ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ. ಯುಪಿಯ ಅಧಿಕೃತ ವಿರೋಧ ಪಕ್ಷವಾಗಿರುವ ಸಮಾಜವಾದಿ ಪಕ್ಷದ ನಾಯಕರಾಗಿರುವ ಅಖಿಲೇಶ್ ತಾವು ಚುನಾವಣೇಯಿಂದ ದೂರವಿರುವುದಾಗಿ ಸೋಮವಾರ ಘೋಷಿಸಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶ ಚುನಾವಣೆಗೆ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಜೊತೆ ಮೈತ್ರಿ ಅಂತಿಮಗೊಂಡಿದೆ. ಇನ್ನಷ್ಟೆ ಸೀಟು ಹಂಚಿಕೆ ಕುರಿತು ಅಂತಿವಾಗಬೇಕಿದೆ ಎಂದು ಅಖಿಲೇಶ್ ತಿಳಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿ ಮತ್ತು ಆರ್‌ಎಲ್‌ಡಿ ಒಟ್ಟಾಗಿ ಆಡಳಿತರೂಢ ಬಿಜೆಪಿಯನ್ನು ಎದುರಿಸಲಿದೆ ಎಂದು ಹೇಳಿದ್ದಾರೆ.
ಆರ್‌ಎಲ್‌ಡಿ ಪಕ್ಷವು ಪಶ್ಚಿಮ ಉತ್ತರ ಪ್ರದೇಶದ ರೈತರ ಬೆಂಬಲವನ್ನು ಹೊಂದಿದೆ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸುವ ವಿಷಯದಲ್ಲಿ ಎಸ್ಪಿಯ ರೀತಿಯಲ್ಲೇ ಸಮಾನ ಮನಸ್ಥಿತಿ ಹೊಂದಿದೆ ಎಂದು ಹೇಳಿದ್ದಾರೆ.
ಈಗಾಗಲೇ ಎಸ್‌ಬಿಎಸ್‌ಪಿ ರಾಜ್ಭರ್ ಅವರ ಸುಹೇಲ್ದೇವ ಭಾರತೀಯ ಸಮಾಜ ಪಕ್ಷದೊಂದಿಗೆ ಸಹ ಮೈತ್ರಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

ಅಜಂಗರ್‌ನ ಸಂಸತ್ ಸದಸ್ಯರೂ ಆಗಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಅಖಿಲೇಶ್ ಚುನಾವಣೆ ಸ್ಪರ್ಧೆಯಿಂದ ದೂರ ಉಳಿದಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ ಮತ್ತು ಅಖಿಲೇಶ್ರ ಈ ನಿರ್ಧಾರ ಎಲ್ಲರಲ್ಲು ಅಚ್ಚರಿ ಮೂಡಿಸಿದೆ.
ಎಸ್ಬಿಎಸ್ಪಿ ಪಕ್ಷದೊಂದಿಗೆ ಮೈತ್ರಿಯ ಬಗ್ಗೆ ಮಾತನಾಡಿದ ಅಖಿಲೇಶ್ ಇದು ಒಂದು ಸಹಜ ಮೈತ್ರಿ ಎಂದು ಹೇಳಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ಜನರು ಈ ಪಕ್ಷವನ್ನು ಒಪ್ಪಿಕೊಂಡಿರುವ ಕಾರಣ ನಾವು ಈ ಮೈತ್ರಿಯನ್ನು ಮಾಡಿಕೊಂಡಿದ್ದೇವೆ. ಇದರಿಂದಾಗಿ ಬಿಜೆಪಿಯ ಸೋಲು ಖಚಿತ ಎಂದು ಹೇಳಿದ್ದಾರೆ.
ಬಿಜೆಪಿ ಕೇವಲ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರನ್ನು ವಂಚಿಸುತ್ತಿದೆ. ಜನರು ಬಿಜೆಪಿಗೆ ಪರ್ಯಾಯವಾಗಿ ಎಸ್ಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಲಿದ್ದು ಬಿಎಸ್ಪಿ, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಎಸ್ಪಿಗೆ ರಾಜಕೀಯ ಪಕ್ಷಗಳ ಮುಖಂಡರು ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಜನರು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಅನುಭವಿಸಿದ ನೋವು, ಯಾತನೆಯನ್ನು ಇನ್ನು ಮರೆತಿಲ್ಲ. ಸಾಂಕ್ರಾಮಿಕದ ಸಮಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಜನರಿಗೆ ಸಹಾಯ ಮಾಡಿದ ಕಾರಂಕ್ಕಾಗಿ ಅವರುಗಳ ಮೇಲೆ ಪ್ರಕರಣವನ್ನ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಯುಪಿಯಲ್ಲಿ ಚುನಾವಣೆ ಪ್ರಚಾರ ಪೈಪೋಟಿ ಹೆಚ್ಚುತ್ತರುವ ಸಮಯದಲ್ಲಿ ಸಮಾಜವಾದಿ ಪಕ್ಷದಲ್ಲಿ ಯಾದವಿ ಕಲಹ ಜೋರಾಗಿದ್ದು ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹ ಮುಗಿಯುವ ಮುನ್ಸೂಚನೆ ತೋರುತ್ತಿಲ್ಲ. ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಮಾಜಿ ಸಚಿವ ಶಿವಪಾಲ್ ಯಾದವ್ ಈ ಹಿಂದೆ ಪ್ರತ್ಯೇಕವಾಗಿ ಯುಪಿಯಲ್ಲಿ ರಥಯಾತ್ರೆ ನಡೆಸುದ್ದರು.

2017ರ ಚುನಾವಣೆಗು ಮೊದಲು ಶುರುವಾದ ಸಂಘರ್ಷದಲ್ಲಿ. ಚುನಾವಣೆ ಸೋಲಿನ ಬಳಿಕ ತಣ್ಣಗಾಗಿದ್ದ ಈ ಇಬ್ಬರು ನಾಯಕರ ಮುನಿಸು ಪುನಃ ಆರಂಭಗೊಂಡಿದೆ. ಮುಂಬರುವ ಚುನಾವಣೆಯಲ್ಲಿ ಈ ಇಬ್ಬರು ನಾಯಕರು ಪ್ರತ್ಯೇಕವಾಗಿ ಸಮಾವೇಶವನ್ನು ನಡೆಸಲು ಈ ಇಬ್ಬರು ನಾಯಕರು ಪಣತೊಟ್ಟಿದ್ದಾರೆ. ಚಿಕ್ಕಪ್ಪ-ಮಗನ ಕಿತ್ತಾಟದಲ್ಲಿ ಈ ಬಾರಿಯು ಎಸ್ಪಿಗೆ ಅದೃಷ್ಟ ಖುಲಾಯಿಸುವುದು ಅನುಮಾನ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಮುಲಾಯಂ ಸಿಂಗ್ ಯಾದವ್ರವರು ತಮ್ಮ ರಾಜಕೀಯ ಪ್ರಭಾವ ಕುಂದುತ್ತಿದ್ದೆ ಎಂದು ತಿಳಿದ ಕೂಡಲೇ ಅವರ ಪುತ್ರ ಅಖಿಲೇಶ್ ಪಕ್ಷದ ಮೇಲೆ ಹಿಡಿತ ಸಾಧಿಸಲು ಶುರು ಮಾಡಿದ್ದರು.ಒಂದು ಅವಧಿಗೆ (2012-17) ಮುಖ್ಯಮಂತ್ರಿಯಾದ ಬಳಿಕ ಅಖಿಲೇಶ್ ಪಕ್ಷದಲ್ಲಿ ತಮ್ಮದೇ ಮಾತು ನಡೆಯಬೇಕು ಎಂಬ ಹಠ ಹೆಚ್ಚಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಎಂಬ ಪಕ್ಷವನ್ನ ಸ್ಥಾಪಿಸಿ ವಿಧಾನಸಭೆ ಚುನಾವಣೇಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು. ಇದರಿಂದ ಚುನಾವಣೆ ಸಮಯದಲ್ಲಿ ಮತಗಳು ವಿಭಜನೆಯಾಗಿ ಎಸ್ಪಿ ರಾಜ್ಯದಲ್ಲಿ ಹೀನಾಯ ಸೋಲನ್ನು ಅನುಭವಿಸಿ ಬಿಜೆಪಿ ಅಧಿಕಾರದ ಗದ್ದುಗೆಯನ್ನ ಏರಿತ್ತು.
ಇದೀಗ ಮತ್ತೊಂದು ಚುನಾವಣೆ ಸಮೀಪಿಸಿದರು ಸಹ ಇವರಿಬ್ಬರ ಮುನಿಸು ಕಡಿಮೆಯಾಗುವ ಯಾವುದೇ ಮುನ್ಸೂಚನೆ ನೀಡಿಲ್ಲ. ತಮ್ಮ ಚಿಕ್ಕಪ್ಪನ ಜೊತೆಗಿನ ವೈಮನಸ್ಸನ್ನು ಸರಿ ಮಾಡಿಕೊಳ್ಳದೆ ಅಖಿಲೇಶ್ ಯಾದವ್ ಹೊಸ ಮೈತ್ರಿಗೆ ಮುಂದಾಗಿದ್ದಾರೆ. ಈ ಮೂಲಕ ಚಿಕ್ಕಪ್ಪನನ್ನು ಬಿಟ್ಟು ಅಖೀಲೇಶ್ ಚುನಾವಣೆ ಎದುರಿಸಲು ಮುಂದಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಮತ್ತು ತಮ್ಮ ಪಕ್ಷದಿಂದ (ಎಸ್ಪಿ)ಯಿಂದ ಅವರಿಗೆ ತಕ್ಕ ಗೌರವ ಸಿಗಲಿದೆ ಎಂದು ಕುಟುಕಿದ್ದಾರೆ.