ದೀಪಾವಳಿ ಬಳಿಕ ಹಲವೆಡೆ ವಾಯುಮಾಲಿನ್ಯ ಹೆಚ್ಚಳ : ಕರೋನ ಪ್ರಕರಣಗಳ ಸಂಖ್ಯೆಯ ಹೆಚ್ಚಾಗುವ ಸಾಧ್ಯತೆ – AIIMS
ದೀಪಾವಳಿಯ ನಂತರ ದೆಹಲಿ ಮತ್ತು ದೇಶದ ಇತರ ಹಲವು ಭಾಗಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದಾಗಿ ಇದು ಕೋವಿಡ್ ಪ್ರಕರಣಗಳ ಸಂಖ್ಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ನಿರ್ದೇಶಕರು ಹೇಳಿದ್ದಾರೆ.
ಎಐಐಎಂಎಸ್‌ನ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಅವರು ಎಎನ್‌ಐಗೆ ಉಸಿರಾಟದ ಕಾಯಿಲೆಗಳ ಜೊತೆಗೆ, ಹೆಚ್ಚಿದ ಮಾಲಿನ್ಯದ ಮಟ್ಟವು ಕೋವಿಡ್ -19 ನ ತೀವ್ರತರವಾದ ಪ್ರಕರಣಗಳಿಗೆ ಕಾರಣವಾಗಬಹುದು ಎಂಬ ಆತಂಕಕಾರಿ ಸುದ್ದಿಯನ್ನು ಹೇಳಿದ್ದಾರೆ.
ಮಾಲಿನ್ಯವು ಉಸಿರಾಟದ ಮೇಲೆ ಮುಖ್ಯವಾಗಿ ಶ್ವಾಸಕೋಶದ ಕಾಯಿಲೆಗಳು, ಅಸ್ತಮಾ ಅಂತಹ ಕಾಯಿಲೆಯು ಉಲ್ಬಣಗೊಳ್ಳುವ ಜನರ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಮಾಲಿನ್ಯವು ಕೋವಿಡ್‌ನ ಹೆಚ್ಚು ತೀವ್ರವಾದ ಪ್ರಕರಣಗಳಿಗೆ ಕಾರಣವಾಗಬಹುದು. ಆದ್ದರಿಂದ ಇಂತಹ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕು ಏಕೆಂದರೆ ಇದು ಕೋವಿಡ್ ಮತ್ತು ಮಾಲಿನ್ಯ ಎರಡರಿಂದಲೂ ರಕ್ಷಣೆಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.