ನಟ ಪುನೀತ್ ರಾಜ್‌ಕುಮಾರ್ ನಮ್ಮ ಜೊತೆಯಲ್ಲೇ ಇದ್ದಾರೆ ಎಂಬ ಭಾವನೆಯಲ್ಲಿರುವ ಅಭಿಮಾನಿಗಳಿಗೆ ಅಪ್ಪು ಅವರ ಧರ್ಮಪತ್ನಿ ಅಶ್ವಿನಿ ಅವರು ಸಿಹಿಸುದ್ದಿ ನೀಡಿದ್ದಾರೆ. ಹೌದು ಪುನೀತ್ ರಾಜ್ ಕುಮಾರ್ ಅಭಿನಯದ ಕಡೇ ಚಿತ್ರ ಗಂಧದಗುಡಿ ಡೇಟ್ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವಾ ಅಶ್ವಿನಿ ಪುನೀತ್ ರಾಜ್ ಕುಮಾರ್, ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ ಎಂದಿದ್ದಾರ.

ಟ್ವೀಟ್ ನಲ್ಲಿ ಪೋಸ್ಟರ್ ಕೂಡ ಇದ್ದು ಅದರಲ್ಲಿ, ಗಂಧದಗುಡಿ ಆಕ್ಟೋಬರ್ 28ರಂದು ನಿಮ್ಮ ಮುಂದೆ ಎಂಬ ಸಂದೇಶ ಕೂಡ ಇದ್ದು ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ.