ಡೆಹ್ರಾಡೂನ್:ಕೆಲವು ದಿನಗಳ ಹಿಂದೆ ಭೀಕರ ಕಾರು ಅಪಘಾತದಲ್ಲಿ(Dehradun Car Accident) ಆರು ವಿದ್ಯಾರ್ಥಿಗಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಆದರೆ ಈ ಘಟನೆಗೆ ಕಾರಣ ಏನೆಂಬುದು ನಿಗೂಢವಾಗಿತ್ತು. ಇದೀಗ ಈ ಭೀಕರ ದುರ್ಘಟನೆಗೆ ಸಂಬಂಧಿಸಿದಂತೆ ಸ್ಫೋಟಕ ವಿಚಾರಗಳು ಬಯಲಾಗಿದ್ದು, ಅಪಘಾತಕ್ಕೂ ಮುನ್ನ ವಿದ್ಯಾರ್ಥಿಗಳು ಭರ್ಜರಿ ಪಾರ್ಟಿ ಮಾಡಿದ್ದರು.
#देहरादून मे 2 दिन पहले हुए हादसे मे 6 युवक-युवतियो की मौत हो गई थी..अब उसी दिन युवक-युवतियो की शराब पार्टी का वीडियो सोशल मीडिया पर वायरल हो रहा है..जिसमें देखा जा सकता है किस तरह नशे में धूत है..#viralvideo #Uttarakhand pic.twitter.com/iatEWDlEI9
— Vinit Tyagi(Journalist) (@tyagivinit7) November 14, 2024
ಬಳಿಕ ಐಷಾರಾಮಿ ಕಾರಿನಲ್ಲಿ ರೇಸಿಂಗ್ ಮಾಡಿದ್ದರು ಎಂಬ ವಿಚಾರ ಬಯಲಾಗಿದೆ.ಇನ್ನು ಘಟನೆಗೆ ಸಂಬಂಧಿಸಿದ ಭೀಕರ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಾರು ನಜ್ಜುಗುಜ್ಜಾಗಿರುವುದು, ವಿದ್ಯಾರ್ಥಿಗಳ ಮೃತದೇಹ ಗುರುತೇ ಸಿಗದಷ್ಟು ನಜ್ಜುಗುಜ್ಜಾಗಿರುವುದನ್ನು ಕಾಣಬಹುದಾಗಿದೆ. ಮತ್ತೊಂದು ಸಿಸಿಟಿವಿಯಲ್ಲಿ ವಿದ್ಯಾರ್ಥಿಗಳು ಅತ್ಯಂತ ವೇಗವಾಗಿ ಕಾರು ಚಲಾಯಿಸುತ್ತಿರುವ ದೃಶ್ಯ ಸೆರೆಯಾಗಿದೆ.
In a race to overtake a BMW car 6 youngsters lost their life in a Shocking #RoadAccident in #Dehradun
— 𝕮𝖍𝖆𝖗𝖆𝖓y𝖆 (@Charanya2604) November 15, 2024
The accident was so horrible that one's head found at 40 mtrs away from the spot😱#DehradunAccident #DehradunCarAccident #Dehradunroadaccident https://t.co/s334x1tqTA
ಸದ್ಯ ಈ ಅಪಘಾತದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಂದೊಂದು ಫೋಟೋಗಳೂ ಬೆಚ್ಚಿ ಬೀಳಿಸುತ್ತಿದೆ. ಘಟನಾ ಸ್ಥಳದಲ್ಲಿ ಯುವತಿಯೊಬ್ಬಳ ದೇಹ ಒಂದು ಕಡೆ ಇದ್ದು, 40 ಅಡಿ ದೂರದಲ್ಲಿ ಆಕೆಯ ಛಿದ್ರಗೊಂಡಿರುವ ತಲೆ ಪತ್ತೆಯಾಗಿದೆ. ಇದರಲ್ಲೇ ಅಪಘಾತದ ವೇಳೆ ಕಾರ್‌ನ ವೇಗ ಎಷ್ಟಿತ್ತು ಅನ್ನೋದನ್ನು ಊಹಿಸಬಹುದು. ಮಾಹಿತಿ ಪ್ರಕಾರ, ಬಿಎಂಡಬ್ಲ್ಯೂ ಕಾರ್ ಅನ್ನು ಹಿಂದಿಕ್ಕುವ ಭರದಲ್ಲಿ ಅತೀ ವೇಗದಲ್ಲಿ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಈ ಅಪಘಾತದಲ್ಲಿ ಸಾವನ್ನಪ್ಪಿದ ಯುವತಿಯರಲ್ಲಿ ಗುಣೀತ್ ಡಿ/ಓ ತೇಜ್ ಪ್ರಕಾಶ್ ಸಿಂಗ್ (19), ನವ್ಯಾ ಗೋಯಲ್ ಡಿ/ಓ ಪಲ್ಲವ್ ಗೋಯಲ್ (23) ಮತ್ತು ಕಾಮಾಕ್ಷಿ ಡಿ/ಓ ತುಷಾರ್ ಸಿಂಘಾಲ್ (20) ಸೇರಿದ್ದಾರೆ.ಈ ಮೂವರು ಯುವತಿಯರು ಡೆಹ್ರಾಡೂನ್ ನಗರದ ವಿವಿಧ ಪ್ರದೇಶಗಳ ನಿವಾಸಿಗಳಾಗಿದ್ದರು. ಇದಲ್ಲದೆ, ಸಾವನ್ನಪ್ಪಿದ ಯುವಕರನ್ನು ಕುನಾಲ್ ಕುಕ್ರೇಜಾ ಎಸ್/ಓ ಜಸ್ವೀರ್ ಕುಕ್ರೇಜಾ (23), ಅತುಲ್ ಅಗರ್ವಾಲ್ ಎಸ್/ಓ ಸುನಿಲ್ ಅಗರ್ವಾಲ್ (24) ಮತ್ತು ರಿಷಬ್ ಜೈನ್ ಎಸ್/ಓ ತರುಣ್ ಜೈನ್ (24) ಎಂದು ಗುರುತಿಸಲಾಗಿದೆ.ಅವರಲ್ಲಿ, ಕುನಾಲ್ ಕುಕ್ರೇಜಾ ಹಿಮಾಚಲದ ಚಂಬಾ ನಿವಾಸಿಯಾಗಿದ್ದು, ಉಳಿದ ಜನರು ಡೆಹ್ರಾಡೂನ್ ನಿವಾಸಿಗಳಾಗಿದ್ದರು.
ಇದಲ್ಲದೇ ಗಂಭೀರ ಗಾಯಗೊಂಡಿರುವ ಯುವಕನನ್ನು ಸಿದ್ಧೇಶ್ ಅಗರ್ವಾಲ್ ಎಸ್/ಓ ವಿಪಿನ್ ಕುಮಾರ್ ಅಗರ್ವಾಲ್ (25) ಎಂದು ಗುರುತಿಸಲಾಗಿದೆ. ಆತ ಡೆಹ್ರಾಡೂನ್‌ನ ಏಷಿಯಾನಾ ಶೋರೂಮ್ ಮಧುಬನ್ ಮುಂಭಾಗದ ರಾಜ್‌ಪುರ ರಸ್ತೆಯ ನಿವಾಸಿಯಾಗಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಆತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.