ಶಿವಮೊಗ್ಗ ದಸರಾ ಉತ್ಸವ ಆಚರಣೆಗೆ ಹಣ ಮಂಜೂರು ಮಾಡಲು ಮಹಾನಗರ ಪಾಲಿಕೆ ಸರ್ವಪಕ್ಷಗಳ ನಿಯೋಗ ಸಿಎಂ ಸಿದ್ದರಾಮಯ್ಯನವರನ್ನು ಶುಕ್ರವಾರ (ಸೆಪ್ಟೆಂಬರ್1) ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಈ ಬಾರಿ ನಾಡ ಹಬ್ಬ ದಸರಾ ಹಬ್ಬವನ್ನು ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದಿಂದ1.5 ಕೋಟಿ ಹಣ ಮಂಜೂರು ಮಾಡುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರ ಸರ್ವ ಪಕ್ಷಗಳ ನಿಯೋಗ ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ಶುಕ್ರವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿತು.

ಶಿವಮೊಗ್ಗ ದಸರಾ ಹಿನ್ನೆಲೆ ಬಂದಿದ್ದ ನಿಯೋಗದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರ ನಾಯ್ಕ, ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್, ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೀಶ್, ನಾಗರಾಜ ಕಂಕಾರಿ, ಧೀರರಾಜ್ ಹೊನ್ನವಿಲೆ, ವಿಶ್ವಾಸ್ , ಎಸ್ ಜಿ ರಾಜು, ಆರ್.ಸಿ. ನಾಯ್ಕ್, ಸುವರ್ಣ ಶಂಕರ್, ಭಾನುಮತಿ ವಿನೋದ್ ಹಾಗೂ ಯುವ ಮುಖಂಡರಾದ ಶಂಕರ ನಾಯ್ಕ, ಕೆ ರಂಗನಾಥ್ ಇನ್ನಿತರರಿದ್ದರು.











