• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಂಬರೀಶ್ ಅವರು ಸಹಜವಾಗಿ ಬದುಕು ನಡೆಸಿದರು ; ಸಿಎಂ ಬೊಮ್ಮಾಯಿ

Any Mind by Any Mind
March 28, 2023
in Top Story, ಕರ್ನಾಟಕ
0
ಅಂಬರೀಶ್ ಅವರು ಸಹಜವಾಗಿ ಬದುಕು ನಡೆಸಿದರು ; ಸಿಎಂ ಬೊಮ್ಮಾಯಿ
Share on WhatsAppShare on FacebookShare on Telegram

ADVERTISEMENT

ಬೆಂಗಳೂರು:ಮಾ.೨೮: ಅಂಬರೀಶ್ ಅಂದರೆ ಒಂದು ಶಕ್ತಿ. ಅವರ ವ್ಯಕ್ತಿತ್ವದಲ್ಲೇ ಆ ಶಕ್ತಿ ಇತ್ತು. ಅಂಬರೀಶ್ ಎಲ್ಲಿಯೇ ಹೋದರೂ ಸಂತೋಷ ಇರುತ್ತಿತ್ತು. ಗಂಭೀರ ಚರ್ಚೆ ಸಮಯದಲ್ಲೂ ಅಂಬರೀಶ್ ಬಂದರೆ ಸಮಸ್ಯೆಗೆ ಪರಿಹಾರ ಸಿಗುತ್ತೆ ಅನ್ನೋ ಸಂತೋಷ ಇರುತ್ತಿತ್ತು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕಂಠೀರವ ಸ್ಟುಡಿಯೋದಲ್ಲಿ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಗೆ ಆತ್ಮಸಾಕ್ಷಿಯಾಗಿ ಬದುಕು ನಡೆಸೋದು ಕಷ್ಟವಾದರೂ ಅಂಬರೀಶ್ ಅವರು ಸಹಜವಾಗಿ ಬದುಕನ್ನು ನಡೆಸಿದರು. ಅಂಬರೀಶ್ ತನಗೆ ಸರಿ ಅನ್ನಿಸಿದ್ದನ್ನು ಮಾಡುತ್ತಿದ್ದರು. ಆತ ತನ್ನ ಜೀವನದಲ್ಲಿ ಪಶ್ಚಾತ್ತಾಪ ಪಟ್ಟಿದ್ದೇ ಇಲ್ಲ. ಆತ ಚಲನಚಿತ್ರದಲ್ಲೂ ಕಷ್ಟ ಪಟ್ಟು ನಟನೆ ಮಾಡುತ್ತಿರಲಿಲ್ಲ. ಆತ ಸಹಜವಾಗಿ ತನ್ನ ಬದುಕಿನಲ್ಲಿ ಮುಂದೆ ಬಂದಿದ್ದರು. ಆತ ಯಾವುದನ್ನೂ ಬಯಸಿ ಪಡೆದುಕೊಂಡವನಲ್ಲ. ತನಗೆ ಸಿಕ್ಕಿದ್ದನ್ನೇ ಶ್ರೀಮಂತಗೊಳಿಸಿದರು. ಸಿನಿಮಾ ರಂಗದಲ್ಲಿ ಬಹಳಷ್ಟು ಜನರಿಗೆ ಸಹಾಯ ಸಿಕ್ಕಿದ್ದರೆ ಅದು ಅಂಬರೀಶ್ ಅವರಿಂದ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ:
