ಬೆಂಗಳೂರಿನಲ್ಲಿ ಗನ್ ತೋರಿಸಿ ಬೆದರಿಕೆ ಹಣ ದೋಚುತ್ತಿದ್ದ ಗ್ಯಾಂಗ್‌ವೊಂದನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. 6 ತಿಂಗಳ ಹಿಂದೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೂರು ಕಡೆ ಗನ್ ತೋರಿಸಿ ರಾಬರಿ ಮಾಡಿದ್ದ ಖದೀಮರು, ಆ ಬಳಿಕ ಕೊಡಿಗೇಹಳ್ಳಿಯಲ್ಲಿ ವೈದ್ಯರೊಬ್ಬರಿಗೆ ಗನ್ ತೋರಿಸಿ 40 ಲಕ್ಷ ಹಣ ದೋಚಿದ್ರು. ಒಂದೇ ತಿಂಗಳಲ್ಲಿ ಬರೋಬ್ಬರಿ 2 ಕೋಟಿಗೂ ಅಧಿಕ ಹಣ ರಾಬರಿ ಮಾಡಿ ಗೋವಾಗೆ ಹೋಗಿ ಕ್ಯಾಸಿನೋದಲ್ಲಿ ಕಾಲ ಕಳೆದಿದ್ರು. ಆದರೆ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿರಲಿಲ್ಲ..
ಇಂಟರ್ ಸ್ಟೇಟ್ ಗ್ಯಾಂಗ್ ಒಂದು ರಾಜ್ಯದಲ್ಲಿ ಕಳ್ಳತನ ಮಾಡಿ ಮತ್ತೊಂದು ಸ್ಟೇಟ್‌ಗೆ ಎಸ್ಕೇಪ್ ಆಗ್ತಿತ್ತು. ಅದೇ ರೀತಿ ಕರ್ನಾಟಕದ ಬಳಿಕ ಗೋವಾಗೆ ಎಸ್ಕೇಪ್ ಆಗಿದ್ದ ಗ್ಯಾಂಗ್, ಅಲ್ಲಿಂದ ಛತ್ತೀಸ್‌ಗಢಕ್ಕೆ ತೆರಳಿ ಅಲ್ಲಿಯೂ ಗನ್ ತೋರಿಸಿ ರಾಬರಿ ಮಾಡಿದ್ರು. ಛತ್ತೀಸ್‌ಗಢದಿಂದ ಎಸ್ಕೇಪ್ ಆಗುವ ಮುನ್ನವೇ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಜಾಫರ್ ಹಾಗೂ ಇಮ್ರಾನ್, ಬೆಂಗಳೂರು ರಾಬರಿ ಬಗ್ಗೆಯೂ ಮಾಹಿತಿ ನೀಡಿದ್ದರು.
ಛತ್ತೀಸ್‌ಗಢ ಪೊಲೀಸರಿಂದ ಮಾಹಿತಿ ಸಿಗ್ತಿದ್ದ ಹಾಗೆ ಕೊಡಿಗೇಹಳ್ಳಿ ಪೊಲೀಸರು ಛತ್ತೀಸ್‌ಗಢಕ್ಕೆ ತೆರಳಿ ಬಾಡಿವಾರೆಂಟ್ ಮೇಲೆ ಕರೆತಂದಿದ್ದಾರೆ. ಗನ್ ತೋರಿಸಿ 5 ಕಡೆ ರಾಬರಿ ಮಾಡಿದ್ದ ಪ್ರಕರಣದಲ್ಲಿ ಒಂದು ಕೆ.ಜಿ ಚಿನ್ನ ರಿಕವರಿ ಮಾಡಿದ್ದಾರೆ. ಹಣವಂತರನ್ನೇ ಟಾರ್ಗೆಟ್ ಮಾಡಿ, ಗನ್ ತೋರಿಸಿ ಮನೆ ದೋಚುತ್ತಿದ್ದ ಇಬ್ಬರು ಖದೀಮರು ಅಂದರ್ ಆಗಿದ್ದಾರೆ. ಆರು ತಿಂಗಳಲ್ಲಿ ಐದು ಕಡೆ ಕೃತ್ಯ ನಡೆಸಿದ್ದ ಗನ್ ಗ್ಯಾಂಗ್, ಎರಡು ಕೋಟಿಗೂ ಅಧಿಕ ಚಿನ್ನಾಭರಣ ದೋಚಿತ್ತು. ಇಂತಹ ಖತರ್ನಾಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಇದೀಗ ನಟೋರಿಯಸ್ ರಾಬರ್ಸ್‌ನ ಪೊಲೀಸರು ಅರೆಸ್ಟ್ ಮಾಡಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರ, ಛತ್ತೀಸ್‌ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದೇ ರೀತಿ ಗನ್ ತೋರಿಸಿ ರಾಬರಿ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಹೀಗಾಗಿ ಬೇರೆ ರಾಜ್ಯದ ಪೊಲೀಸರು ಕೂಡ ಬಾಡಿ ವಾರೆಂಟ್ ಮೇಲೆ ಕರೆದೊಯ್ಯುವ ತಯಾರಿಯಲ್ಲಿದ್ದಾರೆ. ಆದರೆ ಶ್ರೀಮಂತರ ಪಾಲಿಗೆ ಸಂಕಷ್ಟ ತಂದೊಡ್ಡಿದ್ದ ಖದೀಮರು ಕಂಬಿ ಹಿಂದೆ ಸೇರಿದ್ದಾರೆ ಅನ್ನೋದು ಸಂತಸದ ವಿಚಾರ.