• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಭಾರತದ ನಿರುದ್ಯೋಗ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಬಲ್ಲ ಗಿಗ್ ಆರ್ಥಿಕತೆಯಲ್ಲಿ ಎಲ್ಲವೂ ಸರಿಯಿದೆಯೇ?

ಫಾತಿಮಾ by ಫಾತಿಮಾ
May 12, 2022
in ಅಭಿಮತ
0
ಭಾರತದ ನಿರುದ್ಯೋಗ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಬಲ್ಲ ಗಿಗ್ ಆರ್ಥಿಕತೆಯಲ್ಲಿ ಎಲ್ಲವೂ ಸರಿಯಿದೆಯೇ?
Share on WhatsAppShare on FacebookShare on Telegram

ರಷ್ಯಾ-ಉಕ್ರೇನ್ ಯುದ್ಧದ ಮುಂದುವರಿಕೆಯು ವಿಶ್ವಾದ್ಯಂತ ಹಣದುಬ್ಬರ ಮತ್ತು ನಿರುದ್ಯೋಗದ ಭಯವನ್ನು ಹೆಚ್ಚಿಸುತ್ತಿದೆ. ವಿಶ್ವದ ಅತಿದೊಡ್ಡ ಆರ್ಥಿಕತೆಯಾದ ಯುಎಸ್, 41 ವರ್ಷಗಳ ಗರಿಷ್ಠ ಹಣದುಬ್ಬರ 8.1% ಅನ್ನು ಈ ಮಾರ್ಚಲ್ಲಿ ದಾಖಲಿಸಿದೆ. ಇಡೀ ಜಗತ್ತು ಹೊಸ ರೀತಿಯ ಆರ್ಥಿಕತೆಗೆ ತೆರೆದುಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಡಿಯಾಗುತ್ತಿದೆ. ಸಂಘಟಿತ ವಲಯದ ಉದ್ಯೋಗ ಸೃಷ್ಡಿ ಮತ್ತು ಅವಕಾಶ ಕಡಿಮೆಯಾಗಿ ಗಿಗ್ ಆರ್ಥಿಕತೆ ರೂಪುಗೊಳ್ಳುತ್ತಿದೆ. ನಿರುದ್ಯೋಗ ಸಮಸ್ಯೆಗೆ ಇದು ತಾತ್ಕಾಲಿಕ ಪರಿಹಾರವನ್ನು ಸೂಚಿಸಿದರೂ ದೀರ್ಘಕಾಲಿನ ಪರಿಹಾರವಾಗಬಹುದೇ ಎನ್ನುವುದರ ಬಗ್ಗೆ ಆರ್ಥಿಕ ತಜ್ಞರಿಗೆ ಸಹಮತವಿಲ್ಲ.

ADVERTISEMENT

ಭಾರತದಲ್ಲೇ ಈಗ ಸುಮಾರು 15 ಮಿಲಿಯನ್ ಗಿಗ್ ಕೆಲಸಗಾರರಿದ್ದಾರೆ. ಡೆಲಿವರಿ ಹುಡುಗರು, ಕ್ಲೀನರ್ಗಳು, ಸಲಹೆಗಾರರು, ಬ್ಲಾಗರ್ಗಳು ಮುಂತಾದವರೆಲ್ಲರೂ ಗಿಗ್ ಆರ್ಥಿಕತೆಯ ಭಾಗವಾಗಿದ್ದಾರೆ. ಈ ಕೆಲಸವು ಮೊಬೈಲ್ ಆ್ಯಪ್ ಮೂಲಕವೇ ನಡೆಯುವುದರಿಂದ ಕಾರ್ಮಿಕರು ಒಂದಕ್ಕಿಂತ ಹೆಚ್ಚು ಗುತ್ತಿಗೆದಾರರಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಫುಡ್ ಡೆಲಿವರಿ ಬಾಯ್ Swiggy ಮತ್ತು Zomato ಎರಡರಲ್ಲೂ ಕೆಲಸ ಮಾಡಬಹುದು ಮತ್ತು ಸಮಯವಿದ್ದರೆ Uber ಅನ್ನೂ ಚಾಲನೆ ಮಾಡಬಹುದು. ಅಂತೆಯೇ, ಅಗ್ರಿಗೇಟರ್ಗಳು ಒಂದಕ್ಕಿಂತ ಹೆಚ್ಚು ರೀತಿಯ ಸೇವೆಗಳನ್ನು ಒದಗಿಸಬಹುದು. ಉದಾಹರಣೆಗೆ, ಸಾಮಾನ್ಯವಾಗಿ ಟ್ಯಾಕ್ಸಿ ಸರ್ವೀಸ್ ಅಗ್ರಿಗೇಟರ್ ಎಂದು ಕರೆಯಲ್ಪಡುವ ಉಬರ್, ಆಹಾರ ವಿತರಣೆ ಮತ್ತು ಆನ್ಲೈನ್ ಟೇಕ್ ಔಟ್ ಸೇವಾ ಅಪ್ಲಿಕೇಶನ್ ಆಗಿರುವ ಉಬರ್ ಈಟ್ಸ್ ಅನ್ನು ಸಹ ಹೊಂದಿದೆ.

ಗಿಗ್ ಆರ್ಥಿಕತೆಯು ಹೆಚ್ಚಿನ ಸಂಖ್ಯೆಯ ಖರೀದಿದಾರರು ಮತ್ತು ಮಾರಾಟಗಾರರಿಗೆ ಅವಕಾಶ ಕಲ್ಪಿಸುತ್ತದೆ. ಅಲ್ಲದೆ ಈ ಆರ್ಥಿಕತೆಯು ಉದ್ಯೋಗ ಹುಡುಕಾಟ ವೆಚ್ಚಗಳಿಗೆ ಸಂಬಂಧಿಸಿದ ಮಾಹಿತಿ ಅಸಮಾನತೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಉದಾಹರಣೆ, ಭಾರತದಲ್ಲಿ, ಡಿಜಿಟಲ್ ಪ್ರಪಂಚದ ಆಗಮನದ ಮೊದಲು, ಉದ್ಯೋಗಾಕಾಂಕ್ಷಿಗಳು ತಮ್ಮ ಉದ್ಯೋಗ ಹುಡುಕಾಟಕ್ಕಾಗಿ ರಾಷ್ಟ್ರೀಯ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಲು ಕೆಲವೊಮ್ಮೆ ಇಡೀ ದಿನ ಕಾಯಬೇಕಾಗಿ ಬರುತ್ತಿತ್ತು.

ಇನ್ನೊಂದೆಡೆ ಗಿಗ್ ಆರ್ಥಿಕತೆ ವೇತನದಲ್ಲಿನ ಅಸಮಾನತೆಯನ್ನು ಕಡಿಮೆ ಮಾಡುತ್ತಿದೆ. ಇದು ಟಾಸ್ಕ್ ಆಧಾರಿತ ಸೇವೆಯಾಗಿರುವುದರಂದ ಗ್ರಾಹಕರ ರೇಟಿಂಗ್ ವ್ಯವಸ್ಥೆಗಳು ದೀರ್ಘಾವಧಿಯಲ್ಲಿ ಹೆಚ್ಚು ಪ್ರಮಾಣಿತ ಮತ್ತು ಸಮರ್ಥ ಪೂರೈಕೆದಾರರಿಗೆ ಮಾತ್ರ ಆದಾಯವನ್ನು ನೀಡುತ್ತವೆ ಎಂಬುವುದನ್ನು ಖಚಿತಪಡಿಸುತ್ತದೆ. ಮತ್ತು ಲಿಂಗಾಧಾರಿತ ವೇತನ ಅಸಮಾನತೆಯನ್ನೂ ಇದು ತೊಡೆದು ಹಾಕುತ್ತಿದೆ. ಆಗ್ನೇಯ ಏಷ್ಯಾದಲ್ಲಿ ಆಹಾರ ವಿತರಣಾ ವ್ಯವಹಾರದಲ್ಲಿ ಕೆಲಸ ಮಾಡುವ ಹೆಚ್ಚಿನ ಕಾರ್ಮಿಕರು ಮಹಿಳಾ ಕಾರ್ಮಿಕರು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪ್ರದೇಶದಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ ಸೌಕ್ಟೆಲ್ನ 15,000 ಬಳಕೆದಾರರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರಿದ್ದಾರೆ, ಆದರೆ ಅದೇ ಪ್ರದೇಶದಲ್ಲಿ ಮಹಿಳಾ ಕಾರ್ಮಿಕ ಬಲವಿರುವುದು ಕೇವಲ 19% ಮಾತ್ರ.