ಅಂಬರೀಶ್ ರಾಜಕಾರಣಕ್ಕೆ ಬಂದಿದ್ದೂ ಆಕಸ್ಮಿಕವಾಗಿ. ಆತ ಯಾಕೆ ರಾಜಕಾರಣಕ್ಕೆ ಬಂದಿದ್ದು ಎಂದು ನನಗೆ ಗೊತ್ತು. ನಾವೆಲ್ಲರೂ ಸೇರಿ ರಾಮನಗರ ಉಪಚುನಾವಣೆಯಲ್ಲಿ ನಿಲ್ಲಿಸಿದ್ವಿ. 22 ದಿನ ಆತನ ಜತೆಯಲ್ಲೇ ಪ್ರಚಾರ ಮಾಡಿದ್ದೂ ನನಗೆ ನೆನಪಿದೆ. ಆತ ಸೋಲು ಗೆಲುವನ್ನು ಸಮನಾಗಿ ತೆಗೆದುಕೊಂಡಿದ್ದರು. ಯಾವುದೇ ಸ್ಥಾನಕ್ಕೆ ವ್ಯಾಮೋಹ ಇಲ್ಲೇ ಕೆಲಸ ಮಾಡಿದ್ದರು. ಕಾವೇರಿ ವಿಚಾರದಲ್ಲಿ ಒಂದು ಕ್ಷಣವೂ ಯೋಚನೆ ಮಾಡದೇ ರಾಜೀನಾಮೆ ಕೊಟ್ಟ ಸಂಸದ ಅಂಬರೀಶ್ ಒಬ್ಬರೇ. ಪ್ರಧಾನಿ ಮತ್ತೆ ಕರೆದರೂ ಅತ್ತ ತಿರುಗಿಯೂ ನೋಡಲಿಲ್ಲ. ಹಾಗಾಗಿ ಆತನ ನೆನಪು ಸದಾ ಚಿರಸ್ಥಾಯಿ ಆಗಿ ಉಳಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಾವು 37 ವರ್ಷದ ಗೆಳೆಯರು:
ನಾನು ಅಂಬರೀಶ್ ಸುಮಾರು 37 ವರ್ಷಗಳಿಂದ ಗೆಳೆಯರು. ಹಲವಾರು ಸಂದರ್ಭಗಳಲ್ಲಿ ಭೇಟಿ ಆಗದಿದ್ದರೂ ಕೂಡ ನಮ್ಮ ಪ್ರೀತಿ ವಿಶ್ವಾಸ ಹಾಗೇ ಇತ್ತು. ನಾನು ಚುನಾವಣೆಗೆ ನಿಂತ ಕ್ಷೇತ್ರದಲ್ಲಿ ಆತ ಗೊತ್ತಿಲ್ಲದೇ ವಿರೋಧ ಅಭ್ಯರ್ಥಿಯ ಪ್ರಚಾರಕ್ಕೆ ಬರುತ್ತಿದ್ದ. ಅಲ್ಲಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಎಂದು ಗೊತ್ತಾದ ಕೂಡಲೇ ನನ್ನ ಗೆಳೆಯನ ವಿರುದ್ಧ ನಾನು ಪ್ರಚಾರ ಮಾಡುವುದಿಲ್ಲ ಎಂದು ಅರ್ಧಕ್ಕೆ ವಾಪಸ್ ಹೋದರು. ಆತ ಜೀವಕ್ಕೆ ಜೀವ ಕೊಡುವ ಗೆಳೆಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂದಿನ ದಿನದ ತಮ್ಮ ಸ್ನೇಹವನ್ನು ನೆನೆಸಿಕೊಂಡರು.

