ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ.2 ಕೋಟಿ ಮೌಲ್ಯದ ದಾಖಲೆ ಇಲ್ಲದ ಚಿನ್ನ-ಬೆಳ್ಳಿ ವಶಕ್ಕೆ….
ದಾಖಲೆ ಇಲ್ಲದ ಚಿನ್ನ ಹಾಗೂ ಬೆಳ್ಳಿ ಸಾಗಟದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು, ಸುಮಾರು 2 ಕೋಟಿ ಮೌಲ್ಯದ ಚಿನ್ನ ಬೆಳ್ಳಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬಯಿಂದ ಬೆಂಗಳೂರಿನತ್ತ ಹೊರಟ್ಟಿದ ಖಾಸಗಿ ಸಾರಿಗೆ ಬಸ್ಸನಲ್ಲಿ ದಾಖಲೆ ಇಲ್ಲದ ಚಿನ್ನ ಹಾಗೂ ಬೆಳ್ಳಿ ಸಾಗಾಟ ಮಾಹಿತಿ ಆಧರಿಸಿ, ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನರೇಂದ್ರ ಟೋಲ್ ಬಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುಮಾರು ಎರಡು ಕೋಟಿ ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಸಿಕ್ಕಿದ್ದು, ಸದ್ಯ ಈಗ ಚಿನ್ನ ಬೆಳ್ಳಿ ಮೌಲ್ಯ ಮಾಪನದಲ್ಲಿ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ನಿರತರಾಗಿದ್ದಾರೆ. ಇನ್ನೂ ಇದರ ಹಿಂದೆ ಯಾವೆಲ್ಲ ಕೈಗಳಿವೆ ಎಂಬುವುದುನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಖಾಸಗಿ ಬಸ್ಸನ್ನು ವಶಕ್ಕೆ ಪಡೆದಿರೋ ಗ್ರಾಮೀಣ ಠಾಣೆಯ ಪೊಲೀಸರು, ಬಸ್ಸನ್ನು ಠಾಣೆಗೆ ತಂದಿದ್ದು, ಚಿನ್ನ ಬೆಳ್ಳಿಯನ್ನು ನರೇಂದ್ರ ಟೋಲ್ ಬಳಿಯ ಪ್ರದೇಶದಲ್ಲಿ ಮೌಲ್ಯ ಮಾಪನ ಕೈಗೊಂಡಿದ್ದಾರೆ. ಇನ್ನೂ ಈ ಅಕ್ರಮ ಚಿನ್ನ ಬೆಳ್ಳಿ ಸಾಗಾಟದ ಬಗ್ಗೆ ಪೊಲೀಸರ ಪೂರ್ಣ ತನಿಖೆಯ ನಂತರವಷ್ಟೇ ಯಾವೆಲ್ಲ ಕೈಗಳಿವೆ ಎಂಬುವುದು ಬೆಳಕಿಗೆ ಬರಬೇಕಾಗಿದೆ.