ಪರಿಷತ್ ಸದಸ್ಯ ಸಿ.ಟಿ ರವಿ ಬಂಧನದ ಬಳಿಕ ನಂದಗಢ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಠಾಣೆಗೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್ ಅಶೋಕ್, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಸಚಿವರ ಒತ್ತಡದ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ. ಸದನದಲ್ಲಿ ಎಲ್ಲರ ಮುಂದೆ ನಡೆದಿರುವ ಘಟನೆ ಅದು. ಸದಸ್ಯರಿದ್ದರು, ಐಎಎಸ್ ಅಧಿಕಾರಿಗಳಿದ್ರು, ಐಪಿಎಸ್ ಅಧಿಕಾರಿಗಳಿದ್ರು, ಮಾಧ್ಯಮದವರೂ ಇದ್ದರು. ಅದು ಹೇಗೆ ಸೆಕ್ಸುಯಲ್ ಹೆರಾಸ್ಮೆಂಟ್ ಆಗುತ್ತೆ..? ಹಾಗಿದ್ರೆ ಸಭಾಪತಿಗಳಿಗೆ ಹೇಳಿ ಸಸ್ಪೆಂಡ್ ಮಾಡಿಸಬಹುದಿತ್ತು ಎಂದಿದ್ದಾರೆ.
ಸಭಾಪತಿಗಳು ಕಂಪ್ಲೇಂಟ್ ತೆಗೆದುಕೊಂಡು ವಿಚಾರಿಸಿದ್ದಾರೆ. ಯಾವುದೇ ಸಾಕ್ಷೀ ಇಲ್ಲದ ಹಿನ್ನೆಲೆ ಅವರು ಪ್ರಕರಣ ಕೈ ಬಿಟ್ಟಿದ್ದಾರೆ. ವಿಧಾನ ಸೌಧದಲ್ಲಿ ನಡೆದ ಘಟನೆ ಅದು. ಯಾಕೆ ಕೇಸ್ ಹಾಕಿ ಇಲ್ಲಿಗೆ ಕರೆದುಕೊಂಡು ಬರಬೇಕಿತ್ತು. ಅದು ಖಾನಾಪುರಕ್ಕೆ ಕರೆತಂದಿದ್ದಾರೆ. ಅಡ್ವಕೇಟ್ ಭೇಟಿಗೂ ಬಿಟ್ಟಿಲ್ಲ, ಹೇಗೆ ಬಿಡಲ್ಲ ನೋಡ್ತೇನೆ, ಲೀಗಲ್ ಆಗಿ ನಾವು ಪೈಟ್ ಮಾಡ್ತೇವೆ ಎಂದಿದ್ದಾರೆ. ಕೇಸ್ ಹಾಕಿರೋದ್ರಲ್ಲಿ ಸಚಿವರ ಒತ್ತಡ ಇದರಲ್ಲಿದೆ. ಇದು ಜನತೆಗು ಜಗಜ್ಜಾಹೀರಾಗಿರೋದು. ಇದರಲ್ಲಿ ರಾಜಕೀಯ ಷಡ್ಯಂತ್ರ ಇದೆ ಎಂದು ವಕೀಲರನ್ನ ಠಾಣೆ ಒಳಗೆ ಕರೆದೋಗಿದ್ದಾರೆ ವಿಪಕ್ಷ ನಾಯಕ ಆರ್ ಅಶೋಕ್.
ಪರಿಷತ್ನಲ್ಲಿ ಆದ ಘಟನೆ ಬಗ್ಗೆ ಬಸವರಾಜ ಹೊರಟ್ಟಿ ಅವರು ವಿಚಾರಣೆ ಮಾಡಿದ್ರು. ಸಾಕ್ಷೀ ಇಲ್ಲದ ಕಾರಣಕ್ಕೆ ಹೊಂದಾಣಿಕೆ ಮಾಡ್ಕೊಂಡ್ ಹೋಗಿ ಎಂದಿದ್ರು. ಗೂಂಡಾಗಿರಿ ಮಾಡಿ ಸಿಟಿ ರವಿ ಮೇಲೆ ಅಟ್ಯಾಕ್ ಮಾಡಿದ್ರು. ಕತ್ತರಿಸಿ ಕತ್ತರಿಸಿ ಹಾಕ್ತೇವೆ ಎಂದು ಬೆದರಿಕೆ ಹಾಕಿದ್ರು. ಹೀಗಾಗಿ ಸಭಾಪತಿ ಹೊರಟ್ಟಿ ಅವರು ಪೊಲೀಸರಿಗೆ ಕರೆದು, ಸಿಟಿ ರವಿಯನ್ನ ಸುರಕ್ಷಿತವಾಗಿ ಕರೆದೊಯ್ಯುವಂತೆ ಹೇಳಿದ್ರು. ಈಗ ಜನಪ್ರತಿನಿಧಿ ನ್ಯಾಯಾಲಯಕ್ಕೆ ಕರೆದುಕೊಂಡಿ ಹೋಗ್ತಾರಂತೆ ಸಿಟಿ ರವಿ ಕೂಡ ಕಂಪ್ಲೇಂಟ್ ಕೊಡ್ತಿದ್ದಾರೆ. ಅವರ ಕಂಪ್ಲೇಂಟ್ ಪ್ರೊಸೆಸ್ ಮುಗಿದ ಮೇಲೆ ಬೆಂಗಳೂರಿಗೆ ಕರೆದೊಯ್ಯುತ್ತಾರೆ ಎಂದಿದ್ದಾರೆ.