BPL ಕಾರ್ಡ್ ರದ್ದು ಬೆನ್ನಲ್ಲೇ ಕಾರ್ಮಿಕ ಕಾರ್ಡ್ ಹೊಂದಿದ್ದವರಿಗೂ ಶಾಕ್ ಎದುರಾಗಿದೆ. ರಾಜ್ಯದಲ್ಲಿ 2.46 ಲಕ್ಷ ಕಾರ್ಮಿಕರ ಕಾರ್ಡ್ ಅಮಾನತು ಮಾಡಲಾಗಿದ್ದು, 2 ಲಕ್ಷದ 46 ಸಾವಿರದ 951 ಕಾರ್ಡ್ ಅನ್ನು ನಕಲಿ ಎಂದು ಕಾರ್ಮಿಕ ಇಲಾಖೆ ಲಿಸ್ಟ್ ಮಾಡಿದೆ.
ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 38 ಲಕ್ಷದ 42 ಸಾವಿರ ಕಾರ್ಮಿಕರು ನೋಂದಣಿ ಆಗಿದ್ದಾರೆ. ಈ ಪೈಕಿ 2 ಲಕ್ಷದ 46 ಸಾವಿರ ಕಾರ್ಡ್ ಕ್ಯಾನ್ಸಲ್ ಮಾಡಲಾಗಿದೆ. ಈ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದು, ಕಾರ್ಮಿಕರಲ್ಲದೆ ಇರುವವರ ಕಾರ್ಡ್ ರದ್ದಾಗಿದೆ ಎಂದಿದ್ದಾರೆ.
ಕಾರ್ಮಿಕರ ಕಾರ್ಡ್ ಪರಿಶೀಲನೆಗೆ ಅಂಬೇಡ್ಕರ್ ಸೇವಾ ಕೇಂದ್ರ ಮಾಡಿದ್ದೇವೆ. ಯಾರು ಅರ್ಜಿ ಹಾಕ್ತಾರೆ ಅವರ ಮನೆಗೆ ಹೋಗ್ತೇವೆ. ನೇರ ಪರಿಶೀಲನೆ ಮಾಡಿ ಕಾರ್ಮಿಕ ಕಾರ್ಡ್ ಕೊಡ್ತೇವೆ. ಪರಿಶೀಲನೆ ಮಾಡೋಕೆ ಅಂಬೇಡ್ಕರ್ ಸೇವಾ ಕೇಂದ್ರ ತಂದಿದ್ದೇವೆ. ಅಸಲಿ ಕಾರ್ಮಿಕರಾಗಿದ್ದರೆ ಕಾರ್ಡ್ ಕ್ಯಾನ್ಸಲ್ ಮಾಡಲ್ಲ ಎಂದಿದ್ದಾರೆ.