ಗಿಗ್ ಆರ್ಥಿಕತೆಗೆ ಸಂಬಂಧಿಸಿದ ಸೇವೆಗಳ ಕಡಿಮೆ ಬೆಲೆಯು ಗ್ರಾಹಕರಿಗೆ ಹೆಚ್ಚುವರಿ ಆಯ್ಕೆಗಳನ್ನು ಸೃಷ್ಟಿಸಿದೆ, ಇದನ್ನು ಇತರ ವಲಯಗಳಲ್ಲಿ ಖರ್ಚು ಮಾಡಬಹುದಾಗಿದೆ, ಇದು ಆದಾಯ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಪರಿಣಾಮವನ್ನು ಬೀರುತ್ತದೆ. ಉದಾಹರಣೆಗೆ, ಉಬರ್ ಮತ್ತು ಓಲಾ ಮೂಲಕ ಟ್ಯಾಕ್ಸಿ ಸೇವೆಗಳನ್ನು ಪರಿಚಯಿಸಿದ ನಂತರ, ಭಾರತದ ಪ್ರಮುಖ ನಗರಗಳಲ್ಲಿ ಟ್ಯಾಕ್ಸಿ ದರಗಳನ್ನು ಕಡಿಮೆಗೊಳಿಸಲಾಯಿತು. ಮದ್ಯಪಾನದಿಂದಾಗುವ ವಾಹನ ಅಪಘಾತಗಳು ಮತ್ತು ಸಂಚಾರ ದಟ್ಟಣೆಯೂ ಕಡಿಮೆಯಾಗಿದೆ. ಕಾರ್ಪೂಲಿಂಗ್ ಮತ್ತು ಕಾರ್ ಹಂಚಿಕೆ ಕಡಿಮೆ ಇಂಗಾಲ ಹೊರಸೂಸುವಿಕೆಗೂ ಕೊಡುಗೆ ನೀಡುತ್ತದೆ

ಆದರೆ ಗಿಗ್ ಆರ್ಥಿಕತೆಯು ತನ್ನದೇ ಆದ ಸಮಸ್ಯೆಗಳನ್ನು ಹೊಂದಿದೆ. ಅದರಲ್ಲೂ ಕಾರ್ಮಿಕ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಗಂಭೀರ ಸವಾಲುಗಳನ್ನು ಹೊಂದಿದೆ. ಗಿಗ್ ಕೆಲಸಗಾರರು ಪ್ರಮಾಣಿತ ಉದ್ಯೋಗಿ ಒಪ್ಪಂದಗಳ (standard employee contracts) ಅಡಿಯಲ್ಲಿ ಒಳಗೊಳ್ಳುವುದಿಲ್ಲ. ಅನಾರೋಗ್ಯಕ್ಕೆ ಒಳಗಾಗುವುದು ಅಥವಾ ವ್ಯಾಪಾರದ ಕುಸಿತದಂತಹ ಕಾರಣದಿಂದ ಕೆಲಸ ಮಾಡಲು ವಿಫಲವಾದರೆ ಕಾರ್ಮಿಕರಿಗೆ ಕಂಪೆನಿಯ ಕಡೆಯಿಂದ ಯಾವುದೇ ಸಹಾಯ ಲಭಿಸುವುದಿಲ್ಲ. ಈ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆಗಳಿರುವುದಿಲ್ಲ. ಗಿಗ್ಗಳನ್ನು ತಮ್ಮ ಪೂರ್ಣ ಸಮಯದ ಕೆಲಸವೆಂದು ಪರಿಗಣಿಸುವವರು ಕಂಪನಿಯ ಉದ್ಯೋಗಿಗಳಾಗಿರುವುದಿಲ್ಲ, ಆದ್ದರಿಂದ ಅವರು ಉದ್ಯೋಗಿಗಳಿಗೆ ಒದಗಿಸಲಾದ ಆರೋಗ್ಯ ವಿಮೆ, ಪಾವತಿಸಿದ ಸಮಯ, ಕುಟುಂಬ ರಜೆ ರಕ್ಷಣೆ ಮುಂತಾದ ಯಾವುದೇ ಇತರ ಪ್ರಯೋಜನಗಳನ್ನು ಪಡೆಯುವುದಿಲ್ಲ.

ಅಲ್ಲದೆ, ಕಾರ್ಮಿಕರು ಮತ್ತು ಗ್ರಾಹಕರನ್ನು ಶೋಷಿಸುವ ಕಂಪನಿಗಳ ಚಟುವಟಿಕೆಗಳನ್ನು ತಡೆಯಲು ಯಾವುದೇ ಕಾನೂನುಗಳಿಲ್ಲ. ಇತ್ತೀಚೆಗೆ ‘Competition Commission of India’ ಸ್ವಿಗ್ಗಿ ಮತ್ತು ಝೊಮಾಟೊ ಕಂಪೆನಿಗಳ ವ್ಯಾಪಾರದಲ್ಲಿನ ಅಸಮರ್ಪಕ ನೀತಿಗಳಿಗಾಗಿ ತನಿಖೆಗೆ ಆದೇಶಿಸಿದೆ.

ಇನ್ನೊಂದೆಡೆ ಭಾರತದಲ್ಲಿ, ಡೇಟಾ ಗೌಪ್ಯತೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ತುರ್ತಾಗಿ ರಚಿಸಿ ಮತ್ತು ಜಾರಿಗೊಳಿಸಬೇಕು ಎಂಬ ಕೂಗೂ ಎದ್ದಿದೆ. ಏಕೆಂದರೆ ಡಿಜಿಟಲ್ ಜಗತ್ತಿನಲ್ಲಿ, ಪ್ಲಾಟ್ಫಾರ್ಮ್ಗಳಿಂದ ಸಂಗ್ರಹಿಸಲಾದ ವ್ಯಕ್ತಿಗತ ಮಾಹಿತಿಗಳು ಮತ್ತು ಅವರ ಚಟುವಟಿಕೆಗಳ ಬಗೆಗಿನ ಅಪಾರ ಪ್ರಮಾಣದ ಡೇಟಾವನ್ನು ಗ್ರಾಹಕರ ಒಪ್ಪಿಗೆಯನ್ನು ತೆಗೆದುಕೊಳ್ಳದೆಯೇ ವಿವಿಧ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಗ್ರಾಹಕರ ವೈಯಕ್ತಿಕ ಡಾಟಾವನ್ನು ಸಂಹ್ರಹಿಸುವ ಫೇಸ್ಬುಕ್, ನೆಟ್ಫ್ಲಿಕ್ಸ್, ಗೂಗಲ್ ಮುಂತಾದ ದೊಡ್ಡ ಕಂಪನಿಗಳು ಯಾವುದೇ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿಲ್ಲ ಮತ್ತು ಗ್ರಾಹಕರ ಅರಿವಿಗೆ ಬಾರದೆಯೇ ತಮ್ಮಲ್ಲಿನ ಡಾಟಾವನ್ನು ಇತರ ಕಂಪೆನಿಗಳೊಂದಿಗೆ ಹಂಚಿಕೊಳ್ಳುತ್ತವೆ. ಮುಖ್ಯವಾಗಿ ಸ್ವಿಗ್ಗಿ, ಝೊಮಾಟೋದಂತಹ ಫುಡ್ ವಿತರಣಾ ಕಂಪೆನಿಗಳೊಂದಿಗೆ. ಹಾಗಾಗಿ ಖಾಸಗಿತನದ ಹರಾಜೂ ಗಿಗ್ ಆರ್ಥಿಕತೆಯ ಇನ್ನೊಂದು ಅಡ್ಡ ಪರಿಣಾಮ ಅನ್ನಬಹುದು.

ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವ ಅದರಲ್ಲೂ ಕೋವಿಡ್ ನಂತರದ ಬೆಳವಣಿಗೆಗಳಲ್ಲಿ ನಿರುದ್ಯೋಗದ ಪ್ರಮಾಣವನ್ನು ತಕ್ಕ ಮಟ್ಟಿಗೆ ತಗ್ಗಿಸಲು ನೆರವಾದ ಗಿಗ್ ಆರ್ಥಿಕತೆಯನ್ನು ಸಾರಾಸಗಟಾಗಿ ತಿರಸ್ಕರಿಸಲು ಸಾಧ್ಯವಿಲ್ಲ. ಎಜುಕೇಶನ್ ಕ್ವಾಲಿಫಿಕೇಷನ್, ಅನುಭವ, ತಜ್ಞತೆ ಇದ್ಯಾವುದನ್ನೂ ಬೇಡದ ಗಿಗ್ ಕೆಲಸ ಲಕ್ಷಾಂತರ ಜನರಿಗೆ ಅನ್ನ, ಆಸರೆ ನೀಡಿದೆ. ಆದರೆ ಈ ಕಾರ್ಮಿಕರಿಗೂ ಉದ್ಯೋಗ ಭದ್ರತೆ, ಆರ್ಥಿಕ ಭದ್ರತೆಯ ಅಗತ್ಯವಿದ್ದು ಸರ್ಕಾರ ಮತ್ತು ಸಂಬಂಧಿತ ಸಚಿವಾಲಯಗಳು ಸಮರ್ಪಕ ನಿಯಂತ್ರಣಾ ಸಂಸ್ಥೆಗಳು ಮತ್ತು ನಿಯಮಗಳನ್ನು ಅಗತ್ಯವಾಗಿ ರೂಪಿಸಬೇಕು.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ಸಂಪುಟ ವಿಸ್ತರಣೆ : ಯಾವಾಗ ಏನು ಬೇಕಾದರೂ ಆಗಬಹುದು – ಸಿಎಂ ಬೊಮ್ಮಾಯಿ

Next Post

ಇವಿಎಂ ಬಗ್ಗೆ ಕಾಂಗ್ರೆಸ್‌ ಮತ್ತೆ ಅಪಸ್ವರ: ವಿಶ್ವದ ಯಾವೆಲ್ಲಾ ದೇಶಗಳಲ್ಲಿ ಇವಿಎಂಗಿದೆ ಮಾನ್ಯತೆ?

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಇವಿಎಂ ಬಗ್ಗೆ ಕಾಂಗ್ರೆಸ್‌ ಮತ್ತೆ ಅಪಸ್ವರ: ವಿಶ್ವದ ಯಾವೆಲ್ಲಾ ದೇಶಗಳಲ್ಲಿ ಇವಿಎಂಗಿದೆ ಮಾನ್ಯತೆ?

ಇವಿಎಂ ಬಗ್ಗೆ ಕಾಂಗ್ರೆಸ್‌ ಮತ್ತೆ ಅಪಸ್ವರ: ವಿಶ್ವದ ಯಾವೆಲ್ಲಾ ದೇಶಗಳಲ್ಲಿ ಇವಿಎಂಗಿದೆ ಮಾನ್ಯತೆ?

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada