ಮೈಸೂರಿನ ಮುಡಾ ಸೈಟ್ ಹಗರಣದ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರೇ ನೀವು ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಅಲ್ಲ. ನೀವು ಆರೂವರೆ ಕೋಟಿ ಜನರ ಪ್ರತಿನಿಧಿಸುವ ಮುಖ್ಯಮಂತ್ರಿ. ಆರೂವರೆ ಕೋಟಿ ಜನರ ರಕ್ಷಣೆ ಮಾಡುವ ಜವಾಬ್ದಾರಿ ನಿಮ್ಮದು. ಕಪ್ಪು ಚುಕ್ಕೆ ಇಲ್ಲ.. ಕಪ್ಪು ಚುಕ್ಕೆ ಇಲ್ಲ ಅಂತಾರೆ. ಸಿದ್ದರಾಮಯ್ಯನವರ ಚಡ್ಡಿ ಕಪ್ಪು ಚುಕ್ಕೆ ಮಾಡ್ಕೊಂಡಿರಬಹುದು. ನಿಮ್ಮ ಧರ್ಮಪತ್ನಿಯ ಬಗ್ಗೆ ಗೌರವ ಇಟ್ಟುಕೊಂಡಿದ್ದೇನೆ. ಅವರು ಹೊರಗೆ ಬಂದಿರೋದು ಮುಖ್ಯ ಅಲ್ಲ ಸಿದ್ದರಾಮಯ್ಯನವರೇ.. ಕಾನೂನು ಬಾಹಿರ ಹಗರಣಗಳನ್ನು ಮುಚ್ಚಿ ಹಾಕಲು ಹೊರಟಿದ್ದೀರಲ್ಲ ಅದರ ಬಗ್ಗೆ ನಾವು ಪ್ರಶ್ನೆ ಮಾಡ್ತಿರೋದು ಎಂದು ವಾಗ್ದಾಳಿ ಮಾಡಿದ್ದಾರೆ.
ಅಂಬೇಡ್ಕರ್ ಸಾಮಾನ್ಯ ನಾಗರಿಕನಿಗೂ ದುಡಿಮೆಯ ಹಕ್ಕು ಕೊಟ್ಟಿದ್ದಾರೆ. ಶಿವಕುಮಾರ್ ಪಾಪ ಮೈಸೂರಿನಲ್ಲಿ ಮಾತಾಡಿದ್ದಾರೆ. ಬಹಳ ಕಾನೂನು ಬದ್ದವಾಗಿ. ತಪ್ಪಲ್ಲ ಶಿವಕುಮಾರ್ ಅವ್ರೇ.. ಆದರೆ ಶ್ರಮಪಟ್ಟು ಕಾನೂನು ಪ್ರಕಾರ ಸೈಟ್ ಕೊಟ್ಟಿದ್ರೆ ನಾವು ಚರ್ಚೆ ಮಾಡ್ತಾ ಇರಲಿಲ್ಲ. ಆ ಭೂಮಿ ಸರ್ಕಾರದ ಭೂಮಿ, 1997-98 ಹಾಗು 2000ನೇ ಇಸವಿಯಲ್ಲಿ ನಿವೇಶನ ಮಾಡಿ ಹಂಚಿಕೆ ಮಾಡಿ ಆಗೋಗಿತ್ತು. ನಿವೇಶನ ಹಂಚಿಕೆ ಆದ ಮೇಲೆ ನಿಮ್ಮ ಬಾಮೈದ ಹೇಗೆ ಸೈಟ್ ಪಡೆದರು…? ನೀವು ಸಹಿ ಹಾಕದೆ ಇರಬಹುದು ಸಿದ್ದರಾಮಯ್ಯಮವರೇ, ಆದರೆ ನಿಮ್ಮ ಮೂಗಿನ ನೇರದಲ್ಲಿ ಎಲ್ಲವೂ ನಡೆದಿದೆ. ಈಗಲೂ ಸೈಟ್ಗಳನ್ನು ವಾಪಸ್ಸು ಕೊಡಲು ರೆಡಿ ಇದ್ದೇನೆ ಅಂತಿದ್ದಾರೆ. ಮಾಡಿದ್ದೆಲ್ಲ ತಪ್ಪು ಮಾಡಿ, ನೀವು ಮಾಡಿದ್ದು ಕಾನೂನು ಬಾಹಿರವನ್ನು ಮುಚ್ಚಿ ಹಾಕೋಕೆ ಸಾಧ್ಯನಾ..? ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.
ಆಶ್ರಯ ಕಮಿಟಿಗೆ ಮಗನನ್ನು ಅಧ್ಯಕ್ಷರಾಗಿ ಮಾಡಿ ಇಲ್ಲಿ ಮೈಸೂರಿನಲ್ಲಿ ಉಸ್ತುವಾರಿಯಾಗಿ ಮಾಡಿದ್ದಾರೆ. ಅಪ್ಪಯ್ಯ, ಅಪ್ಪಯ್ಯ ಅಂತೆ.. ಎನ್ನುವ ಮೂಲಕ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಬಗ್ಗೆ ಲೇವಡಿ ಮಾಡಿರುವ ಕುಮಾರಸ್ವಾಮಿ, ಸಿಎಸ್ಆರ್ ಫಂಡ್ನಲ್ಲಿ ಏನೇನು ಮಾಡಿದ್ರು ಅಂತಾ ಇಲ್ಲಿ ಇದೆ. ಅದರ ದಾಖಲೆಗಳು ಇಲ್ಲಿವೆ, ಅದನ್ನು ಇವಾಗ ಮಾತಾಡಲ್ಲ. ಇದೊಂದು ದೊಡ್ಡ ಭ್ರಷ್ಟಾಚಾರ ಎನ್ನುವ ಮೂಲಕ ಮುಡಾ ಜೊತೆಗೆ ಮತ್ತೊಂದು ಹಗರಣದ ಸುಳಿವು ಕೊಟ್ಟಿದ್ದಾರೆ.
ಕೃಷ್ಣಮಣಿ