ಸಿಎಂ ಬದಲಾವಣೆಯ ಬಗ್ಗೆ ಮಹತ್ವದ ಸುಳಿವು ಕೊಟ್ಟ ಬಿಎಸ್.ಯಡಿಯೂರಪ್ಪ!

ಕಳೆದ ವಾರ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಅನೇಕ ನಾಯಕರನ್ನು ಭೇಟಿಯಾದ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಜೋರಾಗಿಯೇ ಕೇಳಿಬರುತ್ತಿದೆ.ಈ ಒತ್ತಡದ ಮಧ್ಯೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಇಂದು ಸಂಜೆ ಬಿಜೆಪಿಯಲ್ಲಿನ ತಮ್ಮ ಕಾರ್ಯಕರ್ತರಿಗೆ “ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ ” ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ್ದಾರೆ.

78 ವರ್ಷದ ಶ್ರೀ ಯಡಿಯೂರಪ್ಪ ಅವರು ಇಂದು, ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ ಮಾತೃ ಸಮಾನ,ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ ಎಂದು ಬರೆದುಕೊಂಡಿದ್ದಾರೆ.

ಈಗ ಯಡಿಯೂರಪ್ಪ ಅವರ ಈ ಒಂದು ಟ್ವೀಟ್‌ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಒಂದು ಕಡೆ ನಾಯಕತ್ವ ಬದಲಾವಣೆಯಾಗುವುದು ಪಕ್ಕಾ ಎನ್ನುವಂತಾಗಿದ್ದು, ತಾವು ಸಿಎಂ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾಗಿದೆ. ಈ ಕಾರಣಕ್ಕೆ ಮುಂಚಿತವಾಗಿ ಬಿಎಸ್.ಯಡಿಯೂರಪ್ಪ, ಯಾವುದೇ ಪ್ರತಿಭಟನೆ ಮಾಡಬಾರದು ಎಂದು ಅಭಿಮಾನಿ ಹಾಗೂ ಹಿತೈಷಿಗಳಲ್ಲಿ ಮನವಿ ಮಾಡಿಕೊಂಡಂತಿದೆ ಎನ್ನಲಾಗಿದೆ.

ಮತ್ತೊಂದು ಕಡೆ, ಕೇಂದ್ರಕ್ಕೆ ಭಂಡಾಯದ ಸೂಕ್ಷ್ಮ ಸುಳಿವನ್ನು ಟ್ಟೀಟ್‌ ಮಾಡುವ ಮೂಲಕ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿಕೊಡುವಂತೆ ಒಂದು ಕಡೆ ಧಾರ್ಮಿಕ ಮುಖಂಡರ ದಂಡೇ ಯಡಿಯೂರಪ್ಪರನ್ನು ಭೇಟಿ ಮಾಡಿ ಬೆಂಬಲಿಸಿದರೆ ಮತ್ತೊಂದು ಕಡೆ ಕಾಂಗ್ರೆಸ್‌ನ ಪ್ರಭಾವಿ ಶಾಸಕರು ಬಿಎಸ್‌ವೈ ಬೆಂಬಲಕ್ಕೆ ನಿಂತಿದ್ದಾರೆ.

ಹಾಗಾಗ ಸಿಎಂ ಬದಲಾವಣೆ ಕೂಗು ಮುನ್ನೆಲೆಗೆ ಬಂದರು ಅದು ಒಂದೆರಡು ದಿನದಲ್ಲಿ ತಣ್ಣಗಾಗುತ್ತಿ ಆದರೆ ಈ ಭಾರಿ ದೆಹಲಿ ಹೈಕಮಾಂಡ್‌ ವರೆಗೂ ತಲುಪಿ ಸೂಕ್ಮ ವಿಚಾರವಾಗು ಬದಲಾಗಿದೆ.

ರಾಜ್ಯದ ಕೆಲವು ಬಿಜೆಪಿ ಶಾಸಕಗಳಿಂದ ಯಡಿಯೂರಪ್ಪ ನವರು ಹಗೆತನವನ್ನು ಎದುರಿಸುತ್ತಿದ್ದಾರೆ. ಶಾಸಕರಾದ ಬಸನಗೌಡ ಪಾಟೀಲ್ ಯಟ್ನಾಲ್, ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ಮತ್ತು ಎಂ.ಎಲ್.ಸಿ ಎ.ಎಚ್. ವಿಶ್ವನಾಥ್ ಸೇರಿದಂತೆ ಕೆಲವು ನಾಯಕರು ಶಿಸ್ತು ಕ್ರಮದ ಎಚ್ಚರಿಕೆಗಳ ಹೊರತಾಗಿಯೂ ಬಹಿರಂಗವಾಗಿ ಯಡಿಯೂರಪ್ಪನವರ ವಿರುದ್ಧ ಮಾತನಾಡಿದ್ದಾರೆ.

ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯ ಒಂದರಲ್ಲೇ ಬಿಜೆಪಿ ಅಧಿಕಾರ:

ದಕ್ಷಿಣ ಭಾರತದ ಬಿಜೆಪಿಯ ಮೊದಲ ಮತ್ತು ಈಗ ಏಕೈಕ ಮುಖ್ಯಮಂತ್ರಿಯಾಗಿರುವ ಯಡಿಯುರಪ್ಪ ಅವರು ಜುಲೈ 2019 ರಲ್ಲಿ ಕಾಂಗ್ರೆಸ್-ಜನತಾದಳ (ಜಾತ್ಯತೀತ) ಮೈತ್ರಿಕ್ಕೂಟದಿಂದ ಅಧಿಕಾರ ವಹಿಸಿಕೊಂಡು ಇಲ್ಲಿಗೆ ಸುಮಾರು ಎರಡು ವರ್ಷಗಳ ಉಸ್ತುವಾರಿ ಪೂರೈಸಿದ್ದಾರೆ.

ನಿನ್ನೆ, ಯಡಿಯೂರಪ್ಪ ಅವರು ರಾಜ್ಯದ ಪ್ರಬಲ ಮಠದ ಸ್ವಾಮಿಜೀಗಳನ್ನು ಭೇಟಿಯಾದರು, ಈ ಒಂದು ಭೇಟಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಬಲವಾದ ಸಂದೇಶವನ್ನು ನೀಡಿದೆ ಎನ್ನಲಾಗಿದೆ.

ರಾಜ್ಯದ ಜನಸಂಖ್ಯೆಯ ಶೇಕಡಾ 16 ರಷ್ಟನ್ನು ಹೊಂದಿರುವ ಮತ್ತು ರಾಜ್ಯದಲ್ಲಿ ಬಿಜೆಪಿಯ ದೊಡ್ಡ ಬೆಂಬಲ ನೆಲೆಯಾಗಿ ಕಾಣುವ ವೀರಶೈವ-ಲಿಂಗಾಯತ ಸಮುದಾಯದ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಮುಖ್ಯಮಂತ್ರಿಯನ್ನು ಬೆಂಬಲಿಸುತ್ತಿದ್ದಾರೆ. ಅವರಲ್ಲಿ ಹಲವರು 78 ವರ್ಷ ವಯಸ್ಸಿನ ಯಡಿಯೂರಪ್ಪ ನವರನ್ನು ಬದಲಿಸುವ ವಿರುದ್ಧ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜಕೀಯದಲ್ಲಿ ನೇರವಾಗಿ ತೊಡಗಿಸಿಕೊಳ್ಳುವುದು ವಿರಳವಾಗಿ ಕಂಡುಬರುವ ಪ್ರಭಾವಶಾಲಿ ಸಿದ್ದಗಂಗ ಮಠ ಕೂಡ ಈಗ ಯಡಿಯೂರಪ್ಪನ ಪರ ನಿಂತಿದೆ.

Please follow and like us:

Related articles

Share article

Stay connected

Latest articles

Please follow and like us: