ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಬಾಕ್ಸಿಂಗ್‌ನಲ್ಲಿ ನೀತು ಮತ್ತು ಪಂಗಲ್ ಚಿನ್ನದ ಪದಕ ಗೆದಿದ್ದಾರೆ.
ಹೌದು, ಮಹಿಳೆಯರ 48 ಕೆಜಿ ತೂಕ ವಿಭಾಗದಲ್ಲಿ ಇಂಗ್ಲೆಂಡ್‌ನ ಬಾಕ್ಸರ್ನನ್ನು ಸೋಲಿಸುವ ಮೂಲಕ ನೀತು ಚಿನ್ನ ಗೆದ್ದರು. ಮೂರು ಸುತ್ತುಗಳ ಕಾಲ ನಡೆದ ಬಾಕ್ಸಿಂಗ್‌ನಲ್ಲಿ ಮೊದಲಿನಿಂದ ಕೊನೆಯವರೆಗೂ ಭಾರತದ ಬಾಕ್ಸರ್ ನೀತು ಮೇಲುಗೈ ಸಾಧಿಸಿದರು. ಎಲ್ಲಾ ಮೂರು ಸುತ್ತುಗಳಲ್ಲಿ ನೀತುಗೆ ಹೆಚ್ಚಿನ ಅಂಕಗಳನ್ನು ನೀಡಿದರು ಹಾಗಾಗಿ ನೀತುಗೆ ಚಿನ್ನ ಪದಕ ಲಬಿಸಿದೆ.

ಇನ್ನು ಪುರುಷರ 51 ಕೆಜಿ ವಿಭಾಗದ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಕಿಯಾರನ್ ಮ್ಯಾಕ್ಡೊನಾಲ್ಡ್ ವಿರುದ್ಧ 5-0 ಅಂತರದಲ್ಲಿ ಭಾರತದ ಬಾಕ್ಸರ್ ಅಮಿತ್ ಪಂಗಲ್ ಜಯಗಳಿಸಿದ್ದಾರೆ.
ಅಮಿತ್ ಪಂಗಲ್ ಅವರು ಎತ್ತರದವಿಲ್ಲದೇ ಇದ್ದರು ದೈತ್ಯ ಬಾಕ್ಸರ್ ಇಂಗ್ಲೆಂಡ್‌ನ ಕಿಯಾರನ್ ಮ್ಯಾಕ್‌ಡೊನಾಲ್ಡ್ ಅನ್ನು ಆಕ್ರಮಣಕಾರಿಯಾಗಿ ಪಂಚ್ ಮಾಡಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ.













