ಪ್ರಜ್ವಲ್ ರೇವಣ್ಣ (Prajwal Revanna) ಪಾಸ್ ಪೋರ್ಟ್ ರದ್ದು ಮಾಡಲು ಭಾರತೀಯ ವಿದೇಶಾಂಗ ಇಲಾಖೆಗೆ ಎಸ್ಐಟಿ (SIT) ಪತ್ರ ಬರೆದಿದೆ. ತತಕ್ಷಣವೇ ರದ್ದು ಮಾಡುವಂತೆ ಎಸ್ಐಟಿ ಮನವಿ ಮಾಡಿದೆ. ಲುಕ್ ಔಟ್ ನೋಟೀಸ್ (Look out notice),ಬ್ಲೂ ಕಾರ್ನರ್ ನೋಟೀಸ್ (Blue Corner Notice) ಟ್ಯಾಗ್ ಮಾಡಿ ಪತ್ರ ಬರೆದಿದೆ. ಮೂರು ಅತ್ಯಾಚಾರ ಪ್ರಕರಣದ ಮಾಹಿತಿ ನೀಡಿದೆ. ಯಾವ ದೇಶದಲ್ಲಿ ಇದ್ದಾರೆ ಅಂತ ತಿಳಿಯುವಂತೆ ಮನವಿ ಮಾಡಿದೆ.
![](https://pratidhvani.com/wp-content/uploads/2024/05/HD-Revanna.webp)
ಕೆಆರ್ ನಗರದ (KR Nagar) ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ (HD Revanna) ಮತ್ತೆ ಸಂಕಷ್ಟ ಶುರುವಾಗುವ ಲಕ್ಷಣ ಕಾಣಿಸ್ತಿದೆ. ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ಜಾಮೀನು ಆದೇಶ ಪ್ರಶ್ನಿಸಿ ಹೈಕೋರ್ಟ್ (High Court) ಮೆಟ್ಟಿಲೇರಲು ಎಸ್ಐಟಿ ಚಿಂತನೆ ನಡೆಸಿದೆ. ಈ ಬಗ್ಗೆ ಎಸ್ಐಟಿ ಹಿರಿಯ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ.
ಇನ್ನು ಪೆನ್ಡ್ರೈವ್(Pen Drive) ಹಂಚಿಕೆ ಪ್ರಕರಣದಲ್ಲಿ ಲಾಕ್ ಆಗಿರುವ ವಕೀಲ ಹಾಗೂ ಬಿಜೆಪಿ (BJP) ಮುಖಂಡ ದೇವರಾಜೇಗೌಡಗೆ (Devarajegowda) ಸದ್ಯಕ್ಕೆ ಜೈಲುವಾಸವೇ ಫಿಕ್ಸ್ ಆದಂತಾಗಿದೆ. ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ನಿನ್ನೆ ದೇವರಾಜೇಗೌಡರನ್ನು ಎಸ್ಐಟಿ ತಂಡ ಕೋರ್ಟ್ಗೆ ಕರೆತಂದಿತ್ತು. ಹಾಸನದ(Hassan) ಐದನೇ ಅಧಿಕ ಸಿವಿಲ್ ನ್ಯಾಯಾಲಯದ ಎದುರು ಹಾಜರುಪಡಿಸಿತ್ತು. ಈ ವೇಳೆ ಮತ್ತೆ ದೇವರಾಜೇಗೌಡರನ್ನ ಎಸ್ಐಟಿ ಕಸ್ಟಡಿಗೆ(Custody) ಕೇಳಿಲ್ಲ. ಹೀಗಾಗಿ ಮೇ 24 ರವರೆಗೆ ದೇವರಾಜೇಗೌಡರಿಗೆ ನ್ಯಾಯಾಂಗ (Court) ಬಂಧನ ವಿಧಿಸಲಾಗಿದೆ.