ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಜೈ ಪ್ಯಾಲೆಸ್ತೀನ್ (Palastene)|ಎಂದು ಘೋಷಣೆ ಕೂಗಿದ್ದ ಅಸಾದುದ್ದೀನ್ ಒವೈಸಿ (OYC) ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಸಂಸದ ಒವೈಸಿಯ ದೆಹಲಿ ಮನೆ ಮೇಲೆ ಕಪ್ಪು ಮಸಿ ಎಸೆದಿರುವ ಘಟನೆ ತಡರಾತ್ರಿ ನಡೆದಿದೆ.
![](https://pratidhvani.com/wp-content/uploads/2024/06/IMG_8423-2.jpeg)
ದೆಹಲಿಯ (Delhi) ಅಶೋಕ ರಸ್ತೆಯಲ್ಲಿರುವ ಸಂಸದರ ಮನೆ ಬಳಿ ಬಂದಿದ್ದ ಇಬ್ಬರು ಈ ಕೃತ್ಯ ಎಸಗಿದ್ದಾರೆ. ಈ ಘಟನೆಯ ಬಳಿಕ ದೆಹಲಿ ಪೊಲೀಸರೇ ಎದುರು ನಿಂತು ಶಾಯಿಯನ್ನು ನೀರಿನಿಂದ ಸ್ವಚ್ಛಗೊಳಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಅಸಾದುದ್ದೀನ್ ಒವೈಸಿ ವಿಡಿಯೋ ಹಂಚಿಕೊಂಡಿದ್ದಾರೆ.
ಕೆಲವು ಅಪರಿಚಿತ ದುಷ್ಕರ್ಮಿಗಳು ನನ್ನ ಮನೆಯ ಮೇಲೆ ಕಪ್ಪು ಶಾಯಿಯಿಂದ ದಾಳಿ ಮಾಡಿದ್ದಾರೆ. ನನ್ನ ದೆಹಲಿ ನಿವಾಸವನ್ನು ಎಷ್ಟು ಬಾರಿ ದಾಳಿ ಮಾಡಿದ್ದಾರೆಂಬ ಲೆಕ್ಕವನ್ನೇ ನಾನು ಕಳೆದುಕೊಂಡಿದ್ದೇನೆ ಎಂದು ಘಟನೆಯನ್ನು ಖಂಡಿಸಿದ್ದಾರೆ.