ಆತ ಡಾಕ್ಟರ್ ಮಾತು ಕೇಳಲಿಲ್ಲ:
ಅಂಬರೀಶ್ ಆಸ್ಪತ್ರೆ ಸೇರುವ 2 ದಿನ ಮುಂಚೆ ನಾವು ಭೇಟಿ ಮಾಡಿದ್ದೆವು. ಡಾಕ್ಟರ್ ಸಹ ಬಂದದ್ದರು. ಆದರೆ ಅಂಬರೀಶ್ ಡಾಕ್ಟರ್ ಮಾತು ಕೇಳಲಿಲ್ಲ. ಸಿಂಗಪೂರ್ ನಲ್ಲಿದ್ದಾಗಲೂ ಆತ ನನ್ನೊಂದಿಗೆ ಮಾತನಾಡಿದ್ದರು. ಆತ ಉತ್ಸಾಹಪೂರ್ವಕವಾಗಿ ಬದುಕಿದ್ದರು. ಸುಮಲತಾ ಅವರ ಸಂತೋಷದಲ್ಲಿ ನಾವೆಷ್ಟು ಪಾಲುದಾರರೋ ಅವರ ದುಃಖದಲ್ಲೂ ನಾವು ಇರುತ್ತೀವಿ. ಅಂಬರೀಶ್ ಪುತ್ರ ಅಭಿಷೇಕ್ ಕೂಡ ಡಬಲ್ ರೆಬೆಲ್ ಇದಾನೆ. ರಾಜ್ಯದ ಜನರು ಅವನಿಗೂ ಆಶೀರ್ವಾದ ಮಾಡಬೇಕು. ಅಂಬರೀಶ್ ಗೆ ಕೊಟ್ಟ ಪ್ರೀತಿಗಿಂತ ಡಬಲ್ ಪ್ರೀತಿಯನ್ನು ಅಭಿಷೇಕ್ ಗೆ ಕೊಡಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಮ್ಯೂಸಿಯಂ ಕೂಡ ಮಾಡುತ್ತೀವಿ:
ಈಗ ಸ್ಮಾರಕ ಪೂರ್ತಿಯಾಗಿದೆ. ಹಾಗಾಗಿ ಅದನ್ನು ಉದ್ಘಾಟನೆ ಮಾಡಿದ್ದೇವೆ. ಮ್ಯೂಸಿಯಂ ಕೂಡ ಕೆಲವೇ ತಿಂಗಳಲ್ಲಿ ಪೂರ್ತಿಯಾಗಲಿದ್ದು, ನಾವೇ ಬಂದು ಅದನ್ನು ಉದ್ಘಾಟನೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಒರಟನಾದರೂ ಹೃದಯದಿಂದ ಮೃದು:
ಈ ನಡುವೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಅಂಬರೀಶ್ ನಮ್ಮನ್ನು ಅಗಲಿದ್ದರೂ ಅವರ ನೆನಪು ಸದಾ ಕಾಲ ನಮ್ಮಲ್ಲಿರುತ್ತದೆ. ಸಾವಿನ ನಂತರವೂ ಅಂಬರೀಶ್ ಬದುಕುತ್ತಿದ್ದಾರೆ. ಅವರ ಸವಿನೆನಪಿಗಾಗಿ ಸ್ಮಾರಕ ಹಾಗೂ ಮ್ಯೂಸಿಯಂ ಅನ್ನು ಸರ್ಕಾರ ಮಾಡುತ್ತಿದೆ. ನನ್ನ ಅತ್ಯಂತ ಆತ್ಮೀಯ ಮಿತ್ರನ ಸ್ಮಾರಕಕ್ಕೆ ನಾನೇ ಅಡಿಗಲ್ಲು ಹಾಕಿ ನಾನೇ ಉದ್ಘಾಟನೆ ಮಾಡುತ್ತಿರುವುದು ನನ್ನ ಯೋಗಾಯೋಗ. ಸರಳ ಹೃದಯಿ ಮಾತಿನಲ್ಲಿ ಒರಟನಾದರೂ ಹೃದಯದಿಂದ ಮೃದು. ಆತ ಕೊಡುಗೈ ದಾನಿ. ಆತನ ಸ್ಮಾರಕವನ್ನು ಜನರು ಬಂದು ನೋಡಿ ಅಭಿಮಾನ ಪಡಬೇಕು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಸಂಸದ ಸದಾನಂದ ಗೌಡ, ರಾಘವೇಂದ್ರ ರಾಜ್ ಕುಮಾರ್, ಸಚಿವ ಗೋಪಾಲಯ್ಯ, ಚಲನಚಿತ್ರ ಮಂಡಳಿ ಅಧ್ಯಕ್ಷ ಭಾಮಾ ಹರೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Tags: ABHISHEK AMBARISHambhareeshambhiambhi roadBJP Governmentbjpkarnatakacm bommaicmbommaiCongress PartysandalwoodşualathaSUMALATHA AMBARISHಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ಬಿಎಸ್​ವೈ ಮನೆ ಮೇಲೆ ಕಲ್ಲು ತೂರಾಟ ; ಪ್ರಚೋದನೆಗೆ ಬಂಜಾರ ಸಮುದಾಯ ಒಳಗಾಗಬಾರದು : ಸಿಎಂ ಮನವಿ

Next Post

ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಹೊರಬಂದಿದ್ದವನಿಂದ ಪುತ್ರನ ಬರ್ಬರ ಹತ್ಯೆ

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025
Next Post
ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಹೊರಬಂದಿದ್ದವನಿಂದ ಪುತ್ರನ ಬರ್ಬರ ಹತ್ಯೆ

ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಹೊರಬಂದಿದ್ದವನಿಂದ ಪುತ್ರನ ಬರ್ಬರ ಹತ್ಯೆ

Please login to join discussion

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada