ರಣರೋಚಕ ಟಿ20 ವಿಶ್ವಕಪ್ನ (T20 world cup) ಫೈನಲ್ ಪಂದ್ಯವನ್ನ ಟೀಮ್ ಇಂಡಿಯಾ (Team India) ಗೆದ್ದು ಬೀಗಿದ್ದು, ಚಾಂಪಿಯನ್ ಆಗಿ ಹೊರಹೊಮ್ಮಿದೆ. ಲಾಸ್ಟ್ ಬಾಲ್ವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South africa) ವಿರುದ್ದ ಭಾರತ ತಂಡ 7 ರನ್ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 17 ವರ್ಷಗಳ ಬಳಿಕ ಎರಡನೇ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡು, ಸತತ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿದೆ.
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ, ಕೊಹ್ಲಿ (Kholi) ಅಕ್ಷರ್ ಪಟೇಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 176 ರನ್ಗಳನ್ನ ಗಳಿಸಿತು. 177 ರನ್ಗಳ ಬೃಹತ್ ಗುರಿಯನ್ನ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ ಟಫ್ ಫೈಟ್ ಕೊಡ್ತು. ಆದ್ರೆ ಕೊನೆಯವರೆಗೂ ಟೈಟ್ ಬೌಲಿಂಗ್ ಮಾಡಿದ ಟೀಮ್ ಇಂಡಿಯಾ ಹರಿಣಗಳನ್ನ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯ್ತು.
20 ಓವರ್ಗಳ 8 ವಿಕೆಟ್ ನಷ್ಟಕ್ಕೆ 169 ರನ್ಗಳಿಸಲಷ್ಟೇ ಸಾಧ್ಯವಾಯ್ತು. ಆ ಮೂಲಕ 7 ರನ್ಗಳಿಂದ ಭಾರತ ಜಯಸಾಧಿಸಿದಂತಾಯ್ತು. ಟೀಮ್ ಇಂಡಿಯಾ ಗೆಲ್ತಿದ್ದಂತೆ ಆಟಗಾರರು ಕುಣಿದು ಕುಪ್ಪಳಿಸಿದ್ರು. ತ್ರಿವರ್ಣ ಧ್ವಜ ಹಾರಿಸಿದ್ರು. ಅಲ್ಲದೇ ಕೆಲವು ಪ್ಲೇಯರ್ಸ್ಗಳ ಕಣ್ಣೀರು ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು.