• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ನವೆಂಬರ್ 26ರಿಂದ ಏರ್ಟೆಲ್ ಮೊಬೈಲ್ ಕರೆ, ಡೇಟಾ ದರ ಶೇ.25ರಷ್ಟು ಏರಿಕೆ

ಪ್ರತಿಧ್ವನಿ by ಪ್ರತಿಧ್ವನಿ
November 22, 2021
in ಅಭಿಮತ, ದೇಶ
0
ನವೆಂಬರ್ 26ರಿಂದ ಏರ್ಟೆಲ್ ಮೊಬೈಲ್ ಕರೆ, ಡೇಟಾ ದರ ಶೇ.25ರಷ್ಟು ಏರಿಕೆ
Share on WhatsAppShare on FacebookShare on Telegram

ಜಗತ್ತಿನಲ್ಲೇ ಅತಿ ಕಡಮೆ ದರದ ಮೊಬೈಲ್ ಸೇವೆ ನೀಡುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಮೊಬೈಲ್ ಕಂಪನಿಗಳು ನಿಧಾನವಾಗಿ ದರ ಏರಿಕೆ ಮಾಡುತ್ತಿವೆ. ಇತ್ತೀಚೆಗಷ್ಟೇ ಶೇ.10ರಷ್ಟು ಆಜುಬಾಜಿನಲ್ಲಿ ದರ ಏರಿಕೆ ಮಾಡಿದ್ದವು ಈಗ ದೊಡ್ಡ ಪ್ರಮಾಣದಲ್ಲಿ ದರ ಏರಿಕೆಗೆ ಮುಂದಾಗಿವೆ.

ADVERTISEMENT

ಮೊದಲಿಗೆ ಏರ್ಟೆಲ್ ಕರೆ ಮತ್ತು ಡೇಟಾ ದರವನ್ನು ಶೇ.25ರಷ್ಟು ಏರಿಕೆ ಮಾಡುವುದಾಗಿ ಪ್ರಕಟಿಸಿದೆ. ನವೆಂಬಂರ್ 26 ರಿಂದ ಪರಿಷ್ಕೃತ ಜಾರಿಗೆ ಬರಲಿದೆ.

ಹೊಸ ದರ ಜಾರಿಯಾದಗ ಇದುವರೆಗೆ 75 ರುಪಾಯಿ 28 ದಿನಗಳ ವ್ಯಾಲಿಡಿಟಿ ದರವು 99 ರುಪಾಯಿಗೆ, 149 ರುಪಾಯಿಯ 28 ದಿನಗಳ ವ್ಯಾಲಿಟಿಡಿ ದರವು 179 ರುಪಾಯಿಗೆ ಏರಲಿದೆ. 229 ರುಪಾಯಿ ಪ್ಯಾಕ್ 265 ರುಪಾಯಿಗೂ 249 ರುಪಾಯಿ ಪ್ಯಾಕ್ 299 ರುಪಾಯಿಗೆ, 298 ರುಪಾಯಿ ಪ್ಯಾಕ್ 359ರುಪಾಯಿಗೇರಲಿದೆ. ಗರಿಷ್ಠ ದರದ 2498 ಪ್ಯಾಕ್ ದರವು 2999 ರುಪಾಯಿಗೆ ಏರಲಿದೆ.

ಮುಂಬರುವ ದಿನಗಳಲ್ಲಿ ಈ ದರಗಳು ಮತ್ತಷ್ಟು ಏರಿಕೆ ಆಗಲಿವೆ. ನವೆಂಬರ್ 22ರಂದು ಬೆಳಿಗ್ಗೆ ದರ ಏರಿಕೆ ಕುರಿತಂತೆ ಪ್ರಕಟಣೆ ಹೊರಟಿಸಿರುವ ಏರ್ಟೆಲ್ ಪ್ರತಿ ಬಳಕೆದಾರರನಿಂದ ಮಾಸಿಕ ಆದಾಯವು (ಎಆರ್ಪಿಯು) ಕನಿಷ್ಠ 200 ರುಪಾಯಿ ಇರಬೇಕು, ಅಂತಿಮವಾಗಿ ಇದು 300 ರುಪಾಯಿ ಮಟ್ಟಬೇಕು. ಆಗಾದಾಗ ಮಾತ್ರ ಮೊಬೈಲ್ ಉದ್ಯಮವು ಆರೋಗ್ಯದಾಯಕ ಆದಾಯಗಳಿಕೆ ಸಾಧ್ಯ ಎಂದು ಹೇಳಿಕೊಂಡಿದೆ.

ಪ್ರಸ್ತುತ ಏರ್ಟೆಲ್ ಗಳಿಸುತ್ತಿರುವ ಎಆರ್ಪಿಯು 153 ರುಪಾಯಿಗಳಿವೆ. ಅಂದರೆ ಪ್ರತಿ ಗ್ರಾಹಕನಿಂದ ಏರ್ಟೆಲ್ ಗೆ ದೊರೆಯುವ ಸರಾಸರಿ ಆದಾಯವು 153 ರುಪಾಯಿ. ರಿಲಯನ್ಸ್ ಜಿಯೋ 144 ರುಪಾಯಿ ಗಳಿಸುತ್ತಿದ್ದಾರೆ, ತೀವ್ರ ನಷ್ಟದಲ್ಲಿರುವ ವೊಡಾಫೋನ್ ಐಡಿಯಾ 109 ರುಪಾಯಿ ಗಳಿಸುತ್ತಿದೆ. ಅಂದರೆ, ಎಆರ್ಪಿಯು ಲೆಕ್ಕದಲ್ಲೇ ನೋಡುವುದಾದರೆ ಏರ್ಟೆಲ್ ಶೇ.100ರಷ್ಟು ದರ ಏರಿಕೆ ಮಾಡುತ್ತದೆ ಎಂಬುದನ್ನು ಸೂಚ್ಯವಾಗಿ ಹೇಳಿದೆ.

ಏರ್ಟೆಲ್ ಮೊಬೈಲ್ ಕರೆ ಮತ್ತು ಡೇಟಾ ದರ ಏರಿಕೆ ಮಾಡಿರುವುದರಿಂದ ರಿಲಯನ್ಸ್ ಜಿಯೋ ಕೂಡ ದರ ಏರಿಕೆ ಮಾಡುವ ನಿರೀಕ್ಷೆ ಇದೆ. ಆದರೆ, ಯಾವಾಗ ಏರಿಕೆ ಮಾಡುತ್ತದೆಂದು ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಬೇರೆ ಕಂಪನಿಗಳು ದರ ಏರಿಸಿದಾಗಲೆಲ್ಲ, ತಾನು ಕಡಮೆ ದರದ ಸೇವೆ ನೀಡಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ತಂತ್ರ ರಿಲಯನ್ಸ್ ಜಿಯೋದು. ಹೀಗಾಗಿ ದರ ಏರಿಕೆ ನಂತರ ಏರ್ಟೆಲ್ ಗ್ರಾಹಕರನ್ನು ಸೆಳೆಯಲು ದರ ಏರಿಕೆ ಮುಂದೂಡುವ ಸಾಧ್ಯತೆಯೂ ಇದೆ. ಏನೇ ಆದರೂ ರಿಲಯನ್ಸ್ ಜಿಯೋ ಕೂಡಾ ಮುಂದೆ ದರ ಏರಿಕೆ ಮಾಡಿಯೇ ತೀರುತ್ತದೆ. ವೊಡಾಫೋನ್ ಐಡಿಯಾ ಕೂಡಾ ದರ ಏರಿಕೆ ಮಾಡುವುದು ನಿಶ್ಛಿತ.

Tags: BJPCongress Partyಏರ್ಟೆಲ್ ಮೊಬೈಲ್ಡೇಟಾ ದರನರೇಂದ್ರ ಮೋದಿಬಿಜೆಪಿ
Previous Post

ಕೊರೋನಾ ನಿರ್ಬಂಧಗಳಿಗೆ ತತ್ತರಿಸಿದ ಯುರೋಪ್ ದೇಶಗಳು!

Next Post

ಜನಾಂದೋಲನಕ್ಕೆ ಮಂಡಿಯೂರಿದ ಸರ್ಕಾರ – ಇದು ಅಂತ್ಯವಲ್ಲ ಆರಂಭ

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
ದಳಪತಿ ವಿಜಯ್ ರ‍್ಯಾಲಿಯಲ್ಲಿ ಮತ್ತೊಂದು ದುರಂತ: ಹೀಟ್‌ಸ್ಟ್ರೋಕ್‌ದಿಂದ ವ್ಯಕ್ತಿ ಸಾ**

ದಳಪತಿ ವಿಜಯ್ ರ‍್ಯಾಲಿಯಲ್ಲಿ ಮತ್ತೊಂದು ದುರಂತ: ಹೀಟ್‌ಸ್ಟ್ರೋಕ್‌ದಿಂದ ವ್ಯಕ್ತಿ ಸಾ**

February 13, 2026
ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

February 13, 2026
Next Post
ಜನಾಂದೋಲನಕ್ಕೆ ಮಂಡಿಯೂರಿದ ಸರ್ಕಾರ – ಇದು ಅಂತ್ಯವಲ್ಲ ಆರಂಭ

ಜನಾಂದೋಲನಕ್ಕೆ ಮಂಡಿಯೂರಿದ ಸರ್ಕಾರ - ಇದು ಅಂತ್ಯವಲ್ಲ ಆರಂಭ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada