• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, November 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಇಂಧನ ಬೆಲೆ ಏರಿಕೆ ವಿರುದ್ಧ ಆಯೋಜಿಸಿದ ಪ್ರತಿಭಟನೆ ನಟನ ಕಾರು ಧ್ವಂಸದೊಂದಿಗೆ ಅಂತ್ಯ.!

Any Mind by Any Mind
November 1, 2021
in ದೇಶ
0
ಇಂಧನ ಬೆಲೆ ಏರಿಕೆ ವಿರುದ್ಧ ಆಯೋಜಿಸಿದ ಪ್ರತಿಭಟನೆ ನಟನ ಕಾರು ಧ್ವಂಸದೊಂದಿಗೆ ಅಂತ್ಯ.!
Share on WhatsAppShare on FacebookShare on Telegram

ಕೇರಳ ಎಂದರೆ ಹರತಾಳ್‌ ಅನ್ನುವಂತೆ ಕೇರಳದ ರಾಜಕೀಯ ಪಕ್ಷಗಳು ಮಾಡಿವೆ. ಕೇರಳದಲ್ಲಿ ಯಾವಾಗ ಪ್ರತಿಭಟನೆಗಳು ನಡೆಯುತ್ತೆ, ಯಾವಾಗ ಬಸ್‌ ಇಲ್ಲದೆ ಪರದಾಡಬೇಕು, ಯಾವಾಗ ಪ್ರತಿಭಟನಾ ನಿಮಿತ್ತ ಟ್ರಾಫಿಕ್‌ ಉಂಟಾಗಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲವೆಂಬ ಪರಿಸ್ಥಿತಿ ಕೇರಳದಲ್ಲಿ ವ್ಯಾಪಕವಾಗಿತ್ತು. ಕೇರಳದಲ್ಲಿ ನಡೆಯುವ ಪ್ರತಿಭಟನೆಗಳ ಬಗ್ಗೆ ಹಲವು ಮಳೆಯಾಲಂ ಸಿನೆಮಾಗಳಲ್ಲಿ ವಿಡಂಬನೆಗಳ ಮೂಲಕ ಟೀಕೆ ಮಾಡಲಾಗುತ್ತಿತ್ತು.

ADVERTISEMENT

ಇದೀಗ ಅಂತಹದ್ದೇ ಪ್ರತಿಭಟನೆಯೊಂದು ಸಿನೆಮಾ ನಟರೊಬ್ಬರ ಕಾರಿನ ಗಾಜು ಒಡೆಯುವಲ್ಲಿ ಪರ್ಯಾವಸಾನಗೊಂಡಿದೆ. ಇಂಧನ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಎಡಪಲ್ಲಿ-ವೈಟಿಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ  ಕೇರಳ ಕಾಂಗ್ರೆಸ್‌ ಹಮ್ಮಿಕೊಂಡ ಪ್ರತಿಭಟನೆಯಿಂದಾಗಿ ಎರಡು ತಾಸುಗಳಿಗೂ ಅಧಿಕ ಕಾಲ ಸಾರ್ವಜನಿಕರು ಪರದಾಡುವಂತಾಗಿತ್ತು. ಇದರಿಂದಾಗಿ ಉಂಟಾದ ಟ್ರಾಫಿಕ್‌ ಜಾಮಿನಲ್ಲಿ ಎರಡು ತಾಸುಗಳಿಗೂ ಅಧಿಕ ಕಾಲ ಸಿಲುಕಿಕೊಂಡ ಮಲೆಯಾಳಂ ಖ್ಯಾತ ನಟ ಪ್ರತಿಭಟನಾಕಾರರ ವಿರುದ್ಧ ಸ್ಥಳದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರಿನಿಂದ ಇಳಿದ ರಾಜ್ಯಪ್ರಶಸ್ತಿ ವಿಜೇತ ನಟ ಜೋಜು ಜೋರ್ಜ್‌ ನಿಮ್ಮ ಪ್ರತಿಭಟನೆಗಳು ಸಾಮಾನ್ಯ ಜನರಿಗೆ ತೊಂದರೆ ಕೊಡುವಂತಿರಬಾರದು, ಕಳೆದ ಎರಡು ಗಂಟೆಗಳಿಂದಲೂ ಅಧಿಕ ಕಾಲ ಜನರು ರಸ್ತೆಯಲ್ಲೇ ಸಿಲುಕಿಕೊಂಡಿದ್ದಾರೆ ಎಂದು ಪ್ರತಿಭಟನಾನಿರತ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಇದು ನಟ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ಜಟಾಪಟಿಗೆ ಕಾರಣವಾಗಿದ್ದು, ನಟನ ವಿರುದ್ಧ ಕೆಂಡಾಮಂಡಲರಾದ ಕಾಂಗ್ರೆಸ್‌ ಕಾರ್ಯಕರ್ತರು ನಟನ ಕಾರಿನ ಗ್ಲಾಸು ಹೊಡೆದು ದಾಂಧಲೆ ಮಾಡಿದ್ದಾರೆ.

ನಟ ಕುಡಿದ ಮತ್ತಿನಲ್ಲಿದ್ದರು ಹಾಗೂ ಮಹಿಳಾ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಕಾರ್ಯಕರ್ತರು ನಟನ ವಿರುದ್ಧ ದೂರು ದಾಖಲಿಸಿದ್ದಾರೆ. ನಟನನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಕಾಂಗ್ರೆಸ್ ಕೂಡ ನಟನ ವಿರುದ್ಧ ದೂರು ದಾಖಲಿಸಿದೆ, ಈ ಕಾರಣದಿಂದಾಗಿ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಪೊಲೀಸರು ನಟನ ವಾಹನವನ್ನೂ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಹಾಗೂ ಅವರ ವಾಹನದ ಗಾಜು ಒಡೆದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

#standwithJojuGeorge #joju #JojuGeorge 🔥 pic.twitter.com/ye61DZwTnC

— shibi🇮🇳♥️ (@shibi_meppayour) November 1, 2021

ಪ್ರತಿಭಟನೆ ಮಾಡಲು ಯಾವುದೇ ಲಿಖಿತ ಪರವಾನಿಗೆಯನ್ನು ಪ್ರತಿಭಟನಾಕಾರರು ಪಡೆದುಕೊಂಡಿರಲಿಲ್ಲ ಎನ್ನುವುದನ್ನೂ ಪೊಲೀಸರು ತಿಳಿಸಿದ್ದಾರೆ.

ಅದಾಗ್ಯೂ, ಪೊಲೀಸರಿಂದ ಅನುಮತಿ ಪಡೆದಿರುವುದಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಹೇಳಿದ್ದಾರೆ. ಜೋಜು ಜಾರ್ಜ್ ಕುಡಿದ ಅಮಲಿನಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಶಿಯಾಸ್ ಆರೋಪಿಸಿದ್ದಾರೆ.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಸ್ಥ ಕೆ ಸುಧಾಕರನ್ ಅವರು ಜೋಜು ಜಾರ್ಜ್ ಅವರ ಕ್ರಮವನ್ನು ಖಂಡಿಸಿದ್ದು, ಜಾರ್ಜ್‌ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜೋಜು ಜಾರ್ಜ್, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿರುವುದು ಸ್ವೀಕಾರಾರ್ಹವಲ್ಲ, ಸ್ಥಳೀಯ ಕಾಂಗ್ರೆಸ್ ಮುಖಂಡರು ನಿಂದಿಸಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯನ್ನು “ನಾಚಿಕೆಗೇಡಿನ ಕೃತ್ಯ” ಎಂದು ಕರೆದ ಜಾರ್ಜ್, ತಮ್ಮ ವಿವಿಧ ಅಗತ್ಯಗಳಿಗಾಗಿ ತಮ್ಮ ಮನೆಗಳಿಂದ ಹೊರಬರುವ ಜನರ ಮೇಲೆ ಪರಿಣಾಮ ಬೀರುವುದರಿಂದ ಇಂತಹ ಆಂದೋಲನಗಳು ಮತ್ತೆ ಪುನರಾವರ್ತಿಸಬಾರದು. ನಾನು ಯಾವುದೇ ಪಕ್ಷದ ವಿರುದ್ಧ ಅಲ್ಲ. ಕೆಲವರು ಕಾಂಗ್ರೆಸ್‌ಗೆ ಮುಜುಗರ ತರಲು ಇಳಿದಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳು ಇದನ್ನು ಮಾಡಬಾರದು. ಇಂತಹ ಪ್ರತಿಭಟನೆಗಳಿಂದ ಜನರಿಗೆ ತೊಂದರೆಯೇ ಹೊರತು ಏರಿರುವ ಬೆಲೆ ಇಳಿಯುವುದಿಲ್ಲ ಎಂದು ಜೋಜು ಹೇಳಿದ್ದಾರೆ.

 ‘ನಾನು ಮಾಡಿದ್ದರಲ್ಲಿ ತಪ್ಪೇನೂ ಕಾಣುತ್ತಿಲ್ಲ. ಮಹಿಳಾ ಕಾರ್ಯಕರ್ತರೊಂದಿಗೆ ಮಾತನಾಡಿಲ್ಲ. ತಾನು ಕುಡಿದಿಲ್ಲವೆಂದು ಸಾಬೀತುಪಡಿಸಲು ತಪಾಸಣೆಗಾಗಿ ಆಸ್ಪತ್ರೆಗೆ ಹೋಗುತ್ತೇನೆ. ಐದು ವರ್ಷಗಳಿಂದ ಮದ್ಯಪಾನ ಮಾಡುತ್ತಿಲ್ಲ. ಈ ಹಿಂದೆ ಚೆನ್ನಾಗಿ ಕುಡಿಯುತ್ತಿದ್ದೆ. ಮಹಿಳೆಯರ ಜತೆ ಯಾವತ್ತೂ ಅಸಭ್ಯವಾಗಿ ವರ್ತಿಸಿಲ್ಲ. ಅವರ ಮೌಲ್ಯ ನನಗೆ ಗೊತ್ತು. ನಾನು ಮಾಡಿದ್ದಕ್ಕೆ ನಾನು ಕ್ಷಮೆ ಕೇಳುವುದಿಲ್ಲ ಎಂದು ಜೋಜು ಹೇಳಿದ್ದಾರೆ.

Tags: BJPCongress Partyಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ : ಅಖಿಲೇಶ್ ಯಾದವ್‌

Next Post

ನಾನು ಅಪ್ಪುಗಿಂತ 13 ವರ್ಷ ದೊಡ್ಡವನು , ಆದರೆ ಈಗ ನನ್ನ ಮಗುವನ್ನೇ ಕಳೆದುಕೊಂಡಷ್ಷು ನೋವಾಗಿದೆ : ಡಾ. ಶಿವರಾಜ್ ಕುಮಾರ್‌ ಭಾವುಕ

Related Posts

Loan amounts cannot be recovered from a pension account: High Court's significant ruling
Top Story

ಪಿಂಚಣಿ ಖಾತೆಯಿಂದ ಸಾಲದ ಹಣ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

by Shivakumar
November 15, 2026
0

ನವದೆಹಲಿ : ಸರ್ಕಾರಿ ನೌಕರರೊಬ್ಬರು (Government employee) ನಿವೃತ್ತರಾದ ಮೇಲೆ, ಅವರು ಬೇರೊಬ್ಬರ ಸಾಲಕ್ಕೆ (Loan) ಜಾಮೀನುದಾರರಾಗಿದ್ದರೆ (Guarantor), ಅಸಲು ಸಾಲಗಾರ ಹಣ ಪಾವತಿಸದಿದ್ದಾಗ ಬ್ಯಾಂಕ್‌ಗಳು ನೇರವಾಗಿ...

Read moreDetails
Possibility of another change to the 60-day advance railway ticket booking rule? Here are the full details.

60 ದಿನಗಳ ಮುಂಗಡ ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಮತ್ತೆ ಬದಲಾವಣೆ ಸಾಧ್ಯತೆ? ಇಲ್ಲಿದೆ ಸಂಪೂರ್ಣ ಮಾಹಿತಿ

November 15, 2026
Be Careful When Shopping Online: Here Are 8 Tactics Used to Deceive Consumers; Know About Them Before You Buy

ಆನ್‌ಲೈನ್ ಶಾಪಿಂಗ್ ಮಾಡುವಾಗ ಎಚ್ಚರ : ಗ್ರಾಹಕರನ್ನು ವಂಚಿಸುವ 8 ತಂತ್ರಗಳಿವು; ಖರೀದಿಗೂ ಮುನ್ನ ತಿಳಿದುಕೊಳ್ಳಿ

November 14, 2026
Microsoft services resume: Outlook and Teams available after a 36-hour global disruption

ಮೈಕ್ರೋಸಾಫ್ಟ್ ಸೇವೆಗಳು ಪುನರಾರಂಭ: 36 ಗಂಟೆಗಳ ಜಾಗತಿಕ ವ್ಯತ್ಯಯದ ಬಳಿಕ ಔಟ್‌ಲುಕ್ ಮತ್ತು ಟೀಮ್ಸ್ ಲಭ್ಯ

November 14, 2026
Mekedatu Dam: Tamil Nadu Congress President Manickam Tagore condemns CM D.K. Shivakumar's statement.

ಮೇಕೆದಾಟು ಅಣೆಕಟ್ಟು : ಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಟಾಗೋರ್ ಖಂಡನೆ

November 14, 2026
Next Post
ನಾನು ಅಪ್ಪುಗಿಂತ 13 ವರ್ಷ ದೊಡ್ಡವನು , ಆದರೆ ಈಗ  ನನ್ನ ಮಗುವನ್ನೇ ಕಳೆದುಕೊಂಡಷ್ಷು ನೋವಾಗಿದೆ : ಡಾ. ಶಿವರಾಜ್ ಕುಮಾರ್‌ ಭಾವುಕ

ನಾನು ಅಪ್ಪುಗಿಂತ 13 ವರ್ಷ ದೊಡ್ಡವನು , ಆದರೆ ಈಗ ನನ್ನ ಮಗುವನ್ನೇ ಕಳೆದುಕೊಂಡಷ್ಷು ನೋವಾಗಿದೆ : ಡಾ. ಶಿವರಾಜ್ ಕುಮಾರ್‌ ಭಾವುಕ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada