ಭಾರತೀಯರ (Indians) ಪಾಲಿನ ಅದ್ರಲ್ಲೂ, ಮಹಿಳೆಯರ ಪಾಲಿನ ಅತ್ಯಂತ ಪ್ರಿಯವಾದ ಚಿನ್ನ (Gold) ದಿನೇ ದಿನೇ ಗಗನ ಕುಸುಮವಾಗುತ್ತಲೇ ಇದೆ. ಈಗ ಮತ್ತೆ ಚಿನ್ನದ ದರ ಏರಿಕೆಯಾಗಿದೆ. ಹೌದು ಪ್ರತಿ ನಿತ್ಯ ಚಿನ್ನ ಬೆಳ್ಳಿ (Gold – silver) ದರದಲ್ಲಿ ಏರಿಳಿತಗಳು ಸಂಭವಿಸುತ್ತಲೇ ಇದ್ದು, ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ.

ಈಗಿನ ಪರಿಸ್ಥಿತಿ ಗಮನಿಸಿದರೆ ಸದ್ಯ ಚಿನ್ನದ ದರ ಇಳಿಕೆ ಅಸಾಧ್ಯ ಎನ್ನಬಹುದು. ಹೀಗೆ ಕಳೆದ ಕೆಲವು ದಿನಗಳಿಂದ ಏರುತ್ತಲೇ ಸಾಗಿದ್ದ ಚಿನ್ನದ ಬೆಲೆ ನಿನ್ನೆ (ಫೆ 21) ಪ್ರತಿ ಗ್ರಾಂ ನಲ್ಲಿ 45 ರೂ. ಇಳಿಕೆ ಕಂಡಿತ್ತು. ಇದನ್ನು ಕಂಡ ಗ್ರಾಹಕರು ಇನ್ನೇನು ಚಿನ್ನದ ದರ ಇಳಿಮುಖವಾಗಿ ಸಾಗಬಹುದು ಎಂದುಕೊಂಡಿದ್ದರು. ಆದರೆ ಇಂದು ಮತ್ತೆ ಪ್ರತಿ ಗ್ರಾಮ್ಗೆ 20 ರೂ. ಏರಿಕೆಯಾಗಿದೆ.

ಅಲ್ಲಿಗೆ ಪ್ರತಿ 10 ಗ್ರಾಂ ಗೆ 200 ರೂ. ಏರಿಕೆ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಸದ್ಯ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 87,777 ರೂ ಆಗಿದೆ. ಇನ್ನು 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 80,450 ರೂ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,700 ರೂ ಆಗಿದೆ.