• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಆ್ಯಪ್ ಆಧಾರಿತ ಡಿಜಿಟಲ್ ಪ್ಲಾಟ್ಫಾರ್ಮ್ ನೌಕರರಿಗೂ ಇನ್ನು ಮುಂದೆ ಸಿಗಲಿದೆ ವಾರದ ರಜೆ!

ಫಾತಿಮಾ by ಫಾತಿಮಾ
October 26, 2021
in ದೇಶ
0
ಆ್ಯಪ್ ಆಧಾರಿತ ಡಿಜಿಟಲ್ ಪ್ಲಾಟ್ಫಾರ್ಮ್ ನೌಕರರಿಗೂ ಇನ್ನು ಮುಂದೆ ಸಿಗಲಿದೆ ವಾರದ ರಜೆ!
Share on WhatsAppShare on FacebookShare on Telegram

ಡಿಜಿಟಲ್ ಮಾರ್ಕೆಟಿಂಗ್ ಮತ್ತು ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಪ್ರವರ್ಧಮಾನಕ್ಕೆ ಬಂದ ನಂತರ ಗ್ರಾಹಕರ ಶಾಪಿಂಗ್ ಬೆರಳ ತುದಿಯಲ್ಲೇ ಇರುವಂತಾಗಿದೆ. Uberಗಳಂತಹ ಪ್ರಯಾಣ ಸೇವೆ ಒದಗಿಸುವ ಸಂಸ್ಥೆಗಳಾಗಿರಬಹುದು, ಅಮೆಜಾನ್‌ನಂತಹ ಬೃಹತ್ ಆನ್‌ಲೈನ್ ಶಾಪಿಂಗ್ ಸೆಂಟರ್‌ಗಳೇ ಇರಬಹುದು ಅಥವಾ ಜೊಮ್ಯಾಟೋ, ಸ್ವಿಗ್ಗಿಯಂತಹ ಆಹಾರ ವಸ್ತುಗಳನ್ನು ಮನೆಗೆ ತಲುಪಿಸುವ ಸಂಸ್ಥೆಗಳೇ ಇರಬಹುದು, ಗ್ರಾಹಕರ ಸಂತೃಪ್ತಿ, ಅನುಕೂಲಗಳನ್ನೇ ಗುರಿಯಾಗಿಸಿ ಕಾರ್ಯನಿರ್ವಹಿಸುತ್ತಿವೆ.

ADVERTISEMENT

ಆದರೆ ಇಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವ ಕೆಲಸಗಾರರ ಬದುಕು ಅಷ್ಟು ಸುಲಭವಲ್ಲ. ಬೇಕಾದಾಗ ಮಾತ್ರ ಕೆಲಸ ಮಾಡುವ ಅನುಕೂಲ ಅವರಿಗೆ ಇದ್ದರೂ ಸರಿಯಾದ ವೇತನ, ಹಕ್ಕುಗಳು ಮತ್ತು ಬೇರೆ ಕೆಲಸಗಾರರಿಗೆ ಇರುವ ಅನುಕೂಲಗಳು ಸಿಗುವುದಿಲ್ಲ . ತಮ್ಮ ಕೆಲಸಗಾರರನ್ನು ‘ಸ್ವಯಂ ಉದ್ಯೋಗಿ ಗುತ್ತಿಗೆದಾರರು’ ಎಂದು ವರ್ಗೀಕರಿಸುವ ಮೂಲಕ ಉದ್ಯೋಗದಾತರು ಅವರ ಜವಾಬ್ದಾರಿಗಳಿಂದ ಜಾಣತನದಿಂದ ನುಣುಚಿಕೊಳ್ಳುವ ಅವಕಾಶವಿದೆ .

ಈ ಕೆಲಸಗಾರರಿಗೆ ಪಿಂಚಣಿ, ಅನಾರೋಗ್ಯ ವೇತನ, ರಜೆಯ ಹಕ್ಕು ಅಥವಾ ಹೆರಿಗೆ ರಜೆ‌ ದೊರೆಯುವುದಿಲ್ಲ.  ಈ ಕೆಲಸಗಾರರಿಗೆ ಗ್ರಾಹಕರು ಕಂಪೆನಿಗೆ ನೀಡುವ ಆರ್ಡರ್‌ನ್ನು ಅವಲಂಬಿಸಿ ಕಮಿಷನ್ ಪಾವತಿಸಲಾಗುತ್ತದೆ. ಅಂದರೆ ಅನೇಕ ಜನರು ಗಂಟೆಯ ಕನಿಷ್ಠ ವೇತನಕ್ಕಿಂತ ಕಡಿಮೆ ಗಳಿಸುತ್ತಿದ್ದಾರೆ ಮತ್ತು ಆರ್ಥಿಕ ಭದ್ರತೆ ಇಲ್ಲವೇ ಇಲ್ಲ ಅನ್ನಬಹುದು.

ಒಟ್ಟಾರೆಯಾಗಿ‌ ಅಗತ್ಯವಾದ ಹಣಕಾಸಿನ ಖಾತರಿಗಳು, ಉದ್ಯೋಗ ಭದ್ರತೆ, ಉದ್ಯೋಗ ಹಕ್ಕುಗಳು ಇಲ್ಲದಿರುವುದು ಕೆಲಸದ ಸಂರಚನೆಯಲ್ಲಿನ ಒತ್ತಡ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಕರ್ನಾಟಕವೊಂದರಲ್ಲೇ 1.6 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದೀಗ ಉದ್ಯೋಗದ ವ್ಯಾಖ್ಯಾನವನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿ ಕಾರ್ಮಿಕ ಇಲಾಖೆಯು ಅಸಂಘಟಿತ ವಲಯದ ಕಾರ್ಮಿಕರ ಸಮೀಕ್ಷೆಯನ್ನು ನಡೆಸಲು ಯೋಜಿಸುತ್ತಿದೆ. ಇದರಲ್ಲಿ ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್ ಪ್ಲಾಟ್‌ಫಾರ್ಮ್‌ಗಳು, ವಿತರಣಾ ಏಜೆಂಟ್‌ಗಳು ಮತ್ತು ಆಹಾರ ವಿತರಣಾ ಏಜೆಂಟ್‌ಗಳು ಸಾಪ್ತಾಹಿಕ ರಜೆ ಮತ್ತು ಕನಿಷ್ಠ ವೇತನದಂತಹ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ರೂಪಿಸಲಾಗುತ್ತದೆ.

ಉದ್ಯೋಗಿಗಳಿಗೆ ನ್ಯಾಯಯುತವಾದ ಹಕ್ಕು ದೊರೆಯುವುದನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಉದ್ಯೋಗ ನೀತಿಯ ಅಡಿಯಲ್ಲಿ  ತಾತ್ಕಾಲಿಕ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ ಕೆಲಸಗಾರರು ಹಾಗೂ ಅಂಗನವಾಡಿ ಕಾರ್ಯಕರ್ತರ ಒಳಗೊಂಡಂತೆ ಹೊಸ ಸುಧಾರಣಾ ನೀತಿಗಳನ್ನು ಹೊರತರಲು ಉದ್ದೇಶಿಸಿದೆ.  ಈ ನೀತಿಯ ಅಡಿಯಲ್ಲಿ ಕಾರ್ಮಿಕರು ಕನಿಷ್ಟ ವೇತನ, ವಾರದ ರಜೆ ಮತ್ತು ಇತರ ಎಲ್ಲಾ ಹಕ್ಕುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಭವಿಷ್ಯನಿಧಿ ಮತ್ತು ಇಎಸ್‌ಐ ಸೌಲಭ್ಯದಂತಹ ಇತರ ಪ್ರಯೋಜನಗಳನ್ನೂ ಪಡೆಯಲಿದ್ದಾರೆ. 

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ “ಕೇಂದ್ರವು ಇನ್ನೂ ನೀತಿಯನ್ನು ಅಂತಿಮಗೊಳಿಸದಿದ್ದರೂ, ಕರ್ನಾಟಕವು ಮೊಬೈಲ್ ಆಧಾರಿತ ಟ್ಯಾಕ್ಸಿ / ಆಟೋರಿಕ್ಷಾ ಚಾಲಕರು, ಡೆಲಿವರಿ ಏಜೆಂಟ್‌ಗಳು ಮತ್ತು ಆಹಾರದ ಜಿಲ್ಲಾವಾರು ಸಮೀಕ್ಷೆಯನ್ನು ನಡೆಸಲಿದೆ” ಎಂದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಕ್ಟೋಬರ್ 30ರ ಉಪಚುನಾವಣೆ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.  ಕಳೆದ ತಿಂಗಳು ಪ್ರಾರಂಭಿಸಲಾದ ಅಸಂಘಟಿತ ಕಾರ್ಮಿಕರ ಇ-ಶ್ರಮ್ ಪೋರ್ಟಲ್‌ನಲ್ಲಿ ಕರ್ನಾಟಕದ 7 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. 

Previous Post

ಲಸಿಕೆ ತಯಾರಕ ಕಂಪನಿಗಳೊಂದಿಗೆ ಮೋದಿ ಮಹತ್ವದ ಸಭೆ; ಭಾರತ ವ್ಯಾಕ್ಸಿನ್ ಮಾಡಿದೆ ಎಂದ ಪ್ರಧಾನಿ

Next Post

ತೈಲ ಬೆಲೆ ಏರಿಕೆ ಖಂಡಿಸಿ ಲಾರಿ ಮಾಲೀಕ & ಚಾಲಕರ ಸಂಘದಿಂದ ಮುಷ್ಕರದ ಎಚ್ಚರಿಕೆ!

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
Next Post
ತೈಲ ಬೆಲೆ ಏರಿಕೆ ಖಂಡಿಸಿ ಲಾರಿ ಮಾಲೀಕ & ಚಾಲಕರ ಸಂಘದಿಂದ ಮುಷ್ಕರದ ಎಚ್ಚರಿಕೆ!

ತೈಲ ಬೆಲೆ ಏರಿಕೆ ಖಂಡಿಸಿ ಲಾರಿ ಮಾಲೀಕ & ಚಾಲಕರ ಸಂಘದಿಂದ ಮುಷ್ಕರದ ಎಚ್ಚರಿಕೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada