ಹುಬ್ಬಳ್ಳಿ : ಪಕ್ಷದಲ್ಲಿ ಟಿಕೆಟ್ ಸಿಕ್ಕಿಲ್ಲವೆಂದು ಏಕಾಏಕಿ ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಬಿಜೆಪಿ ಚಾಣಕ್ಯ ಅಮಿತ್ ಶಾ ಸಿಡಿದೆದ್ದಿದ್ದಾರೆ ಎನ್ನಲಾಗಿದೆ. ಪಕ್ಷದ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿಯನ್ನು ಶತಾಯಗತಾಯ ಗೆಲ್ಲಿಸಬೇಕೆಂದು ರಾಜ್ಯ ಬಿಜೆಪಿ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.
ಖುದ್ದು ಹುಬ್ಬಳ್ಳಿಗೆ ಭೇಟಿ ನೀಡಿರುವ ಅಮಿತ್ ಶಾ ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಸೇರಿರುವ ಶೆಟ್ಟರ್ ಈ ಬಾರಿ ಯಾವುದೇ ಕಾರಣಕ್ಕೂ ಸೋಲನ್ನು ಅನುಭವಿಸುವಂತೆ ಮಾಡಬೇಕು. ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದರೂ ಅಭ್ಯಂತರವಿರಲಿಲ್ಲ. ಆದರೆ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುತ್ತಿರುವ ಶೆಟ್ಟರ್ಗೆ ಕ್ಷಮೆಯ ಮಾತೇ ಇಲ್ಲ ಎಂದು ಅಮಿತ್ ಶಾ ಗುಡುಗಿದ್ದಾರೆ ಎನ್ನಲಾಗಿದೆ.
ಶೆಟ್ಟರ್ಗೆ ಬಿಜೆಪಿಯಿಂದ ಎಂದಿಗೂ ಕ್ಷಮೆ ಸಿಗುವುದಿಲ್ಲ. ಪಕ್ಷ ಇಷ್ಟು ವರ್ಷ ನೀಡಿದ ಕೊಡುಗೆಗಳನ್ನು ಶೆಟ್ಟರ್ ನೆನಪಿಟ್ಟುಕೊಂಡಿಲ್ಲ. ಒಂದು ಬಾರಿ ಟಿಕೆಟ್ ಸಿಗದ್ದಕ್ಕೆ ಪಕ್ಷ ನಿಷ್ಠೆ ತೋರದ ಶೆಟ್ಟರ್ ಸೋಲಿಗೆ ಅಮಿತ್ ಶಾ ಟೊಂಕ ಕಟ್ಟಿ ನಿಂತಿದ್ದಾರೆ ಎನ್ನಲಾಗ್ತಿದೆ.