ಹಾಸನದಲ್ಲಿ (Hassan) ಮದಗಜಗಳ ಕಾದಾಟ (Wild elephants) ನಡೆದಿದ್ದು, ಈ ಕಾಳಗದಲ್ಲಿ ಆನೆಯೊಂದು ಸಾವನ್ನಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈಗಾಗಲೇ ಆನೆಯ ಕಳೇಬರ ಕೊಳೆಯುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಸಕಲೇಶಪುರ ಅರಣ್ಯಾಧಿಕಾರಿಗಳು (Forest department) ಭೇಟಿ ಪರೀಶಿಲನೆ ನಡೆಸಿದ್ದಾರೆ.

ಕಾಡಾನೆಗಳ ನಡುವಿನ ಕಾದಟದಲ್ಲಿ ಒಂದು ಆನೆ ಬೆಟ್ಟದ ಮೇಲಿಂದ ಕೆಳಗೆ ಬಿದ್ದಿದ್ದು, ಈ ವೇಳೆ ಬಂಡೆ ಮಧ್ಯಕ್ಕೆ ಬಿದ್ದು ಸಿಲುಕಿಕೊಂಡಿದೆ. ಹೀಗಾಗಿ ಬಂಡೆಗಳ ಮಧ್ಯೆ ಸಿಲುಕಿ ಕಾಡನೆ ಸಾವನ್ನಪ್ಪಿದೆ.

ಕೆಲ ದಿನಗಳ ಹಿಂದೆ ಮದಗಜಗಳ ಕಾದಾಟ ಆಗಿ ಬಂಡೆಯಡಿ ಕಾಡಾನೆ ಸಿಲುಕಿತ್ತು ಎನ್ನಲಾಗಿದ್ದು, ಎರಡು ಕಾಡಾನೆಗಳ ಕಾದಟದಲ್ಲಿ ಒಂಟಿ ಸಲಗ ಸಾವನ್ನಪ್ಪಿದೆ.ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮರಗುಂದ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.