ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಅಮೇರಿಕಾ ಸಂತಾಪ ಸೂಚಿಸಿದೆ. ಡಾ. ಮನಮೋಹನ್ ಸಿಂಗ್ ಅವರು ಯುಎಸ್ ಹಾಗೂ ಭಾರತದ ಕಾರ್ಯತಂತ್ರದ ಪಾಲುದಾರಿಕೆಯ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಎಂದು ಅಮೆರಿಕ ಬಣ್ಣಿಸಿದೆ.
ಮನಮೋಹನ ಸಿಂಗ್ ಅವರ ನಿರ್ಧಾರಗಳಿಂದಲೆ ಭಾರತ ಮತ್ತು ಯುಸ್ ಗಟ್ಟೆ ಸಂಬಂಧಕ್ಕೆ ಅಡಿಪಾಯ ಹಾಕಲಾಯ್ತು. U.S. ಮತ್ತು ಭಾರತದ ನಾಗರಿಕ ಪರಮಾಣು ಸಹಕಾರ ಒಪ್ಪಂದವನ್ನು ಮುಂದುವರೆಸುವಲ್ಲಿ ಅವರ ನಾಯಕತ್ವಕ್ಕೆ ಸಾಕ್ಷಿಯಾದಂತಿತ್ತು ಎಂದು ಅಮೆರಿಕ ಹೇಳಿದೆ.
U.S ಮತ್ತು ಭಾರತದ ಸಂಬಂಧದ ಸಾಮರ್ಥ್ಯದಲ್ಲಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಪ್ರಮುಖ ಹೂಡಿಕೆಯಾಗಿದೆ.ಭಾರತದ ಕ್ಷಿಪ್ರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿದ ಅವರ ಆರ್ಥಿಕ ಸುಧಾರಣೆಗಳು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೆವೆ. ಡಾ. ಸಿಂಗ್ ಅವರ ನಿಧನಕ್ಕೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ ಎಂದು ಆಮ್ವ್ರಿಕ ಹೇಳಿದೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತವನ್ನು ಒಟ್ಟಿಗೆ ತರಲು ಅವರ ಸಮರ್ಪಣೆಯನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಹೇಳಿದ್ದಾರೆ.