ಬೆಂಗಳೂರು : ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟು ಚಾಮರಾಜನಗರ ಹಾಗೂ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡರಲ್ಲೂ ಸೋತಿರುವ ಮಾಜಿ ಸಚಿವ ವಿ. ಸೋಮಣ್ಣ ಹೈಕಮಾಂಡ್ ಮೇಲೆ ಫುಲ್ ಗರಂ ಆಗಿದ್ದಾರೆ ಎನ್ನಲಾಗಿದೆ. ಗೋವಿಂದರಾಜನಗರ ಕ್ಷೇತ್ರವನ್ನು ನನ್ನಿಂದ ಕಸಿದುಕೊಂಡು ಹೈಕಮಾಂಡ್ ತನ್ನನ್ನು ನಿರುದ್ಯೋಗಿಯಾಗಿಸಿತು ಎಂದು ಸೋಮಣ್ಣ ಕೈ ಕೈ ಹೊಸೆದುಕೊಳ್ತಿದ್ದಾರೆ ಎನ್ನಲಾಗಿದೆ.
ಎರಡೂ ಕ್ಷೇತ್ರಗಳಲ್ಲಿ ಸೋಲನ್ನನ್ನುಭವಿಸಿದ ಬಗ್ಗೆ ನಿನ್ನೆ ಯಾವುದೇ ಹೇಳಿಕೆ ನೀಡದ ವಿ. ಸೋಮಣ್ಣ ಇಂದು ಮೌನ ಮುರಿದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವರಿಷ್ಠರ ಮಾತು ಕೇಳಿ ಚಿನ್ನದಂತ ಕ್ಷೇತ್ರ ಬಿಟ್ಟುಕೊಟ್ಟೆ. ಈಗ ನಿರುದ್ಯೋಗಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಕ್ಷೇತ್ರಕ್ಕಿಂತ ಪಕ್ಷ ದೊಡ್ಡದೆಂದು ಹೀಗೆ ಮಾಡಿದೆ. ಕೇವಲ ನಾನಲ್ಲ, ಪಕ್ಷಕ್ಕೂ ದೊಡ್ಡ ಮಟ್ಟದ ಸೋಲಾಗಿದೆ. ಇದು ನಮಗೆಲ್ಲ ಒಂದು ಎಚ್ಚರಿಕೆ ಗಂಟೆ ಎಂದಿದ್ದಾರೆ.