ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ಅಗ್ನಿಪಥ್ ಯೋಜನೆಯ ವಿರುದ್ದ ದೇಶಾದ್ಯಂತ ಪ್ರತಿಭಟನೆಯ ಕಿಚ್ಚು ಜೋರಾಗಿ ವ್ಯಾಪಿಸಿದ್ದು ಬಿಇಹಾರಲ್ಲಿ ತುಸು ಹೆಚ್ಚು ಎಂದು ಹೇಳಬಹುದು.
ಪ್ರತಿಭಟನೆ ಈಗ ಆಡಳಿತ ಮೈತ್ರಿ ಪಕ್ಷಗಳಾದ ಸಂಯುಕ್ತ ಜನತಾದಳ ಹಾಗು ಬಿಜೆಪಿ ನಡುವಿನ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿ ಕೊಟ್ಟಿದೆ. ಈ ನಡುವೆ ಬಿಜೆಪಿ ನಾಯಕರ ಮನೆ ಮೇಲಿನ ದಾಳಿಗೆ ನಿತೀಶ್ ಕುಮಾರ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೇಸರಿ ಪಾಳಯ ಆರೋಪಿಸಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ರಾಜ್ಯದಲ್ಲಿ ಪ್ರತಿಭಟನೆಳು ದಿನದಿನದಿಂದ ಜೋರಾಗುತ್ತಿದ್ದು ಇದನ್ನು ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ. ಇಲ್ಲಿಯವರೆಗೂ ಪಕ್ಷದ ಮುಖಂಡರು ಹಾಗು ಸರ್ಕಾರಿ ಆಸ್ತಿಪಾಸ್ತಿಗಳೆಲ್ಲವು ಅಪಾರ ಹಾನಿಗೊಳಗಾಗಿದ್ದು ಅಸಮರ್ಥ ರಾಜ್ಯ ಸರ್ಕಾರದಿಂದಿ ಇಷ್ಟೆಲ್ಲ ಆಗಿದೆ ಎಂದು ಕಿಡಿಕಾರಿದ್ದಾರೆ.
ಮುಂದುವರೆದು, ಇದು ಬಿಜೆಪಿ ನಾಯಕರ ಮೇಲೆ ನಿತೀಶ್ ಕುಮಾರ್ ಮಾಡಿಸುತ್ತಿರುವ ಉದ್ದೇಶಿತ ದಾಳಿ ಎಂದು ಆರೋಪಿಸಿದ್ದಾರೆ. ನನ್ನ ಮನೆ ಮೇಲೆ ಪ್ರತಿಭಟನಕಾರರು ದಾಳಿ ಮಾಡಿದ್ದಾಗ ನಾನು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದೆವು ಅಗ ಸ್ಥಳೀಯಾಡಳಿತ ಅನುಮತಿಸಿದರೆ ಮಾತ್ರ ಬರುವುದಾಗಿ ಹೇಳಿದ್ದರು ಮತ್ತು ಅಧಿಕಾರ ದರ್ಪದಿಂದ ಜನರನ್ನು ಗುರಿಯಾಗಿಸುವುದು ಮತ್ತು ಪೊಲೀಸರನ್ನು ಮೂಕ ಪ್ರೇಕ್ಷಕರಂತೆ ಮಾಡಿರುವುದು ಸರಿಯಿಲ್ಲ ಎಂದಿದ್ದಾರೆ.

ನಾವು ಆಡಳಿತ ಪಕ್ಷದ ಒಂದು ಭಾಗವಾಗಿದ್ದೇವೆ ಆ ರೀತಿ ಘಟನೆ ನಡೆದಾಗ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಬಿಹಾರದಲ್ಲಿ ಮಾತ್ರ ಈ ರೀತಿಯ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ನಾನು ಈ ಗಟನೆಯನ್ನ ತೀವ್ರವಾಗಿ ಖಂಡಿಸುತ್ತೇವೆ ಇದೇ ರೀತಿ ಮುಂದುವರಿದೆರ ಚೆನ್ನಾಗಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಜೈಸ್ವಾಲ್ ಹೇಳಿಕೆ ಪ್ರತಿಕ್ರಿಯಿಸಿರುವ ಜೆಡಿಯು ರಾಷ್ಟ್ರೀಯ ಕಾರ್ಯದರ್ಶಿ ಲಲನ್ ಸಿಂಗ್ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯನ್ನ ವಿರೋಧಿಸಿ ದೇಶಾದ್ಯಂತ ಯುವಕರು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಯುವಕರು ತಮ್ಮ ಭವಿಷ್ಯದ ಚಿಂತೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂಸೆ ಯಾವುದಕ್ಕು ದಾರಿಯಲ್ಲ ನಾವು ಹಿಂಸೆಯನ್ನ ಖಂಡಿಸುತ್ತೇವೆ. ಬಿಜೆಪಿಯು ಯುವಕರ ಚಿಂತೆ ದೂರ ಮಾಡಬೇಕೆ ಹೊರತು ಆಡಳಿತ ಪಕ್ಷವನ್ನ ದೂಷಿಸುವುದಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅಲ್ಲ ಬಿಜೆಪಿ ನಾಯಕರ ಮನೆ ಮೇಲೆ ದಾಳಿಯಾಗುವುದಕ್ಕು ಆಡಳಿತಕ್ಕು ಯಾವ ರೀತಿ ಸಂಬಂದವಿಲ್ಲ. ಇನ್ನು ಇದೇ ರೀತಿಯ ಪ್ರತಿಬಟನೆಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಸಹ ನಡೆಯುತ್ತಿದೆ ಇದಕ್ಕೆ ಯಾಕೆ ಸಂಜಯ್ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.