ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ವಿಜಯಪುರ ಮತ್ತು ಬೆಳಗಾವಿಗೆ ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ.
ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ವಿಜಯಪುರ ಮತ್ತು ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳು ಸಂಚರಿಸಲಿದ್ದು, ಪ್ರಯಾಣಿಕರು ಪ್ರಯೋಜನ ಪಡೆದುಕೊಳ್ಳಬೇಕೆಂದು ನೈಋತ್ಯ ರೈಲ್ವೆ ಮನವಿ ಮಾಡಿದೆ. ರೈಲು ಸಂಖ್ಯೆ 06231 ಬೆಂಗಳೂರು-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 10ರಂದು ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 10:55 ಕ್ಕೆ ವಿಜಯಪುರ ತಲುಪುತ್ತದೆ.
ತುಮಕೂರು (08:30/08:32pm), ಅರಸೀಕೆರೆ (10:20/10:25pm), ಬೀರೂರು (11:05/11:07pm), ಚಿಕ್ಕಜಾಜೂರ್ (11:55/11:57pm), ಚಿತ್ರದುರ್ಗ (12:35/12:37am), ರಾಯದುರ್ಗ (02:20/02:22am), ಬಳ್ಳಾರಿ ಕ್ಯಾಂಟ್ (03:43/03:45am), ತೋರಣಗಲ್ಲು (04:13/04:15am), ಹೊಸಪೇಟೆ (04:45am) /04:50am), ಮುನಿರಾಬಾದ್ (04:57/04:58am), ಕೊಪ್ಪಳ (05:18/05:20am), ಗದಗ (06:03/06:05am), ಬಾದಾಮಿ (07:13/07:15am), ಬಾಗಲಕೋಟೆ (07:43/07:45am) ಮತ್ತು ಆಲಮಟ್ಟಿ (08:18/08:20am) ನಿಲ್ದಾಣಗಳನ್ನು ತಲುಪಲಿದೆ.
ಅದೇ ರೀತಿ ವಾಪಸ್ ಬೆಂಗಳೂರಿಗೆ ಮರಳಲು ಪೂರಕವಾಗಿ ರೈಲು ನಂ.06232 ವಿಜಯಪುರದಿಂದ ನವೆಂಬರ್ 14 ರಂದು ಸಂಜೆ 5 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 09:30ಕ್ಕೆ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.