ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗೂ ಹೈದರಬಾದ್ ಸಂಸದ ಅಸಾದುದ್ದೀನ ಓವೈಸಿ ಮೇಲೆ ಇತ್ತೀಚಿಗೆ ಉತ್ತರಪ್ರದೇಶದ ಮೀರತ್ನ ಚಗೌಸಿ ಟೋಲ್ ಬಳಿ ಗುಂಡಿನ ದಾಳಿಯಾಗಿತ್ತು. ಈ ಬೆಳವಣಿಗೆ ನಂತರ ಅವರಿಗೆ Z-category security ನೀಡಲು ಕೇಂದ್ರ ಸರ್ಕಾರ ಮುಂದಾಗಿತ್ತು
ಆ ಕುರಿತು ಇಂದು ಸದನದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಷಾ ʻಓವೈಸಿಯವರ ಜೀವಕ್ಕೆ ಅಪಾಯವಿದೆ. ಸರ್ಕಾರವು ಅವರಿಗೆ Z-category security ಒದಗಿಸಲು ಮತ್ತು ಬುಲೆಟ್ ಪ್ರೂಫ್ ಕಾರನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಓವೈಸಿಯವರು ಇದನ್ನು ಸ್ವೀಕರಿಸಬೇಕಾಗಿ ನಾನು ಸಂಸತ್ ಸದಸ್ಯರ ಪರವಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇಬ್ಬರು ಅಪರಿಚಿತರು ಬೈಕ್ನಲ್ಲಿ ಬಂದು ಓವೈಸಿರವರ ಕಾರಿನ ಮೇಲೆ ಗುಂಡನ್ನು ಹಾರಿಸಿದ್ದರು. ಅದೃಷ್ಟವಶಾತ್ ಅವರಿಗೆ ಏನು ಆಗಿಲ್ಲ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.