
ಕಾವೇರಿ ಕೊಳ್ಳ ಮಂಡ್ಯಕ್ಕೆ ಕೃಷಿ ವಿವಿಗೆ ಅನುಮೋದನೆ ಸಿಕ್ಕಿದ್ದು, ಮಂಡ್ಯ ಜಿಲ್ಲೆಯಿಂದ ಕೃಷಿ ಸಚಿವರಾಗಿರುವ ಎನ್.ಚಲುವರಾಯಸ್ವಾಮಿ ಜಿಲ್ಲೆಗೆ ಸಾರ್ಥಕ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅದರಲ್ಲೂ ಸಿದ್ದರಾಮಯ್ಯ ನೇತೃತ್ವದಲ್ಲಿ ಅನುಮೋದನೆ ದೊರೆತ ಕಾರಣಕ್ಕೆ ಮಂಡ್ಯ ಜಿಲ್ಲಾ ಶಾಸಕರು ಸಿಎಂಗೆ ಸನ್ಮಾನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿರುವ ಮಂಡ್ಯ ಜಿಲ್ಲೆ ಶಾಸಕರ ನಿಯೋಗ, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸನ್ಮಾನ ಮಾಡಿದ್ದಾರೆ. ಸಚಿವ ಚಲುವರಾಯಸ್ವಾಮಿ ನೇತೃತ್ವದ ಆಗಮಿಸಿದ್ದ ಶಾಸಕರ ನಿಯೋಗದಲ್ಲಿ ಮೇಲುಕೋಟೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಮಂಡ್ಯ ಶಾಸಕ ರವಿ ಗಣಿಗ, ಮರಿತಿಬ್ಬೇಗೌಡ, ಮಧು ಜಿ ಗೌಡ, ಮದ್ದೂರು ಶಾಸಕ ಉದಯ್ ಕೆ, ರವಿಶಂಕರ್ ಒಳಗೊಂಡ ನಿಯೋಗ ಸನ್ಮಾನಿಸಿದೆ.
ಕಾವೇರಿ ಕೊಳ್ಳದ ಪ್ರಾಂತ್ಯಕ್ಕೆ ಕೃಷಿ ವಿಶ್ವವಿದ್ಯಾಲಯ ಜಾರಿಯಾಗಿದ್ದು, ಮಂಡ್ಯದಲ್ಲಿ ಪ್ರಾರಂಭಿಸಲು ಅನುಮೋದನೆ ಸಿಕ್ಕಿದೆ. ಮೈಸೂರು ಸಕ್ಕರೆ ಕಾರ್ಖಾನೆಯ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಿರುವ ಕಾರಣಕ್ಕೂ ಶಾಸಕರು ಅಭಿನಂದಿಸಿದ್ದಾರೆ. ಸಿಎಂ ಹಾಗೂ ಡಿಸಿಎಂಗೆ ಅಭಿನಂದನೆ ಸಲ್ಲಿಸಿದೆ ನಿಯೋಗ. ಸಿಎಂ, ಡಿಸಿಎಂಗೆ ಸನ್ಮಾನಿಸಲು ಕಬ್ಬು, ಹೂವಿನ ಹಾರದ ಜೊತೆಗೇ ಬಂದಿದ್ದ ಶಾಸಕರ ನಿಯೋಗ, ನೇಗಿಲ ಯೋಗಿ ಗೀತೆಯೊಂದಿಗೆ ಸನ್ಮಾನ ಕಾರ್ಯ ಮಾಡಿದ್ದಾರೆ.












