ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಯೋಧನನ್ನು ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಅಪಹರಿಸಿ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸುಮಾರು ಆರು ಮಂದಿ ಆರೋಪಿಗಳು ಯೋಧನನ್ನು ಅಪಹರಿಸಿದ್ದು, ಯೋದನ ಮನೆಯ ಸಮೀಪವಿರುವ ಕಾಡಿನ ಪ್ರದೇಶಕ್ಕೆ ಕರೆದೊಯ್ದು ಥಳಿಸಿದ್ದಾರೆ. ಬಳಿಕ ಯೋಧನ ಬೆನ್ನಿನ ಮೇಲೆ ಹಸಿರು ಬಣ್ಣದಿಂದ ʼPFIʼ ಎಂದು ಇಂಗ್ಲಿಷ್ ಅಕ್ಷರದಲ್ಲಿ ಬರೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿದೆ. ಭಾರತೀಯ ಸೇನಾ ಸಿಬ್ಬಂದಿಯನ್ನು ಶೈನ್ ಕುಮಾರ್ ಎಂದು ಗುರುತಿಸಲಾಗಿದೆ. ಸುಮಾರು ಆರು ಮಂದಿ ತನ್ನನ್ನು ಅಪಹರಿಸಿದ್ದಾರೆ ಎಂದು ಸೇನಾ ಜವಾನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಅವರನ್ನು ಕಡಕ್ಕಲ್‌ನಲ್ಲಿರುವ ಅವರ ಮನೆಯ ಸಮೀಪವಿರುವ ರಬ್ಬರ್ ಕಾಡಿಗೆ ಕರೆದೊಯ್ಯಲಾಯಿತು. ಅಲ್ಲದೆ ಕಾಡಿಗೆ ಕರೆದೊಯ್ದು ಕೈ ಕಟ್ಟಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.
ನಂತರ ಅವರು ಬಣ್ಣ ತೆಗೆದುಕೊಂಡು ಆತನ ಬೆನ್ನಿನ ಮೇಲೆ PFI ಎಂದು ಬರೆದಿದ್ದಾರೆ. ಭಾರತೀಯ ಸೇನೆಯ ಜವಾನನ ಬೆನ್ನಿನ ಮೇಲೆ ಹಸಿರು ಬಣ್ಣ ಬಳಿದಿರುವ ಪಿಎಫ್‌ಐನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತೀಯ ಸೇನಾ ಜವಾನನ ಟಿ-ಶರ್ಟ್ ಹಿಂಭಾಗದಿಂದ ಹರಿದಿದ್ದು, ಆತನ ಬೆನ್ನಿನ ಮೇಲೆ ಹಸಿರು ಬಣ್ಣದಿಂದ PFI ಎಂದು ಬರೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಈ ಸಂಬಂಧ ದೂರು ದಾಖಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಬಂಧನದ ವರದಿಯಾಗಿಲ್ಲ. ಪಿಎಫ್‌ಐ ಅನ್ನು ಭಾರತ ಸರ್ಕಾರವು ನಿಷೇಧಿಸಿದೆ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿಷೇಧಿತ ಸಂಘಟನೆಯ ವಿರುದ್ಧ ದೊಡ್ಡ ಮಟ್ಟದ ಆಸ್ತಿ, ಹಣವನ್ನು ಮುಟ್ಟುಗೋಲು ನಡೆಸಿದೆ.