• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

CM Siddaramaiah: KPCL ಅಧ್ಯಕ್ಷನಾಗಿ ನಾನೂ ಕೂಡ KPCL ನೌಕರರಲ್ಲಿ ಒಬ್ಬನಾಗಿದ್ದೀನಿ: ಸಿ.ಎಂ

ಪ್ರತಿಧ್ವನಿ by ಪ್ರತಿಧ್ವನಿ
July 23, 2025
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
Share on WhatsAppShare on FacebookShare on Telegram

ವಿದ್ಯುತ್ ಉತ್ಪಾದನೆಯಲ್ಲಿ ನಾವು ಸ್ವಾವಲಂಭಿಯಾಗಲು KPCL ನೌಕರರ ಶ್ರಮ ಕಾರಣ: ಸಿ ಎಂ ಮೆಚ್ಚುಗೆ

ADVERTISEMENT

ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಈಗ ಸ್ವಾವಲಂಭಿಯಾಗಿದ್ದು ಇದರಲ್ಲಿ KPCL ನೌಕರರ ಶ್ರಮ ಅಪಾರವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಕರ್ನಾಟಕ ವಿದ್ಯುತ್ ನಿಗಮ‌ ನಿಯಮಿತದ 56 ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. KPCL ಅಧ್ಯಕ್ಷನಾಗಿ ನಾನೂ ಕೂಡ KPCL ನೌಕರರಲ್ಲಿ ಒಬ್ಬನಾಗಿದ್ದೀನಿ. ಅತೀ ಹೆಚ್ಚು ಕಾಲ KPCL ಅಧ್ಯಕ್ಷನಾಗಿ ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿಯಾಗಿದ್ದೇನೆ ಎಂದರು.

ಸಚಿವ ಕೆ.ಜೆ.ಜಾರ್ಜ್ (Minister KJ George) ನೇತೃತ್ವದಲ್ಲಿ KPCL ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ಉತ್ತಮವಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದರು.ನಮ್ಮ ಮೇಲೆ, ಅಧಿಕಾರಿಗಳ ಮೇಲೆ ಸಮಾಜದ ಋಣ ಇದೆ. ನಾವಾಗಲೀ, ಅಧಿಕಾರಿಗಳಾಗಲೀಸಮಾಜದ ಹಣದಲ್ಲಿ ಬೆಳೆದಿದ್ದೇವೆ. ಆದ್ದರಿಂದ ಸಮಾಜದ ಋಣ ತೀರಿಸುವ ಕಾಳಜಿಯಿಂದ ಕೆಲಸ ಮಾಡಬೇಕಿದೆ ಎಂದರು.

ನಾವು ಓದುವಾಗ ಊರಲ್ಲಿ ಕರೆಂಟ್ ಇರಲಿಲ್ಲ. ಸೀಮೆಎಣ್ಣೆ ದೀಪದಲ್ಲಿ ಓದಿ ಮೇಲೆ ಬಂದೆವು. ನಾನು 8 ನೇ ತರಗತಿಗೆ ಬಂದಾಗ ಊರಿಗೆ ಕರೆಂಟ್ ಬಂತು. ಈಗ ವರ್ಷಕ್ಕೆ 20 ಸಾವಿರ ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿ ಹಣವನ್ನು ರೈತರ ಪರವಾಗಿ ಸರ್ಕಾರ ಕೊಡುತ್ತಿದೆ. ಕೆಪಿಸಿಎಲ್ ನೌಕರರ ಶ್ರಮದಿಂದ ವಿದ್ಯುತ್ ರೈತರಿಗೆ ತಲುಪುತ್ತಿದೆ ಎಂದರು.

ಪವನ, ಸೌರ, ಉಷ್ಣ, ಜಲ ವಿದ್ಯುತ್ ಉತ್ಪಾದನೆ ಜೊತೆಗೆ ತ್ಯಾಜ್ಯದಿಂದಲೂ ವಿದ್ಯುತ್ ಉತ್ಪಾದನೆ ಮಾಡುತ್ತಾ ದೇಶದಲ್ಲೇ ಪ್ರಮುಖ ಸ್ಥಾನದಲ್ಲಿದ್ದು ಸ್ವಾವಲಂಬನೆ ಸಾಧಿಸಿದ್ದೀವಿ. 60 ಸಾವಿರ ಮೆ.ವ್ಯಾ ಉತ್ಪಾದನೆ ಮಾಡುವ ಗುರಿ ಎಡೆಗೆ ನಾವು ಸಾಗುತ್ತಿದ್ದೇವೆ ಎಂದರು.

