ರಾಜ್ಯ ಬಿಜೆಪಿ ಸರ್ಕಾರ ಕೊನೆಗೂ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡಿಸಿದ್ದು, ರಾಜ್ಯದೆಲ್ಲಡೆ ಆಕ್ರೋಶ ಭುಗಿಲೆದ್ದಿದೆ. ಇಂದು ಬೆಳಗ್ಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ಸಂವಿಧಾನ ವಿರೋಧಿ ಮತಾಂತರ ನಿಷೇಧ ಮಸೂದೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರವಾಗಿ ಪರ ವಿರೋಧದ ಚರ್ಚೆ ಸಾಕಷ್ಟು ನಡೆಯುತಿವೆ. ಈಗ ಅದು ಪ್ರತಿಭಟನೆಯ ಸ್ವರೂಪ ಪಡೆದುಕೊಂಡಿದ್ದು, ವಿವಿಧ ಸಮುದಾಯದ ಜನರೆಲ್ಲ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಸೂದೆಯನ್ನು ವಿರೋಧಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಹುತೇಕ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದ ಜನರು ಭಾಗವಹಿಸಿದ್ದು ಕಂಡುಬಂತು. ʼನಮಗೂ ಬದುಕುವ ಹಕ್ಕಿದೆ – ನಿರಪರಾಧಿ ಕ್ರೈಸ್ತರ ಮೇಲಿನ ದೌರ್ಜನ್ಯ ನಿಲ್ಲಲಿ,ʼ ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೆಸರು ಪ್ರಸ್ತಾಪಿಸಿ ಧಿಕ್ಕಾರ ಕೂಗಿದರು.
ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷೆ ಮಹಿಂದ್ರ ಡಿಸೋಜಾ ಮಾತನಾಡಿ, ʼಕ್ರೈಸ್ತರ ಭಾವನೆಗೆ ಈ ಮಸೂಧೆ ಧಕ್ಕೆ ತರುತ್ತಿದೆ. ಕೇವಲ ಕ್ರೈಸ್ತರಿಗೆ ಮಾತ್ರವಲ್ಲದೆ ಅಲ್ಪಸಂಖ್ಯಾತರಿಗೂ ಧಕ್ಕೆಯಾಗುತ್ತಿದೆ. ಎಲ್ಲರೂ ರಸ್ತೆಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ಉಂಟಾಗಿದೆ. ಕ್ರಿಸ್ ಮಸ್ ಹಬ್ಬಕ್ಕೂ ಸರ್ಕಾರ ಕಡಿವಾಣ ಹಾಕುತ್ತಿದೆ. ಇವೆಲ್ಲವನ್ನು ನಾವು ಖಂಡಿಸುತ್ತೇವೆ ಎಂದರು.
“ಮತಾಂತರ ನಿಷೇಧ ಕಾಯ್ದೆ ತರಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ಬುದ್ದಿಯಿಲ್ಲ. ಸಂವಿಧಾನದ ಆಶಯಗಳ ಬಗ್ಗೆ ನಿಖರವಾದ ಮಾಹಿತಿ ಇಲ್ಲ ಈ ಪಕ್ಷಕ್ಕೆ. ಇದರಿಂದ ದೇಶದ ಐಕ್ಯತೆಗೆ ಧಕ್ಕೆಯಾಗುತ್ತದೆ. ಆರ್ ಎಸ್ ಎಸ್ ಕೈವಾಡದಿಂದ ಇದೆಲ್ಲ ನಡೆಯುತ್ತಿದೆ. ಈ ಕಾಯ್ದೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ,” ಎಂದು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ತಿಳಿಸಿದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಸರ್ಫಾಝ್ ಮಾತನಾಡಿ, ಅಲ್ಪಸಂಖ್ಯಾತರು, ದಲಿತರು, ಕ್ರೈಸ್ತರನ್ನು ಗುರಯಾಗಿಸಿಟ್ಟುಕೊಂಡು ಬಿಜೆಪಿ ಕಾನೂನುಗಳನ್ನು ತರುತ್ತಿದೆ. ಮತಾಂತರ ಆಗುವ ತಿಂಗಳ ಮುಂಚೆಯೇ ಸರ್ಕಾರಕ್ಕೆ ತಿಳಿಸಬೇಕು ಅಂತ ಮಸೂದೆಯಲ್ಲಿದೆ. ಇದು ತಪ್ಪು. ನಮ್ಮ ಖಾಸಗಿ ವಿಚಾರಗಳನ್ನು ಮತ್ತೊಬ್ಬರಿಗೆ ತಿಳಿಸುವುದು ಯಾಕೆ? ನಮಗೂ ಬದುಕುವ ಹಕ್ಕಿದೆ. ನಮ್ಮ ಗೌಪ್ಯತೆಯನ್ನು ನಾವು ಯಾಕೆ ಹೊರಗಾಕಬೇಕು? ನಮ್ಮ ಸಂವಿಧಾನದ ಮೂಲ ಹಕ್ಕುಗಳಲ್ಲಿ ಇದು ಕೂಡಾ ಒಂದು. ಧಾರ್ಮಿಕ ಸ್ವಾತಂತ್ರವನ್ನು ಕೇಳೋಕೆ ಸರ್ಕಾರಕ್ಕೆ ಕೇಳುವ ನೈತಿಕತೆಯಿಲ್ಲ,” ಎಂದು ವಿವರಿಸಿದರು.
ನಮ್ಮದು ಜಾತಿ ಅಲ್ಲ. ಎಲ್ಲರದ್ದೂ ಕೆಂಪು ರಕ್ತ. ನಾವು ಕೆಲಸ ಮಾಡುವ ಸಮಯದಲ್ಲಿ ಯಾರೇ ಡಾಕ್ಟರ್ ಬಂದು ಚಿಕಿತ್ಸೆ ನೀಡುವ ಮುಂಚೆ ನಿಮ್ಮದು ಜಾತಿ ಯಾವುದು ಎಂದು ಕೇಳುವುದಿಲ್ಲ. ಅವರಿಗೆ ಜೀವ ಉಳಿಯುವುದು ಅಷ್ಟೇ ಮುಖ್ಯ. ನಮಗೆ ಸ್ವತಂತ್ರವಾಗಿ ಬದುಕು ಹಕ್ಕು ಬೇಕು ಎಂದು ಮಹಿಳಾ ಹೋಂ ನರ್ಸ್ ಒಬ್ಬರು ತಿಳಿಸಿದರು.
ಹಿಂದುಳಿದ ವರ್ಗಗಳ ಸಮಿತಿಯ ಮಾಜಿ ಅಧ್ಯಕ್ಷ ಸಿ.ಎಸ್ ದ್ವಾರಕಾನಾಥ್, ಪರ್ಯಾಯ ಕಾನೂನು ವೇದಿಕೆ ಅರವಿಂದ ನಾರಾಯಣ್, ಹೈಕೊರ್ಟ್ ವಕೀಲ ಬಿ.ಟಿ ವೆಂಕಟೇಶ್, ಪಾದ್ರಿ ಆರ್ಚ್ ಬಿಷಪ್ ಪೀಟರ್ ಮಚಾಡೊ ಇನ್ನಿತರರು ಭಾಗಿಯಾಗಿದ್ದರು.