ದೇಶದ ಜನತೆ ಪಂಚರಾಜ್ಯ ಚುನಾವಣೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅದರಲ್ಲೂ ಉತ್ತರಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಜನರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.
ಯುಪಿಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ತವರು ಕ್ಷೇತ್ರ ಗೋರಖ್ಪುರ ನಗರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಮಧ್ಯೆ ಮಹತ್ತರ ಬೆಳವಣಿಗೆಯೊಂದರಲ್ಲಿ ಹಾಲಿ ಶಾಸಕನಾದ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಬಯಸಿದರೆ ಯೋಗಿ ವಿರುದ್ಧ ಅವರಿಗೆ ನಮ್ಮ ಪಕ್ಷದ ವತಿಯಿಂದ ಟಿಕೆಟ್ ನೀಡಲಾಗುವುದು ಎಂದು ಎಸ್.ಪಿ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿ ಆಂತರಿಕ ವಲಯದಲ್ಲಿ ಯೋಗಿ ಸ್ಪರ್ಧೆ ವಿಚಾರವಾಗಿ ಸ್ಥಳೀಯ ಬಿಜೆಪಿ ನಾಯಕರಲ್ಲಿ ತೀವ್ರ ಅಸಮಾಧಾನ ಇದೆ ಎಂದು ತಿಳಿದು ಬಂದಿದೆ. ಈ ವಿಚಾರವನ್ನ ತಿಳಿದ ಅಖಿಲೇಶ್ ನಾಲ್ಕು ಭಾರೀ ಶಾಸಕರಾಗಿರುವ ದಾಸ್ ರವರಿಗೆ ಟಿಕೆಟ್ ಕೊಡಲು ಮುಂದಾಗಿದ್ದಾರೆ.
ಈ ಹಿಂದೆ ಯೋಗಿ ಅನುಯಾಯಿಯಾಗಿದ್ದ ಅಗರ್ವಾಲ್ ನಂತರದ ದಿನಗಳಲ್ಲಿ ಯೋಗಿ ವಿರುದ್ಧ ಮುಸುಕಿನ ಗುದ್ದಾಟದಲ್ಲಿ ಇದ್ದಾರೆ. ಆ ನಂತರ ಕ್ರಮವಾಗಿ ತಮ್ಮದೇ ಸರ್ಕಾರದ ವಿರುದ್ಧ ಟೀಕಿಸಲು ಶುರು ಮಾಡಿದ್ದರು ಮತ್ತು ಯೋಗಿ ಸರ್ಕಾರವನ್ನು ಜಾತಿವಾದಿ ಸರ್ಕಾರ ಎಂದು ದೂಷಿಸಿದ್ದರು.
ಈ ಬೆಳೆವಣಿಗೆ ಬೆನ್ನಲ್ಲೇ ಅಗರ್ವಾಲ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಗೋರಖ್ಪುರ್ ಸಂಸದ ನಟ ರವಿ ಕಿಶನ್ ಆಗ್ರಹಿಸಿದ್ದರು. ಈ ಕುರಿತು ಸ್ಪಷ್ಟನೆ ನೀಡುವಂತೆ ಬಿಜೆಪಿ ಹೈ ಕಮಾಂಡ್ ನೋಟಿಸ್ ಜಾರಿ ಮಾಡಿತ್ತು.
ಈ ಹಿಂದೆ ಯೋಗಿ ಅಯೋಧ್ಯೆ, ಮಥುರಾದಿಂದ ಸ್ಪರ್ಧಿಸಬಹುದು ಎಂದು ಹೇಳಲಾಗಿತ್ತು. ಆದರೆ, 1967ರಿಂದಲು ಯೋಗಿ ತನ್ನ ಭದ್ರಕೋಟೆಯಾದ ಗೊರಖ್ಪುರದಿಂದ ಸ್ಪರ್ಧಿಸುವುದಾಗಿ ಬಿಜೆಪಿ ಹೈಕಮಾಂಡ್ ಘೋಷಿಸಿದೆ.
ಈಗಾಗಲ್ಲೇ ಕ್ಷೇತ್ರದಾದ್ಯಂತ ಅಗರ್ವಾಲ್ ತಮ್ಮ ಕೆಲಸಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದು ಅವರಿಗೆ ಟಿಕೆಟ್ ನೀಡಲು ಎಸ್ಪಿ ಸಿದ್ಧವಿದೆ. ಒಂದು ವೇಳೆ ಅಗರ್ವಾಲ್ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಲು ಮುಂದಾದರೆ ಸ್ಪರ್ಧೆ ಇನ್ನಷ್ಟು ರೋಚಕವಾಗಲಿದೆ. ಆದರೆ, ಈ ಕುರಿತು ಅಗರ್ವಾಲ್ ಇನ್ನೂ ಪ್ರತಿಕ್ರಿಯಿಸಿಲ್ಲ.