ಡಿಸಿಎಂ ಡಿ ಕೆ ಶಿವಕುಮಾರ್ (Dcm DK Shivakumar) ಕಳೆದ 20 ವರ್ಷಗಳಿಂದ ಚನ್ನಪಟ್ಟಣಕ್ಕೆ (hannapattana) ಹೆಜ್ಜೆ ಇಟ್ಟಿಲ್ಲ. ಈಗ ಚುನಾವಣೆಗಾಗಿ ಭೇಟಿ ನೀಡ್ತಿದ್ದಾರೆ ಅಂತ ಡಿಕೆ ಬ್ರದರ್ಸ್ (Dk Brothers) ಚೆನ್ನಪಟ್ಟಣ ಸ್ಪರ್ಧೆ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಲೇವಡಿ ಮಾಡಿದ್ರು.

ಈ ಬಗ್ಗೆ ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು ಡಿ.ಕೆಶಿವಕುಮಾರ್ ನಾಟಕಗಳನ್ನು ಚನ್ನಪಟ್ಟಣದ ಜನ ನೋಡಿ ಬಿಟ್ಟಿದ್ದಾರೆ. ಚನ್ನಪಟ್ಟಣ ಜನ ಡಿಕೆ ಶಿವಕುಮಾರ, ಡಿಕೆ ಸುರೇಶಗೆ (Dk suresh) ಬೆಂಬಲಿಸಲ್ಲ. ಒಂದ್ವೇಳೆ ಎನ್ನಪಟ್ಟಣದಿಂದ ಸ್ಪರ್ಧಿಸಿದ್ರೆ ಅಲ್ಲೂ ಸೋಲು ಕಾಣಲಿದ್ದಾರೆ ಎಂದರು.
ಇನ್ನು ಲೋಕಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಮಾನ ಮಾರ್ಯಾದೆ ಹೋಗಿದೆ. ಹೀಗಿದ್ದರೂ ಚನ್ನಪಟ್ಟಣದತ್ತ ಮುಖ ಮಾಡ್ತಿದ್ದಾರೆ ಎಂದ್ರೆ ಇವರೆಂಥ ಜನ ಅನ್ನೋದು ಜನರಿಗೆ ಅರ್ಥ ಆಗಿದೆ. ಡಿ.ಕೆ ಶಿವಕುಮಾರ್ ನಾಟಕ ಚನ್ನಪಟ್ಟಣದಲ್ಲಿ ನಡೆಯಲ್ಲ, ಮೈತ್ರಿ ಅಭ್ಯರ್ಥಿಯೇ ಅಲ್ಲಿ ಗೆಲ್ಲೋದು ಎಂದು ಲೇವಡಿ ಮಾಡಿದ್ರು