ತಮಿಳುನಾಡಿನಲ್ಲಿ (Tamil nadu) ಬಿಜೆಪಿಯ (Bjp) ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit sha) ಮಾತನಾಡಿದ್ದಾರೆ. 2024 ರಲ್ಲಿ ನಾವು  ಮೊದಲ ಭಾರಿಗೆ ಒರಿಸ್ಸಾದಲ್ಲಿ ಪೂರ್ಣ ಬಹುಮತದ ಸರ್ಕಾರ ರಚಿಸಿದ್ದೇವೆ.ಅನೇಕ ವರ್ಷಗಳ ಬಳಿಕ ಆಂಧ್ರದಲ್ಲಿ ಎನ್‌ಡಿಎ ಸರ್ಕಾರ ರಚಿಸಿದ್ದೇವೆ, 2025ರ ಆರಂಭದಲ್ಲೇ ದೆಹಲಿಯಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ಇನ್ನು 2026ರಲ್ಲಿ, ಹೊಸ ವರ್ಷವನ್ನು ನಾವು ತಮಿಳುನಾಡಿನಲ್ಲಿ ಎನ್‌ಡಿಎ ಸರ್ಕಾರ ರಚನೆಯೊಂದಿಗೆ ಆರಂಭಿಸುತ್ತೇವೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನಲ್ಲಿ ಈ ಭಾರಿ ಜನರು ಡಿಎಂಕೆ ನೇತೃತ್ವದ ಭ್ರಷ್ಟ, ದೇಶವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದ ಅಮಿತ್ ಶಾ, ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದಿದ್ದಾರೆ.
			
                                
                                
                                