ಬಿಗ್ ಬಾಸ್ ಕನ್ನಡ ಸೀಸನ್ 12( Bigg Boss Kannada ) ಇನ್ನೇನು ಕೆಲವೇ ವಾರಗಳಲ್ಲಿ ಮುಕ್ತಾಯವಾಗಲಿದೆ. ಫಿನಾಲೆ ವಾರ ಹತ್ತಿರವಾಗುತ್ತಿದ್ದಂತೆ ಬಲಿಷ್ಠ ಸ್ಪರ್ಧಿಗಳೇ ಎಲಿಮಿನೇಟ್ ಆಗುತ್ತಿದ್ದು, ಈ ವಾರ ಮನೆಯಿಂದ ಸೂರಜ್ ಸಿಂಗ್ ಹಾಗೂ ಮಾಳು ಹೊರಗೆ ಹೋಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಸೂರಜ್ ಎಲಿಮಿನೇಟ್ ಆಗಿರುವುದನ್ನು ನಿನ್ನೆಯ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದ್ದು, ಮಾಳು ಇಂದಿನ ಸಂಚಿಕೆಯಲ್ಲಿ ಮನೆಯಿಂದ ಹೊರ ಬರಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇನ್ನು ಈ ವಾರ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ವಾರಂತ್ಯದ ಸಂಚಿಕೆ ನಡೆಸಿಕೊಡದ ಕಾರಣ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಬಿಗ್ ಬಾಸ್ ತಂಡ ಒಬ್ಬರಾದ ಮೇಲೆ ಒಬ್ಬರು ಅತಿಥಿಗಳನ್ನು ಮನೆಯೊಳಗೆ ಕಳುಹಿಸುತ್ತಿದ್ದು, ಇಂದು ನಟಿ, ನಿರೂಪಕಿ ಅನುಪಮಾ ಗೌಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ವೇಳೆ ಅನುಪಮಾ ಮನೆಯ ಇತರ ಸ್ಪರ್ಧಿಗಳಿಗೆ ವಿಶೇಷ ಚುಟುವಟಿಕೆ ನೀಡಿದ್ದು, ಒಬ್ಬ ಸ್ಪರ್ಧಿ ಮತ್ತೊಬ್ಬ ಸ್ಪರ್ಧಿಯ ಬಗ್ಗೆ ಮೆಚ್ಚುಗೆಯ ಅಭಿಪ್ರಾಯ ವ್ಯಕ್ತಪಡಿಸಲು ಹೇಳಿದ್ದಾರೆ.

ಈ ವೇಳೆ ಅಶ್ವಿನಿ ಗೌಡ ಅವರು ಮ್ಯೂಟೆಂಟ್ ರಘು ಬಗ್ಗೆ ಮಾತನಾಡಿದ್ದು, ನಾವೀಗ 14ನೇ ವಾರದಲ್ಲಿ ಇದ್ದೇವೆ. ಆವತ್ತು ರಘುನ ಕಂಡೆ, ಇವತ್ತು ಒಂದು ಮಗುನಾ ನೋಡಿದೆ ಎಂದಿದ್ದಾರೆ. ಇನ್ನು ರಘು ಕೂಡ ಅಶ್ವಿನಿ ಗೌಡ ಅವರ ಬಗ್ಗೆ ಮಾತನಾಡಿದ್ದು, ವ್ಯಕ್ತಿಯಾಗಿ ಅಶ್ವಿನಿ ಗೌಡ ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಈ ವೇಳೆ ಗಿಲ್ಲಿ ನಟ ಅಚ್ಚರಿ ವ್ಯಕ್ತಪಡಿಸಿದ್ದು, ನಿಜವಾಗಿಯೂ ಇದು ಸ್ವಯಂವರ ಥರ ಫೀಲ್ ಆಗುತ್ತಿದೆ ಎಂದು ಹೇಳಿದ್ದಾರೆ. ಇಂದಿನ ಸಂಚಿಕೆಯ ಈ ಪ್ರೋಮೋ ಸದ್ಯ ವೈರಲ್ ಆಗುತ್ತಿದೆ.











