ಬೆಂಗಳೂರು: ಉತ್ತರ ಪ್ರದೇಶದ ವಾರಣಾಸಿ ನ್ಯಾಯಾಧೀಶರ ವಿರುದ್ದ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ರಾಮನಗರ ಮೂಲದ ವಕೀಲ ಚಾನ್ ಪಾಷಾ ಇಜೂರ್ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಅನ್ನು ರದ್ದುಪಡಿಸುವಂತೆ ಮಾಡಿದ ಮನವಿಯನ್ನು ಕರ್ನಾಟಕ ಹೈ ಕೋರ್ಟ್ ತಿರಸ್ಕರಿಸಿದೆ.
ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಹಿಂದೂಗಳ ಆರಾಧನೆಗೆ ಅನುಮತಿ ನೀಡುವ ನಿರ್ಧಾರವನ್ನು ನ್ಯಾಯಾಧೀಶರು ಮಾಡಿದ್ದಕ್ಕೆ ವಕೀಲ ಕೆಟ್ಟ ಪದಗಳಲ್ಲಿ ನ್ಯಾಯಧೀಶರನ್ನು ನಿಂದಿಸಿದ್ದ. ರಾಮನಗರದ ಗೌಸಿಯಾ ನಗರದ ನಿವಾಸಿ ಚಾನ್ ಪಾಷಾ ಇಜೂರ್ ಅವರು ದಾಖಲಿಸಿದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ವಕೀಲರ ಬಿಡುಗಡೆ ಮಾಡುವಂತೆ ಇತ್ತೀಚೆಗೆ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರೂ ಎಫ್‌ಐಆರ್ ಅನ್ನು ರದ್ದುಪಡಿಸಲು ನಿರಾಕರಿಸಿದರು.
ಪೀಠವು, “ಎಫ್‌ಐಆರ್ ಅನ್ನು ರದ್ದುಪಡಿಸಲು ನಾನು ಮಧ್ಯಪ್ರವೇಶಿಸುವುದಿಲ್ಲ ಅಥವಾ ಅದರ ಮೇಲೆ ತಡೆ ನೀಡಲು ನಾನು ಅನುಮತಿಸುವುದಿಲ್ಲ,” ಎಂದು ವ್ಯಕ್ತಪಡಿಸಿತು ಮತ್ತು ವಿನಂತಿಯನ್ನು ತಿರಸ್ಕರಿಸಿತು. ವಕೀಲನು ತನ್ನ “ಪೋಸ್ಟ್‌ನಲ್ಲಿ ಬಳಸಲಾದ ಭಾಷೆಯು ತೀರಾ ಅವಹೇಳನಕಾರಿ ಆಗಿದೆ ಎಂದು ಪೀಠ ಗಮನಿಸಿತು. ಚಾನ್ ಪಾಷಾ ರಾಮನಗರದಲ್ಲಿ ವಕೀಲರಾಗಿದ್ದು, ಅವರೂ ತಮ್ಮ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ದಾಖಲಿಸಿದ್ದಾರೆ ಎಂದು ಅರ್ಜಿದಾರರ ವಕೀಲರು ಪೀಠಕ್ಕೆ ತಿಳಿಸಿದರು.
ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿತು, ವಿಚಾರಣಾ ನ್ಯಾಯಾಲಯದಲ್ಲಿಯೇ ಇದನ್ನು ಹೇಳಿ ಮೊಕದ್ದಮೆ ರದ್ದತಿಗೆ ಅಲ್ಲಿಯೇ ಅರ್ಜಿ ಸಲ್ಲಿಸುವಂತೆ ಸೂಚಿಸಿತು. ಫೆಬ್ರವರಿ 3, 2024 ರಂದು, ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪಿ.ಶಿವಾನಂದ ಎಂಬುವರು ದೂರು ದಾಖಲಿಸಿದ್ದು ತಾವು ಫೆಬ್ರವರಿ 2 ರಂದು, ಫೇಸ್‌ಬುಕ್ ಬ್ರೌಸ್ ಮಾಡುವಾಗ, ಚಾನ್ ಪಾಷಾ ಇಜುರ್ ಅವರ ಖಾತೆಯಲ್ಲಿ ಅವರು ಸ್ಥಳೀಯ ನ್ಯಾಯಾಧೀಶರ ಸುತ್ತ ಪ್ರಶ್ನಾರ್ಹ ಮತ್ತು ಅವಹೇಳನಕಾರಿ ಕಾಮೆಂಟ್‌ಗಳನ್ನು ಒಳಗೊಂಡ ಪೋಸ್ಟ್‌ಗೆ ಮಾಡಿದ್ದಾರೆ ಎಂದು ದೂರು ನೀಡಿದ್ದರು.
ಕಾನೂನು ಮತ್ತು ಸಮಾಜದಲ್ಲಿ ನಕಾರಾತ್ಮಕ ಅಂಶಗಳನ್ನು ಪ್ರಚೋದಿಸುವ ಉದ್ದೇಶವನ್ನು ಈ ಪೋಸ್ಟ್ ಹೊಂದಿದೆ ಎಂದು ದೂರುದಾರರು ಹೇಳಿದ್ದಾರೆ. ಅವರು ಪಾಷಾ ವಿರುದ್ಧ ಕಾನೂನುಬದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
ದೂರಿನ ಆಧಾರದ ಮೇಲೆ, ಪೊಲೀಸರು ಚಾನ್ ಪಾಷಾ ವಿರುದ್ಧ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ, ಶಾಂತಿಭಂಗ ಉಂಟು ಮಾಡಲು ಯಾವುದಾದರೂ ವ್ಯಕ್ತಿಗೆ ಪ್ರಚೋದನೆ ನೀಡಿದ, ದ್ವೇಷ ಭಾವನೆ ಮೂಡಿಸುವಂತ ಹೇಳಿಕೆ ನೀಡಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 504, 505(2) ಅಡಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.ಈ ಎಫ್‌ಐಆರ್ ರದ್ದು ಕೋರಿ ಚಾನ್ ಪಾಷಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.