ಅಮೇರಿಕಾದ ಪೋಲೀಸ್ ಅಧಿಕಾರಿಯೊಬ್ಬ ನಡುರಸ್ತೆಯಲ್ಲಿ ಜಾರ್ಜ್ ಫ್ಲಾಯ್ಡ್‌ರನ್ನು ಉಸಿರುಕಟ್ಟಿಸಿ ಕೊಂದ ಬೆನ್ನಿಗೆ ಅಮೇರಿಕಾದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಜನಾಂಗೀಯವಾದದ ವಿರುದ್ಧದ ಈ ಹೋರಾಟ ಅಮೇರಿಕಾದ ಸರಕಾರವನ್ನು ಅಕ್ಷರಶ ದಿಕ್ಕೆಟ್ಟಿಸಿದೆ. ಈ ನಡುವೆ ಭಾರತೀಯ ಸಂಜಾತರೊಬ್ಬರು ಅಮೇರಿಕಾದ ಪ್ರತಿಭಟನಾಕಾರರ ಹೀರೋ ಆಗಿ ಸಾಮಾಜಿಕ ಜಾಲತಾಣದಲ್ಲಿ ಬಿಂಬಿತವಾಗುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ತನ್ನ ಮಿತ್ರನೆಂದು ಕರೆದುಕೊಳ್ಳುವ ಟ್ರಂಪ್ ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಮೇರಿಕಾದ ಬಿಳಿಯರನ್ನೂ ಕಪ್ಪು ಜನಾಂಗದವರನ್ನು ಪ್ರತ್ಯೇಕಿಸಲು ಪ್ರಯತ್ನಿಸುತ್ತಿದ್ದಾರೆಂದು ಅಂತರಾಷ್ಟ್ರೀಯ ರಾಜಕೀಯ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ಅದೇನೆ ಇರಲಿ, ಅದು ಬೇರೆಯದೇ ಚರ್ಚೆ.
ಸದ್ಯ ಅಮೇರಿಕಾ ಪ್ರತಿಭಟನೆಕಾರರ ಹಾಗೂ ವಿಶ್ವದಾದ್ಯಂತ ಕಪ್ಪು ಜನಾಂಗದವರ ಪರವಾಗಿ ಪ್ರತಿಭಟನೆ ವ್ಯಕ್ತಪಡಿಸುತ್ತಿರುವವರ ಪಾಲಿಗೆ ಹೀರೋವಾಗಿ ಕಾಣಿಸಿಕೊಂಡಿರುವವರು ರಾಹುಲ್ ದುಬೆ, ಮೂಲತಃ ಭಾರತೀಯರು. ಸದ್ಯ ಅಮೇರಿಕಾದ ರಾಜಧಾನಿ ವಾಶಿಂಗ್ಟನ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿರುವ 46 ವರ್ಷದ ಈ ಉದ್ಯಮಿ ಕಳೆದ 17 ವರ್ಷಗಳಿಂದ ಅಮೇರಿಕಾ ಸಂಯುಕ್ತ ರಾಷ್ಟ್ರದಲ್ಲಿ ನೆಲೆಸಿದ್ದಾರೆ.
“I hope that my 13-year-old son grows up to be just as amazing as they are.”
Rahul Dubey opened his home to nearly 70 strangers overnight and sheltered them during D.C.’s curfew. He says our country needs people like THEM.
FULL INTERVIEW: https://t.co/hucxiraHk9 pic.twitter.com/BKFMsTsSgk
— ABC 7 News – WJLA (@ABC7News) June 2, 2020
ಅಮೇರಿಕಾ ಅಧ್ಯಕ್ಷರ ನಿವಾಸ ಶ್ವೇತ ಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾಕಾರರ ಗುಂಪು ಸಂಜೆ ಏಳರ ಹೊತ್ತಿಗೆ ರಾಹುಲ್ ದುಬೆಯವರ ವಸತಿ ಪ್ರದೇಶದ ಬಳಿ ತಲುಪಿತ್ತು. ಪ್ರತಿಭಟನಾ ಕಾವು ಹೆಚ್ಚುತ್ತಿರುವುದರಿಂದ ಅಧಿಕಾರಿಗಳು ಸಂಜೆ ಏಳರ ಬಳಿಕ ಕರ್ಫ್ಯೂ ಹೇರಿದ್ದರು. ಸಂಜೆ ಏಳರವರೆಗೂ ಸ್ವಾನ್ ಸ್ಟ್ರೀಟ್‌ಗಳಲ್ಲೇ ಇದ್ದ ಪ್ರತಿಭಟನಾಕಾರರನ್ನು ಸ್ಥಳೀಯ ಪೋಲಿಸರು ಸುತ್ತುವರೆದಿದ್ದಾರೆ. ಈ ನಡುವೆ, ಪೋಲಿಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಪ್ರತಿಭಟನಾ ನಿರತರು ಸ್ಥಳೀಯ ಮನೆಗಳಿಗೆ ನುಗ್ಗುತ್ತಿದ್ದಾರೆಂದು ವದಂತಿಯಾಗಿತ್ತು.

ವಾಸ್ತವವಾಗಿ ಅಲ್ಲಿ ನಡೆದಿರುವ ಘಟನೆಯೇ ಬೇರೆ. ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಾರೆಂದು ಪೋಲಿಸರಿಂದ ಬಂಧನಕ್ಕೊಳಗಾಗಬಹುದಿದ್ದ ಸುಮಾರು 70 ರಷ್ಟು ಪ್ರತಿಭಟನಾಕಾರರಿಗೆ ರಾಹುಲ್ ದುಬೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಾರೆ. ಪೋಲಿಸರು ತನ್ನ ಮನೆಯ ಪ್ರವೇಶ ದ್ವಾರದವರೆಗೂ ಪ್ರತಿಭಟನಾಕಾರರನ್ನು ಅಟ್ಟಿಸಿಕೊಂಡು ಬಂದಿದ್ದರೆಂದು ರಾಹುಲ್ ದುಬೆ ಸ್ಥಳೀಯ ಪತ್ರಿಕೆಗಳಿಗೆ ಹೇಳಿದ್ದಾರೆ.
ಪ್ರತಿಭಟನಾಕಾರರು ತೆರಳಿದ ಬಳಿಕ ಸ್ಥಳೀಯ ಪತ್ರಿಕೆಯೊಂದಿಗೆ ಮಾತನಾಡಿದ ರಾಹುಲ್ ದುಬೆ ತಾನು ಯಾವ ವಿಶೇಷ ಕಾರ್ಯವನ್ನೂ ಮಾಡಿಲ್ಲ, ಆ ಸಮಯದಲ್ಲಿ ನನ್ನ ಸ್ಥಾನದಲ್ಲಿರುವ ಹೆಚ್ಚಿನ ಜನರೂ ತಮ್ಮ ಮನೆಯ ಬಾಗಿಲನ್ನು ತೆರೆದು ಪ್ರತಿಭಟನಾಕಾರರನ್ನು ಸ್ವಾಗತಿಸುತ್ತಿದ್ದರು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ದೇಶವು ವಿಷಮ ಘಟ್ಟದಲ್ಲಿದೆ, ಈ ಪ್ರತಿಭಟನಾಕಾರರ ಹೊರತು ಬೇರೆ ಯಾರೂ ದೇಶದ ಬಗ್ಗೆ ಕಾರ್ಯಪ್ರವೃತ್ತವಾಗಿಲ್ಲ. ಈ ಪ್ರತಿಭಟನಾಕಾರರಿಗೆ ಮುಂದೆ ಅಪಾಯಗಳು ಎದುರಾಗಬಹುದು ಎಂಬುದು ನನ್ನ ಆತಂಕ. ನನ್ನ 13 ವರ್ಷದ ಮಗನೂ ಆ ಅದ್ಭುತ ಪ್ರತಿಭಟನಾಕಾರರಂತೆ ಬೆಳೆಯಲಿ ಎಂದು ನಾನು ಆಶಿಸುತ್ತೇನೆ ಎಂದು ರಾಹುಲ್ ದುಬೆ ಪ್ರತಿಭಟನಾಕಾರರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
“They were running for their lives, so you open the door”
Washington resident Rahul Dubey sheltered 80 protesters in his home to protect them from arresthttps://t.co/y0C5XMdHwc pic.twitter.com/bpOK6bvvK4
— BBC News (World) (@BBCWorld) June 3, 2020
ಪ್ರತಿಭಟನಾಕಾರರಿಗೆ ಆಶ್ರಯ ನೀಡಿ, ಉಪಚರಿಸುವುದನ್ನು ಮನೆಯೊಳಗೆ ಆಶ್ರಯ ಪಡೆದ ಪ್ರತಿಭಟನಾಕಾರರೊಬ್ಬರು ವೀಡಿಯೋ ಮಾಡಿ ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾರೆ. ಪ್ರತಿಭಟನಾಕಾರರು ಸ್ಥಳೀಯ ಮನೆಗಳಿಗೆ ನುಗ್ಗುತ್ತಿದ್ದಾರೆ ಎನ್ನುವ ವದಂತಿಯನ್ನು ನಿರಾಕರಿಸಲು ರಾಹುಲ್ ದುಬೆ ಆ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಆಶ್ರಯ ಪಡೆದುಕೊಂಡವರು ರಾಹುಲ್ ಹೇಗೆ ನಡೆದುಕೊಂಡರು ಎಂದು ತಮ್ಮ ಅನುಭವವನ್ನು ಅಂತರ್ಜಾಲದಲ್ಲಿ ಬರೆದುಕೊಂಡ ಬಳಿಕ ರಾಹುಲ್ ದುಬೆ ನೆಟ್ಟಿಗರ ಹೀರೋ ಆಗಿಬಿಟ್ಟರು.
ಪ್ರಪಂಚಾದಾದ್ಯಂತ ದುಬೆ ಅವರ ಸಮಯೋಚಿತ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಮೇರಿಕಾದ ಹಲವಾರು ಮಂದಿ ದುಬೆಯವರ ನಿವಾಸದ ಬಾಗಿಲಲ್ಲಿ ಹೂಗುಚ್ಛ, ಧನ್ಯವಾದ ಪತ್ರಗಳನ್ನು ಇರಿಸಿ ಹೋಗುತ್ತಿದ್ದಾರೆಂದು ಅಂತರಾಷ್ಟ್ರೀಯ ಪತ್ರಿಕೆ CNN ವರದಿ ಮಾಡಿದೆ.