ರಾಜಾಜಿನಗರ ಕ್ಷೇತ್ರದ (RR Nagar) ಶಾಸಕ ಮುನಿರತ್ನ (MLA Muniratna) ಮೇಲೆ ಮತ್ತೊಂದು ಎಫ್.ಐ.ಆರ್ (FIR) ದಾಖಲಾಗಿದೆ.ದಿನಗೂಲಿ ಕೆಲಸ ಮಾಡುವವರ ಮೇಲೆ ಶಾಸಕ ಮುನಿರತ್ನ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪದ ಮೇಲೆ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.

ಬೆಂಗಳೂರಿನ ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ಅಕ್ಕಮಹಾದೇವಿ ಸ್ಲಂ ನಲ್ಲಿ (Akka mahadevi slum) ಸುಮಾರು 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಕುಟುಂಬಗಳು ವಾಸವಿದೆ. ಆದ್ರೆ ಏಕಾಏಕಿ ಶಾಸಕ ಮುನಿರತ್ನ ಮತ್ತು ಸಹಚರರು ಜೆಸಿಬಿ ತಂದು ಕಾರ್ಮಿಕರ ಮನೆಗಳನ್ನು ನೆಲಸಮ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಲಾಗಿದೆ.

ಈ ವೇಳೆ ತಮ್ಮ ತಮ್ಮ ಮನೆಗಳಲ್ಲಿ ಕೂಡಿಟಿದ್ದ ಹಣ ಮತ್ತು ಚಿನ್ನಾಭರಣ ಕೂಡ ಮಣ್ಣು ಪಾಲಾಗಿದೆಯೆಂದು ಬಡ ಕೂಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.