ತಲಾ ಆದಾಯದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎನ್ನುವ ವರದಿಗಳು ಬಂದಿವೆ. ಈ ಸಾಧನೆ ನಾವು ಮಾಡಿದ್ದೇವೆ ಎಂದರು. ನಮ್ಮಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ ಇದೆ. ಇದು ಹೋಗಬೇಕಾದರೆ ಎಲ್ಲರಿಗೂ ಆರ್ಥಿಕ ಶಕ್ತಿ ಬರಬೇಕು.‌ ನಮಗೆ ಶಿಕ್ಷಣ ಸಿಕ್ಕ ಮೇಲೆ ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಕಲಿತವರೂ ಜಾತಿವಾದಿಗಳಾಗಿ, ದ್ವೇಷವಾದಿಗಳಾಗುತ್ತಿದ್ದಾರೆ ಎಂದರು.

ಮನುಷ್ಯರ ನಡುವೆ ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತಿ ಸಮಾಜವನ್ನು ವಿಭಜಿಸುವವರಿಂದ ನೀವೆಲ್ಲರೂ ದೂರ ವಿರಿ. ಕುವೆಂಪು ಅವರ ಆಶಯದಂತೆ ವಿಶ್ವ ಮಾನವರಾಗೋಣ ಎಂದು ಕರೆ ನೀಡಿದರು. KPCL ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

Tags: 5 years cm siddaramaiahCM Siddaramaiahcm siddaramaiah newscm siddaramaiah press meetcm siddaramaiah speechcm siddaramaiah today newscm siddaramaiah'skarnataka cm siddaramaiahNew CM Siddaramaiahsiddaramaiahsiddaramaiah aboutsiddaramaiah castSiddaramaiah CMsiddaramaiah congresssiddaramaiah interviewsiddaramaiah karnataka cmsiddaramaiah newssiddaramaiah on cm chairsiddaramaiah press meetsiddaramaiah slap rowYathindra Siddaramaiah
Previous Post

CM Siddaramaiah: ಯಾವ ಕಾಲಕ್ಕೂ ವಿದ್ಯುತ್ ಕೊರತೆಯಾಗದಂತೆ ಕ್ರಮ: ಸಿಎಂ ಸಿದ್ದರಾಮಯ್ಯ

Next Post

ಜುಲೈ 25ರಂದು ‘ಮಹಾವತಾರ ನರಸಿಂಹ’ ಆನಿಮೇಷನ್‌ ಚಿತ್ರ ಬಿಡುಗಡೆ

Related Posts

ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗ್ತಾರೆ.
ರಾಜಕೀಯ

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಒಳಜಗಳ ತೀವ್ರ, ಸಚಿವ ಜಮೀರ್ ವಿರುದ್ಧ ಗಂಭೀರ ಆರೋಪ

by ಪ್ರತಿಧ್ವನಿ
April 12, 2026
0

ದಾವಣಗೆರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಾಜಕೀಯ ಪೈಪೋಟಿಯಷ್ಟೇ ಅಲ್ಲದೆ, ಕಾಂಗ್ರೆಸ್ ಪಕ್ಷದ ಒಳಜಗಳದ ವೇದಿಕೆಯಾಗಿಯೂ ಪರಿಣಮಿಸಿದೆ. ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲಿಸಲು ಸಂಚು ರೂಪಿಸಿದ ಆರೋಪದ...

Read moreDetails
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
Next Post

ಜುಲೈ 25ರಂದು ‘ಮಹಾವತಾರ ನರಸಿಂಹ' ಆನಿಮೇಷನ್‌ ಚಿತ್ರ ಬಿಡುಗಡೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada