ತುಮಕೂರು ಜಿಲ್ಲಾ ಬಿಜೆಪಿ ನಾಯಕರು ಫೇಸ್ ಬುಕ್ ಓಪನ್ ಮಾಡಲು ನಡುಕ ಹುಟ್ಟುಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ತುಮಕೂರು ಬಿಜೆಪಿಗರಿಗೆ ಅನಾಮಧೇಯ ಅರುಣ ಹೆಸರಿನ ಫೇಸ್‌ಬುಕ್ ಖಾತೆ ತಲೆಗೆ ಹುಳ ಬಿಟ್ಟಿದೆ.
ಫೇಸ್ ಬುಕ್ ನಲ್ಲಿ ಅರುಣಾ ಅಂತ ಬ್ರೌಸ್ ಮಾಡಿದ್ರೆ ಅನಾಮಧೇಯ ಅರುಣ ಪೇಜ್ ಪ್ರತ್ಯಕ್ಷವಾಗ್ತಿದ್ದಾನೆ. ಈ ಖಾತೆಯಲ್ಲಿ ಜಿಲ್ಲಾ ಬಿಜೆಪಿ ನಾಯಕರ ಬಂಡವಾಳ ಬಯಲಾಗ್ತಿದ್ದು, ಜಿಲ್ಲಾ ಬಿಜೆಪಿ ತೆರೆ ಮರೆಯ ಕಚ್ಚಾಟ ಅನಾವರಣಗೊಂಡಿದೆ.

ಪ್ರತಿನಿತ್ಯ ಒಂದಲ್ಲಾ ಒಂದು ಪೋಸ್ಟ್ ಮಾಡಲಾಗಿದ್ದು, ಇವತ್ತು ಯಾರ ಬಗ್ಗೆ ಪೋಸ್ಟ್ ಮಾಡ್ತಾನೆ ಅನ್ನೋದೆ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ ಅಕ್ರಮ, ಹಣ ಲೂಟಿ, ಬಿಜೆಪಿ ಬಂಡಾಯ ಹೀಗೆ ಬಿಜೆಪಿ ನಾಯಕರ ಉಪನಾಮಗಳನ್ನು ಹಾಕಿ ನಿದ್ದೆಗಡೆಸುವಂತೆ ಈ ಅಕೌಂಟ್ ಮಾಡಿದ. ಸದ್ಯ ಅನಾಮಧೇಯ ಅರುಣನ ಹುಡುಕಾಟದಲ್ಲಿ ಬಿಜೆಪಿ ನಾಯಕರಿದ್ದಾರೆ.