಶದ ಪ್ರಜೆಗಳೆಂದರೆ ಶ್ರೀಮಂತರು, ಅದರಲ್ಲೂ ಅದಾನಿ, ಅಂಬಾನಿ ಮಾತ್ರ ಇವರಿಗೆ ಮುಖ್ಯವೆಂದು ಸಾಭೀತು ಪಡೆಸುತ್ತಾ ಬಂದಿದ್ದಾರೆ.