ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರಿಗೆ ಬಿಜೆಪಿಯಿಂದ ನಿರಾಶೆ ಎದುರಾಗುತ್ತಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಈಶ್ವರಪ್ಪರಿಗೆ ಪಕ್ಷದಿಂದ ಟಿಕೆಟ್ ಮಿಸ್ ಆಗೋದು ಕನ್ಫರ್ಮ್ ಆಗಿತ್ತು. ಹೀಗಾಗಿ ಟಿಕೆಟ್ ಘೋಷಣೆಗೂ ಮುನ್ನವೇ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದರು.
ಇದಾದ ಬಳಿಕ ಶಿವಮೊಗ್ಗ ಕ್ಷೇತ್ರಕ್ಕೆ ಪುತ್ರ ಕಾಂತೇಶ್ಗೆ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಈಶ್ವರಪ್ಪ ದುಂಬಾಲು ಬಿದ್ದಿದ್ದರು. ಆದರೆ ಈಶ್ವರಪ್ಪ ಮಾತಿಗೆ ಬೆಲೆ ನೀಡದ ಹೈಕಮಾಂಡ್ ಶಿವಮೊಗ್ಗ ಕ್ಷೇತ್ರದ ಟಿಕೆಟ್ನ್ನು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪರಿಗೆ ನೀಡಿದೆ.
ಹೈಕಮಾಂಡ್ನ ಈ ನಿರ್ಧಾರವನ್ನೂ ಗೌರವಿಸಿರುವ ಈಶ್ವರಪ್ಪ ಹೈಕಮಾಂಡ್ ಆಯ್ಕೆ ಸರಿಯಾಗಿದೆ ಎಂದು ಹೇಳಿದ್ದಾರೆ .ಚನ್ನಬಸಪ್ಪ ನಿಷ್ಠಾವಂತ ನಾಯಕರು. ಹೀಗಾಗಿ ಹೈಕಮಾಂಡ್ ಒಳ್ಳೆಯ ನಿರ್ಧಾರ ಕೈಗೊಂಡಿದೆ. ಚೆನ್ನಬಸಪ್ಪ ಗೆಲುವಿಗಾಗಿ ನಾನು ಶ್ರಮಿಸುತ್ತೇನೆ ಎಂದಿದ್ದಾರೆ.