ಉತ್ತರ ಪ್ರದೇಶದ ಮೀರತ್ನ ಕಿಥೌರ್ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ಹೊರಟಿದ್ದ ಸಂಸದ ಅಸಾದುದ್ದೀನ ಓವೈಸಿ ಕಾರಿ ನ ಮೇಲೆ ಗುಂಡಿನ ದಾಳಿ ನಡೆದಿದೆ.
ಉತ್ತರ ಪ್ರದೇಶದ ಮಿರತ್ ಬಳಿಯ ಛಗರ್ಸಿ ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿದೆ. ವಾಹನದ ಮೇಲೆ 3-4 ಸುತ್ತು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಸಾದುದ್ದೀನ್ 3-4 ಜನರಿದ್ದ ತಂಡವು ಏಕಾಏಕಿ ನನ್ನ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನಾನು ಬೇರೆ ಕಾರಿನಲ್ಲಿ ಅಲ್ಲಿಂದ ಹೊರಟೆ ಎಂದಿದ್ದಾರೆ.