ಭಾರತದ ನೂತನ ಚುನಾವಣಾ ಆಯುಕ್ತರಾಗಿ, 1984ರ ಐಎಎಸ್ ಬ್ಯಾಚ್’ನ ನಿವೃತ್ತ ಅಧಿಕಾರಿಯಾದ ಅನೂಪ್ ಚಂದ್ರ ಪಾಂಡೆ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಏಪ್ರಿಲ್ 12ರಂದು ಈ ಹಿಂದಿನ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ಸುನಿಲ್ ಅರೋರಾ ಅವರು ನಿವೃತ್ತರಾದ ಕಾರಣ ಅವರ ಸ್ಥಾನವನ್ನು ಪಾಂಡೆ ಅವರು ನೇಮಿಸಿದ್ದಾರೆ.
ಮುಂದಿನ ವರ್ಷ ಬರಲಿರುವ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ ಚುನಾವಣೆ ಪಾಂಡೆ ಅವರ ನೇತೃತ್ವದಲ್ಲಿ ನಡೆಯಲಿದ್ದು, ಚುನಾವಣಾ ಆಯೋಗವು ಪೂರ್ಣವಾಗಿ ಸಿದ್ದವಾಗಲಿದೆ. ಆಯೋಗದ ಪ್ರಮುಖ ಮೂರು ಸ್ಥಾನಗಳು ಈಗ ಭರ್ತಿಯಾಗಿವೆ.
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮತ್ತು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸಮಿತಿಯ ಇತರ ಇಬ್ಬರು ಸದಸ್ಯರು.
2019 ರಲ್ಲಿ ನಿವೃತ್ತಿ ಹೊಂದುವ ಮೊದಲು ಅನೂಪ್ ಚಂದ್ರ ಪಾಂಡೆ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಯಾಗಿದ್ದರು. ಅವರು ರಾಜ್ಯದ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯ ಅಧ್ಯಕ್ಷರೂ ಆಗಿದ್ದರು. ಪಾಂಡೆ ಮೆಕ್ಯಾನಿಕಲ್ ಎಂಜಿನಿಯರ್, ಜೊತೆಗೆ ಎಂಬಿಎ ಪದವಿ ಪಡೆದಿದ್ದಾರೆ. ಅದೇ ಸಮಯದಲ್ಲಿ, ಅವರು ಪ್ರಾಚೀನ ಇತಿಹಾಸದಲ್ಲಿ ಡಾಕ್ಟರೇಟ್ ಸಹ ಮಾಡಿದ್ದಾರೆ.
ಚುನಾವಣಾ ಆಯೋಗದಲ್ಲಿ ಪಾಂಡೆ ಅವರ ಅಧಿಕಾರಾವಧಿ ಸುಮಾರು 3 ವರ್ಷಗಳಾಗಿದ್ದು ಫೆಬ್ರವರಿ 2024 ಕ್ಕೆ ನಿವೃತ್ತರಾಗಲಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅನೂಪ್ ಚಂದ್ರ ಪಾಂಡೆ ಅವರ ನೇಮಕವನ್ನು ಪ್ರತಿಪಕ್ಷಗಳು ಪ್ರಶ್ನಿಸುತ್ತಿವೆ. ಟಿಎಂಸಿ ವಕ್ತಾರ ರಿಜು ದತ್ತಾ ಟ್ವಿಟರ್‌ನಲ್ಲಿ, ಉತ್ತರಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಕೊ ಅವರನ್ನು ಈಗ ಚುನಾವಣಾ ಆಯುಕ್ತರನ್ನಾಗಿ ಮಾಡಲಾಗಿದೆ. ಯುಪಿ ಚುನಾವಣೆಗೆ ಕೆಲವು ತಿಂಗಳ ಮೊದಲು ಇದನ್ನು ಮಾಡಲಾಗಿದೆ.
ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೇಷಿ ಅವರು ಅನೂಪ್ ಚಂದ್ರ ಪಾಂಡೆ ಅವರನ್ನು ಚುನಾವಣಾ ಆಯುಕ್ತರನ್ನಾಗಿ ಮಾಡಿರುವುದನ್ನು ಅಭಿನಂದಿಸಿದರು ಮತ್ತು ‘ನೀವು ದೇಶದ ನಿರೀಕ್ಷೆಗೆ ತಕ್ಕಂತೆ ಬದುಕುವಿರಿ ಎಂದು ಭಾವಿಸುತ್ತೇವೆ’ ಎಂದು ಬರೆದಿದ್ದಾರೆ.
ಇತ್ತ ವಕೀಲ ಪ್ರಶಾಂತ್ ಭೂಷಣ್ ಅವರು, ಚುನಾವಣೆ ಆಯುಕ್ತರ ನೇಮಕ ಮಾಡುವ ಅರ್ಜಿಯ ವಿಚಾರಣೆ ಬಾಕಿ ಇದೆ ಆದರು ಸರ್ಕಾರ ಏಕಪಕ್ಷೀಯವಾಗಿ ಆಧಿತ್ಯಾನಾಥ್ ರಿಂದ ಆಯ್ಕೆಯಾದ ವ್ಯಕ್ತಿಯನ್ನು ಚುನಾವಣೆ ಮುಖ್ಯ ಆಯುಕ್ತರಾಗಿ ನೇಮಿಸಿದೆ! ಈ ಸರ್ಕಾರ ಎಲ್ಲಾ ನಿಯಂತ್ರಕ ಸಂಸ್ಥೆಯನ್ನು ನಾಶ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಬೆಂಬಲಿಗ ಶೀವತ್ಸ ಅವರು ಕೂಟ ಈ ಕುರಿತು ಟ್ವೀಟ್ ಮಾಡಿ, ಆದಿತ್ಯನಾಥ್ ಅವರ ಆಪ್ತ ಸಹಾಯಕ ಅನುಪ್ ಚಂದ್ರ ಪಾಂಡೆ ಅವರನ್ನು ಯುಪಿ ಚುನಾವಣೆಗೆ ಕೆಲವು ತಿಂಗಳ ಮೊದಲು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಚುನಾವಣೆಗಳನ್ನು ಗೆಲ್ಲಲು ಬಿಜೆಪಿಯ ಟೂಲ್‌ಕಿಟ್‌ನ ಪ್ರಮುಖ ಭಾಗ ಇಸಿ ಎಂಬುದು ಮತ್ತೆ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಕಾರ್ಯನಿರ್ವಾಹಕ ನೀರಜ್ ಭಾಟಿಯಾ ಈ ಕುರಿತು ಟ್ವೀಟ್ ಟ್ವೀಟ್ ಮಾಡಿದ್ದಾರೆ-





