ಪ್ರೇಯಸಿಯನ್ನ ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಶೋ ಕೊಟ್ಟಿದ್ದವವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಿನ್ನೆ ಯಲಹಂಕ ಫ್ಲೈವರ್ ಮೇಲೆ ತನ್ನ ಪ್ರೇಯಸಿಯನ್ನು ಪಲ್ಸರ್ ಬೈಕ್ನಲ್ಲಿ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಮಸ್ತಿ ಮಾಡಿದವನನ್ನು ಹೆಬ್ಬಾಳ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸಿಲಂಬರಸೇನ್ (21) ಎಂದು ಗುರುತಿಸಲಾಗಿದ್ದು, ಆತ ಶಾಂಪುರ ನಿವಾಸಿಯಾಗಿದ್ದು, ಕ್ಯಾಬ್ ಚಾಲಕನಾಗಿದ್ದಾನೆ ಎಂದು ತಿಳಿದುಬಂದಿದೆ.
ಸಿಲಂಬರಸೇನ್ ಜಾಲಿ ರೈಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರು ವೈರಲ್ ಆಗಿದ್ದ ಬೈಕ್ ನಂಬರ್ ಪ್ಲೇಟ್ ಆಧರಿಸಿ ಬೈಕ್ ಸೀಜ್ ಮಾಡಿ, ಸಿಲಂಬರಸೇನ್ನನ್ನ ಬಂಧಿಸಿದ್ದಾರೆ.ಸದ್ಯ ಸಿಲಂಬರಸೇನ್ ಡಿಎಲ್ ರದ್ದು ಮಾಡಲು RTO ಗೆ ಮನವಿಯನ್ನು ಪೊಲೀಸರು ಮಾಡಿದ್ದಾರೆ.