ಸೇನೆಯಲ್ಲಿ ಅಲ್ಪಾವಧಿ ನೇಮಕಾತಿ ಯೋಜನೆ ವಿರೋಧಿಸಿ ದೇಶಾದ್ಯಂತ ಯುವಕರು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಈ ಯೋಜನೆಯನ್ನ ವಿರೋಧಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಾನುವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನ ಹಮ್ಮಿಕೊಂಡಿತ್ತು.
ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಚಿನ್ ಪೈಲಟ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು ಈ ವೇಳೆ ಕೇಂದ್ರ ಸರ್ಕಾರದ ವಿರುದ್ದ ಘೋಷನೆಗಳನ್ನ ಕೂಗಿ ಕಾಂಗ್ರೆಸ್ ನಾಯಕರು ಆಕ್ರೋಶವನ್ನ ಹೊರಹಾಕಿದ್ದರು.
ಇನ್ನು ಪ್ರತಿಭಟನಾ ಸಬೆಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ ಗಾಂಧಿ ಯುವ ಪೀಳಿಗೆಗೆ ನಕಲಿ ರಾಷ್ಟ್ರೀಯವಾದಿಗಳು ಯಾರೆಂದು ತಿಳಿಯುತ್ತಿದೆ. ಯುವಕರೇ ನಿಮ್ಮಗಿಂತ ದೊಡ್ಡ ದೇಶಭಕ್ತರಿಲ್ಲ ದಯವಿಟ್ಟು ನಿಮ್ಮ ಕಣ್ಣು ತೆರೆದು ಒಮ್ಮೆ ನೋಡಿ ನಕಲಿ ರಾಷ್ಟ್ರೀವಾದಿಗಳು ಹಾಗು ನಕಲಿ ದೇಶಭಕ್ತರು ಯಾರೆಂದು ನಿಮ್ಮಗೆ ತಿಳಿಯಲಿದೆ. ಶಾಂತಿಯುತವಾಗಿ ಪ್ರತಿಭಟಿಸುವವರೊಂದಿಗೆ ಕಾಂಗ್ರೆಸ್ ಸದಾ ಇರುತ್ತದೆ ಎಂದು ಹೇಳಿದ್ದಾರೆ.

ಇನ್ನು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಈಗಾಗಲೇ ದೇಶದ ಯುವಕರು ನಿರುದಗಯೋಗದ ಸಮಸ್ಯೆಯಿಂದ ಬಳಲುತ್ತಿದ್ದು ಅಗ್ನಿಫತ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಯುವಕರನ್ನು ನಿರುದ್ಯೋಗದ ಕೂಪಕ್ಕೆ ತಳ್ಳಬೇಡಿ.
ದಯವಿಟ್ಟು ಮೊಡುತನ್ನವನ್ನ ಬಿಟ್ಟು ಯೋಜನೆಯನ್ನು ಹಿಂಪಡೆಯಿರಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೃಷಿ ಕಾಯ್ದೆ ವಿರುದ್ದ ಹೋರಾಟ ನಡೆಸಿದ ಮಾದರಿಯಲ್ಲೇ ಅಗ್ನಿಫತ್ ವಿರುದ್ದ ಹೋರಾಡ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
