• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಜಯ್ ರಾಜ್ ಅಭಿನಯದ “ಮನ್ ರೇ ” ಚಿತ್ರ ನವೆಂಬರ್ ನಲ್ಲಿ ಆರಂಭ

ಪ್ರತಿಧ್ವನಿ by ಪ್ರತಿಧ್ವನಿ
October 17, 2023
in Top Story, ಸಿನಿಮಾ
0
ಅಜಯ್ ರಾಜ್ ಅಭಿನಯದ “ಮನ್ ರೇ ” ಚಿತ್ರ ನವೆಂಬರ್ ನಲ್ಲಿ ಆರಂಭ
Share on WhatsAppShare on FacebookShare on Telegram

ಕಳೆದ ತಿಂಗಳು ನಡೆದ ‘ಸೇನಾಪುರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಯದಲ್ಲೇ ಸದ್ಯದಲ್ಲೇ ಇನ್ನೊಂದು ಹೊಸ ಚಿತ್ರದ ಘೋಷಣೆ ಮಾಡುವುದಾಗಿ ನಿರ್ದೇಶಕ ಗುರು ಸಾವನ್‍ ಹೇಳಿಕೊಂಡಿದ್ದರು. ಅದರಂತೆ ಒಂದು ತಿಂಗಳ ಒಳಗೆ ಅವರು ಇನ್ನೊಂದು ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಅದೇ ‘ಮನ್ ರೇ’. ಚಿತ್ರದ ಘೋಷಣೆ ಅಧಿಕೃತವಾಗಿ ಸೋಮವಾರದಂದು ಆಗಿದ್ದು, ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ADVERTISEMENT

ಭೂಮಿಕಾ ಕ್ರಿಯೇಷನ್ಸ್ ನಡಿ ತಿಲಕ್‍ ರಾಜು ಮತ್ತು ರಾಜಣ್ಣ ನಿರ್ಮಿಸುತ್ತಿರುವ ‘ಮನ್‍ರೇ’ ಚಿತ್ರದಲ್ಲಿ ಅಜಯ್‍ ರಾಜ್‍ ನಾಯಕನಾಗಿ ಕಾಣಿಸಿಕೊಂಡರೆ, ಗಾಯಕಿ ಐಶ್ವರ್ಯ ರಂಗರಾಜನ್‍ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು, ‘ಅಮೃತವರ್ಷಿಣಿ’ ಖ್ಯಾತಿಯ ರಜನಿ, ಪ್ರಮೋದ್‍ ಶೆಟ್ಟಿ, ಸೂರ್ಯ ಸಿದ್ಧಾರ್ಥ್, ಅಮಿತ್ ರಾಜ್ ಮುಂತಾದವರು ನಟಿಸುತ್ತಿದ್ದಾರೆ.

‘ಮನ್‍ರೇ’ ಕುರಿತು ಮಾತನಾಡುವ ಗುರು ಸಾವನ್‍, ‘’ಮನ್‍ ರೇ’ ಎಂದರೆ ಮನಸ್ಸಿನ ಎಕ್ಸ್ ರೇ ಎಂದರ್ಥ. ಮನಸ್ಸಿನ ತೊಳಲಾಟವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಕಾನ್ಶಿಯಸ್‍ ಮತ್ತು ಸಬ್‍ ಕಾನ್ಶಿಯಸ್‍ ಮೈಂಡ್‍ ನಡುವಿನ ತೊಳಲಾಟವಿದು. ಸುಮಾರು 8-9 ವರ್ಷಗಳ ಹಿಂದೆಯೇ ಕಥೆ ಮಾಡಿಕೊಂಡಿದ್ದೆ. ಇದೊಂದು ಸೈಕಲಾಜಿಕಲ್‍ ಥ್ರಿಲ್ಲರ್ ಕಥೆ. ಸಂಪೂರ್ಣ ಕಾಲ್ಪನಿಕ’ ಎನ್ನುತ್ತಾರೆ ಅವರು. ಈ ಸಮಸ್ಯೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ ಎನ್ನುವ ಗುರು, ‘ನಾವು ಏನೋ ಕೆಲಸ ಮಾಡುತ್ತಿದ್ದರೆ, ಮನಸ್ಸು ಇನ್ನೇನೋ ಯೋಚಿಸುತ್ತಿರುತ್ತದೆ. ಇಲ್ಲಿ ನಾಯಕ ಆರವ್‍, ಭ್ರಮೆಯ ಲೋಕದಲ್ಲಿ ಬದುಕುತ್ತಿರುತ್ತಾನೆ. ಅವನು ವಾಸ್ತವಕ್ಕೆ ಹೇಗೆ ಬರುತ್ತಾನೆ.

ಅವನ ಸುತ್ತಲಿನವರು, ಅವನ ಈ ಸಮಸ್ಯೆಯಿಂದ ಎಷ್ಟೆಲ್ಲಾ ಕಷ್ಟಪಡುತ್ತಾರೆ ಎನ್ನುವುದನ್ನು ಈ ಚಿತ್ರದ ಮೂಲಕ ಪ್ರಯತ್ನ ಮಾಡುತ್ತಿದ್ದೇವೆ. ಪ್ರಮೋದ್‍ ಶೆಟ್ಟಿ ಇಲ್ಲಿ ಅರಸ್‍ ಎಂಬ ವೈದ್ಯರ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಪ್ರೀಪ್ರೊಡಕ್ಷನ್‍ ಕೆಲಸಗಳು ನಡೆಯುತ್ತಿವೆ. ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಿ ಮುಂದಿನ ವರ್ಷ ಮೇನಲ್ಲಿ ಬಿಡುಗಡೆ ಮಾಡುವ ಪ್ಲಾನ್‍ ಇದೆ’ ಎನ್ನುತ್ತಾರೆ. ಸಾಮಾನ್ಯವಾಗಿ ಸೈಕಲಾಜಿಕಲ್‍ ಥ್ರಿಲ್ಲರ್ ಎಂದರೆ ಕ್ರೈಮ್‍ ಅಥವಾ ಹಿಂಸೆ ಇರುತ್ತದೆ. ಆದರೆ, ಈ ಚಿತ್ರದಲ್ಲಿ ಅಂಥದ್ದು ಯಾವುದೂ ಇರುವುದಿಲ್ಲ ಎನ್ನುವ ಅಜಯ್‍ ರಾಜ್‍, ‘ಸರಳವಾಗಿ ಹೇಳಬೇಕು ಎಂದರೆ ಇದು ಮನಸ್ಸಿನೊಳಗೆ ನಡೆಯುವ ಸಂಘರ್ಷ. ಇಲ್ಲಿ ನಾಯಕನೇ ಸಮಸ್ಯೆ. ಅವನಿಂದ ಏನಾಗುತ್ತದೆ ಎಂಬುದು ಕಥೆ’ ಎಂದರು.

ರಜನಿಗೆ ಇಲ್ಲಿ ವಿಶೇಷ ಪಾತ್ರ ಸಿಕ್ಕಿದೆಯಂತೆ. ಅಷ್ಟೇ ಅಲ್ಲ, ಇದು ಅವರ ಕನಸಿನ ಪಾತ್ರವಂತೆ. ‘ನಿರ್ದೇಶಕರು ಬಂದು ಒಂದು ಸೀನ್‍ ಕೇಳಿ, ಆ ನಂತರ ಚಿತ್ರದಲ್ಲಿ ನಟಿಸುವ ಬಗ್ಗೆ ಯೋಚನೆ ಮಾಡಿ ಎಂದರು. ಬಹುಶಃ ಗ್ಲಾಮರಸ್‍ ಪಾತ್ರ ಇರಬಹುದು ಎಂದುಕೊಂಡೆ. ಆದರೆ, ಹಾಗೇನಿಲ್ಲ. ಇದೊಂದು ಸವಾಲಿನ ಪಾತ್ರ. ನಾನು ಇದುವರೆಗೂ ನೋಡಿರುವ ಚಿತ್ರಗಳಲ್ಲಿ ಇಂಥದ್ದೊಂದು ಪಾತ್ರ ಬಂದಿಲ್ಲ. ಹಾಗೆಯೇ ಇಂಥದ್ದೊಂದು ಪಾತ್ರ ಹೇಗೆ ಹೊಳೆಯಿತು ಎಂಬ ಆಶ್ಚರ್ಯವೂ ಆಯಿತು’ ಎಂದರು. ಇನ್ನು, ಮತ್ತೊಬ್ಬ ನಾಯಕಿಯಾಗಿರುವ ಐಶ್ವರ್ಯಾ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿಪಟ್ಟರು.


