ಐತಿಹಾಸಿಕ ಜನಪಥ್ ರಸ್ತೆಗೆ ಕರ್ತವ್ಯ ಪಥ ಎಂದು ಹೆಸರು ಬದಲಿಸಿದ ಕೇಂದ್ರ ಸರಕಾರ ಇದೀಗ ರಾಜ್ ಭವನದ ಹೆಸರು ಬದಲಾವಣೆಗೆ ಮುಂದಾಗಿದೆ.
ಬ್ರಿಟಿಷ್ ಕಾಲದ ಪ್ರಮುಖ ಐತಿಹಾಸಿಕ ಹೆಸರುಗಳ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರಕಾರ ಇದೀಗ ರಾಜ್ ಭವನವನ್ನು ಸೇವಾ ಭವನ್ ಎಂದು ಮರುನಾಮಕರಣ ಮಾಡಲು ಮುಂದಾಗಿದೆ.

ಕೇಂದ್ರ ಸರಕಾರ ಹಲವಾರು ಪ್ರತಿಷ್ಠಿತ ಜಾಗ ಹಾಗೂ ಕಟ್ಟಡಗಳ ಹೆಸರು ಮರುನಾಮಕರಣ ಮಾಡಲು ಉದ್ದೇಶಿಸಿದ್ದು, ಒಂದರ ನಂತರ ಒಂದರಂತೆ ಕೈಗೆತ್ತಿಕೊಳ್ಳಲಿದೆ ಎಂದು ಹೇಳಲಾಗಿದೆ. ಇದೀಗ ರಾಷ್ಟ್ರಪತಿ ಭವನಕ್ಕೆ ಮರು ನಾಮಕರಣ ಮಾಡಲು ಚಿಂತನೆ ನಡೆದಿದ್ದು, ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಹೊರಬೀಳಲಿದೆ ಎಂದು ಹೇಳಲಾಗಿದೆ.






