ಬೆಂಗಳೂರು.ಯಾದಗಿರಿ, (ಆಗಸ್ಟ್ 06): ಯಾದಗಿರಿ ಪಿಎಸ್‌ಐ (PSI)ಪರಶುರಾಮ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣದ ತನಿಗೆಯನ್ನು ಸರ್ಕಾರ ಸಿಐಡಿಗೆ (CID)ನೀಡಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಸಹ ಯಾದಗಿರಿಗೆ ಆಗಮಿಸಿದ್ದು, ಯಾದಗಿರಿ ಪೊಲೀಸರು ಪ್ರಕರಣದ ಫೈಲ್ ಅನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಇನ್ನು ಪರಶುರಾಮ ಅನುಮಾಸ್ಪ ಪ್ರಕರಣ ಸಂಬಂಧ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಇಲಾಖೆಗೆ (Central Home Department)ಪತ್ರ ಬರೆದಿದ್ದಾರೆ.
ಈ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪರಶುರಾಮ ಸಾವಿನ ಸುದ್ದಿ ಮುಟ್ಟಿಸಿದ್ದಾರೆ.ಯಾದಗಿರಿ ಪಿಎಸ್‌ಐ (psi)ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣದ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ( Union Minister Shobha Karandlaje) ಅವರು ಅಮಿತ್ ಶಾಗೆ ಪತ್ರ ಬರೆದಿದ್ದು,ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದ್ದಾರೆ.ಇತ್ತ ಯಾದಗಿರಿ ಪೊಲೀಸರು ಪ್ರಕರಣದ ಫೈಲ್ ಅನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ)Sp ಸಂಗೀತಾ ಅವರು ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಪಪುನೀತ್ (Dysp Puneeth)ಅವರಿಗೆ ಪರಶುರಾಮ ಸಾವಿನ ಪ್ರಕರಣದ ಮಾಹಿತಿಯನ್ನು ನೀಡಿದ್ದಾರೆ.