ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ ಹಗರಣದಲ್ಲಿ ಭಾಗಿಯಾದ ಸಚಿವರ ರಾಜೀನಾಮೆ ಪಡೆಯಬೇಕು ಇಲ್ಲದಿದ್ದರೆ ಹಗರಣದಲ್ಲಿ ಅಮಿತ್ ಶಾ ಅವರ ಪಾಲೆಷ್ಟು ಅನ್ನೋದು ಸ್ಪಷ್ಟವಾಗಬೇಕು ಎಂದು ಯುತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ಮಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪರೀಕ್ಷೆ ಬರೆದವರು ಫ್ರೀಡಂ ಪಾರ್ಕ್ ನಲ್ಲಿದ್ದಾರೆ. ಅಮಿತ್ ಶಾ ಅವರು ಅವರನ್ನು ಭೇಟಿಯಾಗಿ ಅವ್ರ ಕಷ್ಟ ಕೇಳಿಲಿ. ಹಗರಣದಲ್ಲಿ ಭಾಗಿಯಾದ ಸಚಿವರ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದ್ದಾರೆ.