ನಿರ್ಮಾಪಕರಲ್ಲೊಬ್ಬರಾದ ತಿಲಕ್‍ ರಾಜು ಅನಿವಾಸಿ ಭಾರತೀಯರು. ಸದ್ಯ ಅಮೇರಿಕಾದಲ್ಲಿ ವಾಸಿಸುತ್ತಿರುವ ಅವರಿಗೆ ಚಿತ್ರ ಮಾಡುವುದು ಬಹುದಿನಗಳ ಕನಸಂತೆ. ಈ ಚಿತ್ರದ ಮೂಲಕ ಅದು ನನಸಾಗುತ್ತಿರುವುದಾಗಿ ಖುಷಿಪಟ್ಟರು. ‘ಮನ ರೇ‘ ಚಿತ್ರಕ್ಕೆ ಆದಿ ಅವರ ಛಾಯಾಗ್ರಹಣವಿದೆ. ಈಗಾಗಲೇ ಸಾಕಷ್ಟು ಜನಪ್ರಿಯ ಚಿತ್ರಗಳಿಗೆ ಹಾಡಿ, ಉತ್ತಮ ಗಾಯಕರೆನಿಸಿಕೊಂಡಿರುವ ಅನಿರುದ್ಧ್ ಶಾಸ್ತ್ರಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸುತ್ತಿದ್ದಾರೆ.

Tags: Ajay RajCinemaGuru SavanMan RayMoviePramodh ShettyTilak Raju
Previous Post

ಐಟಿ ದಾಳಿಯಲ್ಲಿ ಕೆಲವು ಡೈರಿ, ಪುಸ್ತಕಗಳು ಪತ್ತೆಯಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ: ಡಿ.ಕೆ. ಶಿವಕುಮಾರ್

Next Post

ಬಿಜೆಪಿ ರಾಜ್ಯವನ್ನು ದಿವಾಳಿ ಮಾಡಿತ್ತು: ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್

Related Posts

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?
Top Story

ಮಿತವ್ಯಯಕ್ಕೆ ಮೋದಿ ಹೊಸ ಹೆಜ್ಜೆ; ಪ್ರಧಾನಿ ಬೆಂಗಾವಲು ವಾಹನಗಳ ಸಂಖ್ಯೆ ಇಳಿಕೆ

by ಪ್ರತಿಧ್ವನಿ
May 13, 2026
0

ನವದೆಹಲಿ: ಇಂಧನ ಉಳಿತಾಯ ಮತ್ತು ಮಿತವ್ಯಯ ಕ್ರಮಗಳ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದು ಇದೀಗ ದೇಶಾದ್ಯಂತ ಚರ್ಚೆಗೆ...

Read moreDetails
ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

May 13, 2026
BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

May 13, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
Next Post
ಬಿಜೆಪಿ ರಾಜ್ಯವನ್ನು ದಿವಾಳಿ ಮಾಡಿತ್ತು: ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್

ಬಿಜೆಪಿ ರಾಜ್ಯವನ್ನು ದಿವಾಳಿ ಮಾಡಿತ್ತು: ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada